Ad imageAd image

ವಿಶೇಷ ಸಂದರ್ಶನ: ಡಿನ್ನರ್ ರಾಜಕೀಯದ ಬಗ್ಗೆ ಶಾಸಕ ಆಸಿಫ್ ಸೆಟ್ ಹೇಳೋದೇನು?

ratnakar
ವಿಶೇಷ ಸಂದರ್ಶನ: ಡಿನ್ನರ್ ರಾಜಕೀಯದ ಬಗ್ಗೆ ಶಾಸಕ  ಆಸಿಫ್ ಸೆಟ್ ಹೇಳೋದೇನು?
WhatsApp Group Join Now
Telegram Group Join Now

ರಾಜ್ಯದಲ್ಲಿ ಡಿನ್ನರ್ ಪಾರ್ಟಿ ರಾಜಕಾರಣ ಜೋರಾಗಿ ನಡೆಯುತ್ತಿದೆ. ರಾಜ್ಯ ಸರಕಾರದ ಡಿನ್ನರ್ ನಡೆ ಹೈಕಮ್ಯಾಂಡಗೆ ಕೂಡ ತಲೆ ಬಿಸಿ ಮಾಡುತ್ತಿದೆ. ಇದರ ಕುರಿತು ಬೆಳಗಾವಿ ಉತ್ತರ ಮತಕ್ಷೇತ್ರ ಶಾಸಕ ಆಸಿಫ್ (ರಾಜು )ಸೆಟ್ ಪಂಚಾಯತ್ ಸ್ವರಾಜ್ ಸಮಾಚಾರ ಜೊತೆ ಮಾತನಾಡಿದ್ದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ರಾಜ್ಯದಲ್ಲಿ ಡಿನ್ನರ್ ಪಾರ್ಟಿ ಚರ್ಚೆ ಜೋರಾಗಿದೆ ಇದರ ಬಗ್ಗೆ ಏನು ಹೇಳುತ್ತಿರಿ?

ಸಚಿವರು ಭೇಟಿಯಾಗಿ ಊಟ ಮಾಡುವುದು ತಪ್ಪಾ? ಮೊನ್ನೆ ಸಚಿವ ಸತೀಶ್ ಜಾರಕಿಹೊಳಿಯವರು ಡಿನ್ನರ್ ಪಾರ್ಟಿ ನೀಡಿದರು. ಮಂತ್ರಿಗಳು, ಶಾಸಕರುಗಳು ಬೇರೆ ಬೇರೆ ಕಾರಣಗಳಿಂದ ಭೇಟಿಯಾಗುತ್ತಾರೆ ಸಚಿವರು ಕ್ಯಾಬಿನೆಟ್ ಸಭೆಗಳಿಗೆ ಹೋಗುತ್ತಾರೆ ಅಂತ ಸಂದರ್ಭದಲ್ಲಿ ಪರಸ್ಪರ ಊಟಕ್ಕೆ ಕರೆಯುವುದು ರೂಡಿ. ಅದರಲ್ಲಿ ರಾಜಕೀಯ ಏನು ಇಲ್ಲ ಸಚಿವರು ಶಾಸಕರುಗಳು ರಾಜಕಾರಣಿಗಳು ಒಂದೆಡೆ ಸೇರಿದಾಗ ರಾಜಕಾರಣದ ವಿಷಯ ಚರ್ಚೆಯಾಗುವುದು ಸ್ವಾಭಾವಿಕ ಅದರಲ್ಲೇನೂ ಹೊಸದಿಲ್ಲ ಮತ್ತು ಡಿನ್ನರ್ ಪಾರ್ಟಿಗಳಿಂದ ಯಾವುದೇ ಷಡ್ಯಂತರ ರಾಜಕಾರಣ ನಡೆಯುತ್ತಿದೆ ಎಂದು ಅರ್ಥೈಸಿಕೊಳ್ಳಬಾರದು. ಬೆಳಗಾವಿ ಅಧಿವೇಶನದಲ್ಲಿ ಬೆಳಗಾವಿಯಲ್ಲಿ ನನ್ನ ಮನೆಯಲ್ಲಿ ನಾನು ಕೂಡ ಸಚಿವರಿಗಳಿಗೆ ಹಾಗೂ ಶಾಸಕರುಗಳಿಗೆ ಊಟಕ್ಕೆ ಆಹ್ವಾನಿಸಿದ್ದೆ, ಅವರೆಲ್ಲರೂ ಬಂದು ಊಟ ಮಾಡಿಕೊಂಡು ಹೋಗಿದ್ದರು ಇದರಲ್ಲಿ ಯಾವ ರಾಜಕಾರಣ ಇಲ್ಲ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಹಾಗೂ ಅಧಿಕಾರ ಹಂಚಿಕೆ ಸಂದರ್ಭದಲ್ಲಿ ಈ ವಿಷಯಗಳು ಚರ್ಚೆಯಾಗುತ್ತಿರುವುದು ಮಹತ್ವ ಪಡೆದುಕೊಂಡಿದೆಯೇ ?

ಅಧಿಕಾರ ಹಂಚಿಕೆ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನ ಹೈಕಮಾಂಡ್ ನಿರ್ಣಯ ಮಾಡುತ್ತದೆ. ಡಿನ್ನರ್ ಪಾರ್ಟಿಗೂ ಅದಕ್ಕೂ ಏನು ಸಂಬಂಧವಿಲ್ಲ.

ಬೆಳಗಾವಿ ರಾಜಕಾರಣದಲ್ಲಿ ಹೊರಗಿನ ಶಕ್ತಿಗಳ ಹಸ್ತಕ್ಷೇಪ ಹೆಚ್ಚಾಗಿದೆಯೇ ?

ಬೆಳಗಾವಿ ರಾಜಕಾರಣದಲ್ಲಿ ಹೊರಗಿನಿಂದ ಬಂದು ಯಾರು ರಾಜಕಾರಣ ಮಾಡಲು ಸಾಧ್ಯವಿಲ್ಲ. ನಮ್ಮ ನಾಯಕ ಮಹಾರಥಿ ಸತೀಶ್ ಜಾರಕಿಹೊಳಿ ಅವರು ಇದ್ದಾರೆ. ಅವರ ಕೈಯಲ್ಲಿ ರಾಜಕಾರಣ ಇದೆ ನಾವು ಎಲ್ಲಾ ಶಾಸಕರುಗಳು ಅವರ ಜೊತೆ ಇದ್ದೇವೆ.

ಸಚಿವ ಸ್ಥಾನಕ್ಕೆ ನಿಮ್ಮ ಪಕ್ಷ ನಿಮ್ಮನ್ನು ಪರಿಗಣಿಸಲಿದೆಯೇ ?

ಮಂತ್ರಿ ಹುದ್ದೆ ಯಾರಿಗೆ ಇಷ್ಟ ಇಲ್ಲ, ಅವಕಾಶ ಬಂದರೆ ನಾನು ಅದಕ್ಕೆ ಸಿದ್ಧನಿದ್ದೇನೆ. ಹೈಕಮಾಂಡಿಗೆ ಈಗಾಗ್ಲೇ ನಾನು ಇದರ ಕುರಿತು ಹೇಳಿದ್ದೇನೆ ಹಾಗೂ ಉತ್ತರ ಕರ್ನಾಟಕದ ನಮ್ಮ ಸಮುದಾಯದ ನಾನು ಒಬ್ಬನೇ ಶಾಸಕನಿದ್ದೇನೆ. ಇಂತಹ ಸಂದರ್ಭ ಬಂದಾಗ ನನ್ನನ್ನು ಪರಿಗಣಿಸಬೇಕೆಂದು ಹೇಳಿದ್ದೇನೆ.

ಡಿಸಿಎಂ ಕುರಿತು ಪಕ್ಷದಲ್ಲಿ ಚರ್ಚೆ ಇದೆಯೇ ?

ಉಪಮುಖ್ಯಮಂತ್ರಿ ಕುರಿತು ಯಾವುದೇ ಚರ್ಚೆ ಆಗುತ್ತಿಲ್ಲ.

WhatsApp Group Join Now
Telegram Group Join Now
Share This Article