ನವದೆಹಲಿ : ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಿಗೆ 10 ಲಕ್ಷ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ಆದೇಶ ನೀಡಿದ ಬೆನ್ನಲ್ಲೇ ಇಂದು ಮೊದಲ ಹಂತದಲ್ಲಿ 75,000 ನೌಕರರಿಗೆ ನೇಮಕಾತಿ ಪತ್ರ ವಿತರಣೆ ಮಾಡಲಿದ್ದಾರೆ.
ಇಂದು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಹಂತದಲ್ಲಿ 75,000 ನೌಕರರಿಗೆ ನೇಮಕಾತಿ ಪತ್ರ ವಿತರಣೆ ಮಾಡಲಿದ್ದಾರೆ. ಜೊತೆಗೆ ರೋಜಗಾರ್ ಮೇಳಕ್ಕೂ ಅವರು ಚಾಲನೆ ನೀಡಲಿದ್ದಾರೆ.
ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ನೌಕರರನ್ನು ನೇಮಕಾತಿ ಮಾಡಿಕೊಳ್ಳಲು ಸೂಚನೆ ನೀಡಿದ್ದರು. 75,000 ನೌಕರರನ್ನು ನೇಮಕ ಪ್ರಕ್ರಿಯೆಯನ್ನು ಇಲಾಖೆಗಳು ಪೂರ್ಣಗೊಳಿಸಿವೆ.
ಕೇಂದ್ರ ಸರ್ಕಾರದ ದೇಶಾದ್ಯಂತ ಗ್ರೂಪ್ ಎ, ಗ್ರೂಪ್ ಬಿ, ಗ್ರೂಪ್ ಸಿ ಹುದ್ದೆಗಳಿಗೆ 75,000 ಮಂದಿಯನ್ನು ನೇಮಕ ಮಾಡಿಕೊಂಡಿದೆ.