spot_img
spot_img
spot_img
28.1 C
Belagavi
Tuesday, October 4, 2022
spot_img

ಉತಾರ ನೀಡಲು ಲಂಚ : ಗ್ರಾಪಂ ಮಾಜಿ ಅಧ್ಯಕ್ಷೆ ಹಾಗೂ ಗಂಡನಿಗೆ ಜೈಲು ಶಿಕ್ಷೆ 

spot_img

ಬೆಳಗಾವಿ : ಕಂಪ್ಯೂಟರ್ ಉತಾರ ನೀಡಲು ಲಂಚ ಪಡೆದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಮತ್ತು ಆಕೆಯ ಪತಿ ಇಬ್ಬರಿಗೂ ಶಿಕ್ಷೆ ವಿಧಿಸಿ ಕೋರ್ಟ್ ತೀರ್ಪು ನೀಡಿದೆ.

4ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಸ್.ವಿ.ವಿಜಯ ತೀರ್ಪು ಪ್ರಕಟಿಸಿದ್ದಾರೆ. ಮಚ್ಚೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಶ್ರೀ ಮತ್ತು ಅವರ ಪತಿ ಮಹಾವೀರ ಸಾವಂತ ಎರಡು ವರ್ಷ ಜೈಲು ಹಾಗೂ ದಂಡ ವಿಧಿಸಿದ್ದಾರೆ.

೪ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್.ವಿ.ವಿಜಯ ಅವರು ಆರೋಪಿ-೧ ಪದ್ಮಶ್ರೀ ಮಹಾವೀರ ಹುಡೇದ, ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ ಮಚ್ಛೆ ಬೆಳಗಾವಿ ಇವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ ಕಲಂ.೭ ಪಿಸಿ ಕಾಯ್ದೆ-೧೯೮೮ ರಲ್ಲಿ ೦೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.೫೦೦೦/- ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ ೨ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ಕಲಂ.೧೩(೧)(ಡಿ) ಸಹ ಕಲಂ.೧೩(೨) ಪಿಸಿ ಕಾಯ್ದೆ-೧೯೮೮ ನೇದ್ದರಡಿಯಲ್ಲಿ ೦೪ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.೧೦,೦೦೦/-ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ ೦೩ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿರುತ್ತಾರೆ.

ಆರೋಪಿ-೨ ಮಹಾವೀರ ಸಾವಂತ ಹುಡೇದ ಇವರನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿ ಕಲಂ.೮ ಪಿಸಿ ಕಾಯ್ದೆ-೧೯೮೮ ರಲ್ಲಿ ೦೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ರೂ.೫೦೦೦/- ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ ೨ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ಹಾಗೂ ಕಲಂ.೧೨ ಪಿಸಿ ಕಾಯ್ದೆ-೧೯೮೮ ನೇದ್ದರಡಿಯಲ್ಲಿ ೦೩ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ರೂ.೧೦,೦೦೦/- ದಂಡ, ಒಂದು ವೇಳೆ ದಂಡ ಕಟ್ಟಲು ತಪ್ಪಿದರೆ ೦೩ ತಿಂಗಳು ಸಾದಾ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.

೨೮.೦೧.೨೦೧೭ರಂದು ಫಿರ್ಯಾಧಿದಾರರಾದ ಕಸ್ತೂರಿ ಪ್ರಕಾಶ ಕೋಲಕಾರ ಸಾ|| ಮನೆ ನಂ.೨೧೭೯, ಶಿವಾಜಿ ನಗರ, ಮಚ್ಛೆ, ತಾಃ ಜಿಃ ಬೆಳಗಾವಿ ಇವರಿಗೆ ಆರೋಪಿ-೧ ಪದ್ಮಶ್ರೀ ಮಹಾವೀರ ಹುಡೇದ, ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ, ಮಚ್ಛೆ ತಾಃ ಜಿಃ ಬೆಳಗಾವಿ ರವರು ಮನೆಯ ಗಣಕೀಕೃತ ಉತಾರ ನೀಡಲು ರೂ.೩೦೦೦ ಲಂಚದ ಬೇಡಿಕೆ ಇಟ್ಟು ಮುಂಗಡವಾಗಿ ರೂ.೫೦೦ ಸ್ವತ: ಸ್ವೀಕರಿಸಿ, ಉಳಿದ ಹಣ ರೂ.೨೫.೦೦೦ನ್ನು ತನ್ನ ಗಂಡ ಆರೋಪಿತ-೨ ಮಹಾವೀರ ಸಾವಂತ ಹುಡೇದ ಇವನ ಮೂಲಕ ಸ್ವೀಕರಿಸಿಕೊಂಡಾಗ ಎಸಿಬಿ ಅಧಿಕಾರಿಗಳು ಯಶಸ್ವಿಯಾಗಿ ಟ್ರ್ಯಾಪ್ ಮಾಡಿ ಆರೋಪಿತನನ್ನು ದಸ್ತಗೀರ ಪಡೆದ ಲಂಚದ ಹಣವನ್ನು ಯತಾವತ್ತಾಗಿ ವಶಪಡಿಸಿಕೊಂಡಿದ್ದು, ಘನ ೪ನೇ ಅಧಿಕ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯ, ಬೆಳಗಾವಿಯಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದರು.

ವಿಶ್ವನಾಥ ಡಿ.ಕಬ್ಬೂರಿ, ಪೊಲೀಸ್ ಇನ್ಸಪೆಕ್ಟರ್ರವರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದು ಹಾಗೂ ಬಿ.ಸಿ.ಗೌಡರ, ಸಿ.ಎಚ್.ಸಿ ಇವರು ತನಿಖಾ ಸಹಾಯಕರಾಗಿ ಪ್ರಕರಣದ ತನಿಖೆ ಕೈಕೊಂಡು ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿರುತ್ತಾರೆ. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕರಾದ ಪ್ರವೀಣ ಅಗಸಗಿ ರವರು ಘನ ನ್ಯಾಯಾಲಯದಲ್ಲಿ ಪ್ರಕರಣವನ್ನು ನಡೆಯಿಸಿ ವಾದ ಮಂಡಿಸಿದ್ದರು.

ಇನ್ನು ಈ ಬಗ್ಗೆ ಪಂಚಾಯಿತಿ ಕಾವಲು ಸಮಿತಿ ಸದಸ್ಯರು ಭಾರೀ ಪ್ರತಿಭಟನೆ ನಡೆಸಿದರು.

 

 

spot_img

Related News

ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ : ರಾಜು ಕಾಗೆ

ಬೆಳಗಾವಿ: ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಐನಾಪೂರ ಪಟ್ಟಣದಲ್ಲಿ ಮಾತನಾಡಿರುವ...

ದುರ್ಗೆ ವೇಷ ಧರಿಸಿ ಹದಗೆಟ್ಟ ವಿರುದ್ಧ ಪ್ರತಿಭಟಿಸಿದ ಬಾಲಕಿ 

ಹುಬ್ಬಳ್ಳಿ : ದುರ್ಗೆಯ ವೇಷ ಧರಿಸಿ ಬಾಲಕಿಯೊಬ್ಬಳು ವೇಷ ಧರಿಸಿ ಹುಬ್ಬಳ್ಳಿಯಲ್ಲಿ ನೀರಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಡೆದಿದ್ದಾಳೆ. ಈ ವಿಡಿಯೋ ಮೂಲಕ ರಸ್ತೆಗಳ ದುರವಸ್ಥೆಯ ಬಗ್ಗೆ ಗಮನ ಸೆಳೆಯುವ ಪ್ರಯತ್ನದಲ್ಲಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -