ಮೈಸೂರು : ಇಂದಿನಿಂದ ಮಂಡ್ಯ, ಮೈಸೂರು, ಚಾಮರಾಜನಗರದಲ್ಲಿ ಸಾಗಲಿರುವ ಸಾವರ್ಕರ್ ರಥಯಾತ್ರೆಗೆ ಮಾಜಿ ಸಿಎಂ ಯಡಿಯೂರಪ್ಪ ಚಾಲನೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಸಾವರ್ಕರ್ ವಿರುದ್ಧ ಅಪಪ್ರಚಾರ ನಡೆಯುತ್ತಿದೆ ಇದರಿಂದ ನೊಂದಿದ್ದೇನೆ ಎಂದು ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಯುವಜನರಲ್ಲಿ ಕಿಚ್ಚು ಹಚ್ಚುವ ಮೂಲಕ ದೇಶ ಭಕ್ತಿ ಹೆಚ್ಚಿಸುವ ರಥಯಾತ್ರೆಗೆ ಇಂದು ಚಾಲನೆ ನೀಡಲಾಗಿದೆ ಸಾವರ್ಕರ್ ವಿರುದ್ಧ ಅಪಪ್ರಚಾರ ನಡೆಯುತ್ತಿದೆ. ಇದರಿಂದ ನನಗೆ ತುಂಬಾ ನೋವಾಗಿದೆ.
ಸಾವರ್ಕರ್ ಹೆಸರಿಗೆ ಮಸಿ ಬಳೆಯವ ಕೆಲಸ ನಡೆಯುತ್ತಿದೆ ಇದು ಅಕ್ಷಮ್ಯ ಅಪರಾಧವಾಗಿದೆ. ಸಾವರ್ಕರ್ ಸಾಧನೆಯ ಸಂದೇಶವನ್ನು ಮನೆಮನೆಗೆ ಸಾರಬೇಕಾಗಿದೆ. ದೇಶ ದ್ರೋಹಿಗಳಿಗೆ ಎಚ್ಚರಿಕೆ ನೀಡುವ ಜಾತ್ರೆ ಇದಾಗಬೇಕಾಗಿದೆ ಎಂದರು.