Ad imageAd image

ಮಾದಿಗ ಸಮಾಜಕ್ಕೆ ಸರ್ಕಾರಿ ನೌಕರಿಗಳಲ್ಲಿ ಪ್ರತಿಶತ 1%ರಷ್ಟು ಕೂಡ ನಾವಿಲ್ಲ: ಕೆ. ಎಚ್ ಮುನಿಯಪ್ಪ

ratnakar
ಮಾದಿಗ ಸಮಾಜಕ್ಕೆ ಸರ್ಕಾರಿ ನೌಕರಿಗಳಲ್ಲಿ ಪ್ರತಿಶತ 1%ರಷ್ಟು ಕೂಡ ನಾವಿಲ್ಲ: ಕೆ. ಎಚ್ ಮುನಿಯಪ್ಪ
WhatsApp Group Join Now
Telegram Group Join Now

ವರದಿ: ರತ್ನಾಕರ ಗೌಂಡಿ

ಬೆಳಗಾವಿ’ ಸುದ್ದಿಗಾರರೊಂದಿಗೆ ಮಾತನಾಡಿದ ಮಾದಿಗ ಸಮಾಜ ಆರ್ಥಿಕವಾಗಿ ಸರಕಾರಿ ನೌಕರಿಗಳಲ್ಲಿ ಪ್ರತಿಶತ 25%ರಲ್ಲಿ 1% ರಷ್ಟು ಕೂಡ ನಾವಿಲ್ಲ ಎಂದು

ಸಚಿವ ಕೆ ಎಚ್ ಮುನಿಯಪ್ಪ ಮಾದಿಗ
ಸಮಾಜದ ಆರ್ಥಿಕ ಸ್ಥಿತಿ ಹಾಗೂ ಅಸಮಾನತೆ ಕುರಿತಾಗಿ ವಿಷಾದ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾವು ಯಾವ ಜಾತಿ ಉಪಜಾತಿಗಳ ವಿರೋಧಿಯಲ್ಲ ಆದರೆ ಜಾತಿಯ ಜನಸಂಖ್ಯೆಯ ಆಧಾರದ ಮೇಲೆ ಪಡೆಯುವುದು ನಮ್ಮ ಹಕ್ಕಾಗಿದೆ. ಒಳ ಮೀಸಲಾತಿ 35 ವರ್ಷಗಳ ನಿರಂತರ ಹೋರಾಟದಿಂದ ದೇಶದ ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದೆ. ಅದರಂತೆ ಬೇರೆ ರಾಜ್ಯಗಳಲ್ಲಿ ಎಲ್ಲೆಲ್ಲಿ ಈ ಹೋರಾಟ ನಡೆದಿದೆ ಅಲ್ಲಿಯೂ ಕೂಡ ಒಳ ಮೀಸಲಾತಿ ನೀಡುವ ಪ್ರಕ್ರಿಯೆ ಪ್ರಾರಂಭವಾಗಿದೆ.

ತೆಲಂಗಾನ ಮುಖ್ಯಮಂತ್ರಿ ಜಯವಂತ ರೆಡ್ಡಿ ಅವರು ವಿಧಾನಸಭೆಯಲ್ಲಿ ಘೋಷಣೆ ಮಾಡಿದ್ದಾರೆ. ಹರಿಯಾಣ ಈಗಾಗಲೇ ಒಳ ಮೀಸಲಾತಿ ಜಾರಿಗೆ ಪ್ರಕ್ರಿಯೆ ಪ್ರಾರಂಭ ಮಾಡಿದೆ . ನಿವೃತ್ತ ನ್ಯಾಯಾಧೀಶರ ಒಂದು ಕಮಿಟಿ ರಚನೆ ಮಾಡಲಾಗಿದ್ದು 60 ದಿನಗಳಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಸಲು ತೀರ್ಮಾನಿಸಲಾಗಿದೆ ಅದರಂತೆ ರಾಜ್ಯದಲ್ಲೂ ಕೂಡ ಒಳ ಮೀಸಲಾತಿ ನೀಡುವ ಪ್ರಕ್ರಿಯೆ ಪ್ರಾರಂಭವಾಗಬಹುದು ಎಂಬ ಆಶೆಯ ವ್ಯಕ್ತಪಡಿಸಿದರು.

ಬ್ಯಾಕ್ಲಾಗ ಹುದ್ದೆಗಳ ಪ್ರಶ್ನೆಗೆ ಉತ್ತರಿಸಿದ ಸಚಿವ ಶೀಘ್ರದಲ್ಲಿ ಮುಖ್ಯಮಂತ್ರಿಗಳ ಜೊತೆ ಇದರ ಕುರಿತು ಚರ್ಚೆ ಮಾಡಲಾಗುವುದು ಎಂದರು.

WhatsApp Group Join Now
Telegram Group Join Now
Share This Article