Ad imageAd image

ಬೆಳಗಾವಿಮಹಾನಗರ ಪಾಲಿಕೆ ವಿರುದ್ಧ PIL (ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್) ಸಿದ್ಧತೆ ನಡೆಸಿದ ಮಾಜಿ ನಗರಸೇವಕರಗಳ ಸಂಘ

ratnakar
ಬೆಳಗಾವಿಮಹಾನಗರ ಪಾಲಿಕೆ ವಿರುದ್ಧ PIL (ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್) ಸಿದ್ಧತೆ ನಡೆಸಿದ ಮಾಜಿ ನಗರಸೇವಕರಗಳ ಸಂಘ
WhatsApp Group Join Now
Telegram Group Join Now

ಬೆಳಗಾವಿ: ಹೈಕೋರ್ಟ್ ನೀಡಿರುವ ತೀರ್ಪಿನಿಂದಾಗಿ ಬೆಳಗಾವಿ (belagavi) ಮಹಾನಗರ ಪಾಲಿಕೆ ಕೈಗೊಂಡಿರುವ ನಿರ್ಣಯದಿಂದ ಆರ್ಥಿಕ ಸಂಕಟ ಎದುರಿಸುತ್ತಿರುವ ಈ ಸಂದರ್ಭದಲ್ಲಿ ಬೆಳಗಾವಿ ಮಾಜಿ ನಗರಸೇವಕರಗಳ ಸಂಘದಿಂದ ಸಭೆ ಕರೆಯಲಾಗಿದೆ.

ಬಹಳ ಕುತೂಹಲ ಮೂಡಿಸಿರುವ ಈ ಸಭೆ ಶಿವಾಜಿ ಸುಂಡ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು, ಮಾಜಿ ನಗರಸೇವಕರು ಹಾಗೂ ಮಾಜಿ ಮಹಾಪೌರರು ಭಾಗವಹಿಸಲಿದ್ದಾರೆ. ಹೈಕೋರ್ಟ್ ತೀರ್ಪು ಬಂದಿರುವ ನಂತರ ತಾರತೂವಿಯಲ್ಲಿ ಕೈಗೊಂಡಿರುವಂತಹ ನಡಾವಳಿಗಳು ಹಾಗೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಉಂಟಾದ ಆರ್ಥಿಕ ಸಂಕಟ ಹಾಗೂ ಬೆಳಗಾವಿ ಸಾಮಾನ್ಯ ಜನತೆಯ ತೆರಿಗೆ ಹಣ ದುರುಪಯೋಗವಾಗುತ್ತಿರುವ ಸಂದರ್ಭದಲ್ಲಿ ಈ ಸಭೆ ಮಹತ್ವ ಪಡೆದಿದೆ.

ಈ ಸಂದರ್ಭದಲ್ಲಿ ಮಾಜಿ ಶಾಸಕ ಹಾಗೂ ಮಾಜಿ ನಗರಸೇವಕರ ಸಂಘದ ಗೌರವ ಅಧ್ಯಕ್ಷರಾದ ರಮೇಶ್ ಕುಡುಚಿ ಜನರ ಹಿತ ರಕ್ಷಣೆ ಕಾಪಾಡುವುದು ಮತ್ತು ಜನರ ಸಮಸ್ಯೆಗಳಿಗೆ ನಾವು ಯಾವತ್ತೂ ಸ್ಪಂದನೆ ನೀಡಲಿದ್ದೇವೆ ಮತ್ತು ಮಹಾನಗರ ಪಾಲಿಕೆ ಕೈಗೊಂಡಿರುವ ನಿರ್ಣಯದ ಹಾಗೂ ಅಧಿಕಾರಿಗಳ ತಪ್ಪಿಗೆ ಬೆಳಗಾವಿ ಜನತೆ ಏಕೆ ಶಿಕ್ಷೆ ಅನುಭವಿಸಬೇಕು ಅದಕ್ಕಾಗಿ ಈ ಸಭೆಯಲ್ಲಿ ಕಾನೂನಾತ್ಮಕ ಹೋರಾಟದ ಕುರಿತಾಗಿ ಚರ್ಚೆ ಮಾಡಲಿದ್ದೇವೆ ಎಂದು ಸುಳಿವು ನೀಡಿದ್ದಾರೆ.

WhatsApp Group Join Now
Telegram Group Join Now
Share This Article