ಬೆಳಗಾವಿ : ಕಡೋಲಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ಆಯ್ಕೆಯಾಗಿದ್ದು, ದೇವಗಿರಿ ಗ್ರಾಮದ ರೇಖಾ ರಾಜು ಸುತಾರ್ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷೆಯಾಗಿ ರೇಖಾ ಕಲ್ಲಪ್ಪ ನರೋಟಿ 27 ಮತಗಳಲ್ಲಿ ತಲಾ17 ಮತವನ್ನು ಪಡೆದು ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾದರು.
ಕಾರಣಾಂತರಗಳಿಂದ ಮಾಜಿ ಅಧ್ಯಕ್ಷೆ ಶ್ರೀದೇವಿ ವೈಜನಾಥ್ ಪಾಟೀಲ್ ಹಾಗೂ ಉಪಾಧ್ಯಕ್ಷೆ ಪ್ರೇಮ ರಾಯಪ್ಪ ನುರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಯಿತು.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಪರವಾಗಿ 27 ಮತಗಳ ಪಟ್ಟಿ 17 ಮತಗಳು ಇವರ ಪರವಾಗಿ ಸದಸ್ಯರು ಮತ ಚಲಾಯಿಸಿದರು.
ಈ ಕುರಿತು ಮಾತನಾಡಿದ ಕಾಂಗ್ರೆಸ್ ಮುಖಂಡ ಮಲ್ಲನಗೌಡ ಪಾಟೀಲ್ ಅವರು, ಸತೀಶ್ ಜಾರಕಿಹೊಳಿ ಬಣಕ್ಕೆ ಮತ್ತೊಂದು ಸಲ ವಿಜಯಲಕ್ಷ್ಮಿ ಒಲಿದು ಬಂದಿದ್ದಾಳೆ ಎಂದು ಸಂತೋಷ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿ, ನಮ್ಮ ನಾಯಕರಾದ ಸತೀಶ್ ಜಾರಕಿಹೊಳಿ ಅವರು ಮಾರ್ಗದರ್ಶನದಲ್ಲಿ ಅಭಿವೃದ್ಧಿ ಮತ್ತು ಸರ್ವಾಂಗೀಣ ವಿಕಾಸ ನಡೆಯಲಿದೆ.ಸರ್ಕಾರಿ ಯೋಜನೆಗಳು ಎಲ್ಲಾ ಜನರಿಗೆ ತಲುಪುವ ವ್ಯವಸ್ತೆ ಗ್ರಾಮ ಪಂಚಾಯತಿ ಳಿಂದ ಆಗಲಿದೆ ಎಂದರು.
ಈ ಸಂದರ್ಭದಲ್ಲಿ ನೂಡಲ್ ಅಧಿಕಾರಿಯಾಗಿ ಎ. ಜೆ .ಕೋಳಿ, ಗ್ರಾಮ ಪಂಚಾಯತ್ ಸದಸ್ಯರುಗಳು ಮತ್ತು ಕಾಂಗ್ರೆಸ್ಸಿನ ಕಾರ್ಯಕರ್ತರು ಸಂದರ್ಭದಲ್ಲಿ ಉಪಸ್ಥಿತರಿದ್ದರು