ಬೆಳಗಾವಿ : ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ವಿಜಯ ನಗರ, ಹಿಂಡಲಗಾ ಕಾರ್ಯಾಲಯಕ್ಕೆ ಬಿಜೆಪಿ ಮಾಜಿ ಕೆ.ಎಸ್. ಈಶ್ವರಪ್ಪ ಭೇಟಿ ಕೊಟ್ಟರು. ಇವರನ್ನು ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಅಧ್ಯಕ್ಷ ಧನಂಜಯ ಜಾಧವ ಅವರು ಸತ್ಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಈಶ್ವರಪ್ಪ, ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಳ ಕಾರ್ಯಾಲಯವು ಕಾರ್ಯಕರ್ತರ ದಾನಶುರ ಪ್ರವೃತಿಯಿಂದ ನಡೆಯುತ್ತದೆ ಎಂದು ಕೇಳಿ ಆನಂದವಾಯಿತು.
ಇದರಲ್ಲಿ ಧನಂಜಯ ಜಾಧವ ಇವರ ಸಂಘಟನೆಯನ್ನು ಹೇಗೆ ಮಾಡಬೇಕೆಂದು ತಿಳಿಯುತ್ತದೆ. ನಾನು ಕುಡಾ ಹೀಗೆಯೇ ಸಂಘಟಣೆಯ ಮೂಲಕ ಬಂದ ವ್ಯಕ್ತಿ. ಹೀಗೆ ಬಂದ ವ್ಯಕ್ತಿಯನ್ನು ಬರುವ ಚುಣಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯನ್ನಾಗಿ ಮಾಡಿದರೆ, ಈ ಗ್ರಾಮೀಣ ಕ್ಷೇತ್ರವು ಬಿಜೆಪಿಯದಾಗುತ್ತದೆ ಎಂದು ಹೇಳಿದರು.
ಈ ಸಮಯದಲ್ಲಿ ಬಿಜೆಪಿಯ ಎಲ್ಲ ಕಾರ್ಯಕರ್ತರು ಉಪಸ್ಥಿತರಿದರು.