spot_img
spot_img
spot_img
21.3 C
Belagavi
Sunday, October 1, 2023
spot_img

ಸಹಕಾರಿ ಸಂಘಗಳಿಂದ ರೈತರ ಆರ್ಥಿಕ ಅಭಿವೃಧ್ದಿ ಸಾಧ್ಯ

ಬೈಲಹೊಂಗಲ: ಸಹಕಾರಿ ಸಂಘಗಳು ರೈತರನ್ನು ಆರ್ಥಿಕವಾಗಿ ಬೆಳವಣಿಗೆಗೆ ಹೊಂದಲು ಅತ್ಯಂತ ಮಹತ್ವವನ್ನು ಹೊಂದಿದ್ದು ರೈತರು ಅದರ ಸದುಪಯೋಗ ಪಡೆದುಕೊಳ್ಳಬೇಕೆಂದು ಸವದತ್ತಿ ತಾಲೂಕಿನ ಡಿಸಿಸಿ ಬ್ಯಾಂಕ್ ನಿರ್ದೇಶಕಿ ರತ್ನಕ್ಕಾ ಮಾಮನಿ ಹೇಳಿದರು.

ಸಮೀಪದ ಹೊಸೂರ ಗ್ರಾಮದ ಶತಮಾನದ ಅಂಚಿನಲ್ಲಿರುವ ಪ್ರಾಕೃಪಸ ಸಂಘದ ನೂತನ ಕೃಷಿ ಸೇವಾ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ, ರೈತರ ಕೃಷಿ ಚಟುವಟಿಕೆಗಳಿಗೆ ಶೂನ್ಯ ಬಡ್ಡಿದರದಲ್ಲಿ ಬೆಳೆಸಾಲ ಹಾಗೂ ಪ್ರತಿಶತ 3ರಂತೆ ದೀರ್ಘಾವಧಿಯ ಸಾಲವನ್ನು ಡಿಸಿಸಿ ಬ್ಯಾಂಕ್ ಮುಖಾಂತರ ರೈತರಿಗೆ ವಿತರಿಸುತಿದ್ದು ಅದನ್ನು ಸದುಪಯೋಗ ಪಡಿಸಿಕೊಂಡು ಸಕಾಲಕ್ಕೆ ಮರುಪಾವತಿಬೇಕು. ದಿ. ಆನಂದ ಮಾಮನಿಯವರು ತಾಲೂಕಿನ ಸಹಕಾರಿ ಸಂಘಗಳ ಬೆಳವಣಿಗೆಗ ಸಾಕಷ್ಟು ಮುತವರ್ಜಿವಹಿಸಿದ್ದರು. ಅವರಿಗೆ ನೀಡಿದ ಸಹಕಾರದಿಂದ ತಾಲೂಕಿನ ಸಂಘಗಳು ಆರ್ಥಿಕವಾಗಿ ಸದೃಡವಾಗುವದರೊಂದಿಗೆ ಸ್ವಂತ ಕಟ್ಟಡ ನಿರ್ಮಾಣವಾಗುತ್ತಿವೆ ಎಂದರು.


ಸವದತ್ತಿ ಎಪಿಎಂಸಿ ಮಾಜಿ ಅಧ್ಯಕ್ಷ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ 1930ರಲ್ಲಿ ಸಾವಿರ ರೂಪಾಯಿ ಬಂಡವಾಳದಿಂದ ಗ್ರಾಮದ ಹಿರಿಯರು ಪ್ರಾರಂಭಿಸಿದ ಸಂಸ್ಥೆ ಇಂದು 10ಕೋಟಿ ರೂಪಾಯಿ ವಹಿವಾಟ ನಡೆಸುವದರೊಂದಿಗೆ 14ನೂರು ರೈತ ಸದಸ್ಯರನ್ನು ಹೊಂದಿದೆ. 62 ಲಕ್ಷ ರೂಪಾಯಿಗಳಲ್ಲಿ ನೂತನ ಕೃಷಿ ಸೇವಾಕೇಂದ್ರ ಹಾಗೂ ಉಗ್ರಾಣ ಕಟ್ಟಡ ನಿರ್ಮಾಣವಾಗಿದ್ದು ಗ್ರಾಮಕ್ಕೆ ಹೆಮ್ಮೆಯ ವಿಷಯವಾಗಿದೆ. ಸಂಘಕ್ಕೆ 2ಸಾವಿರ ಮೆಟ್ರಿಕ್ ಟನ್ ಗೋಡಾವನ ಸ್ವಂತ ಕಛೇರಿ ಹೊಂದಿದ್ದು ಸಂಘದ ಬೆಳವಣಿಗೆಗೆ ಕಾರಣಿ ಕರ್ತರಾದ ವೀರಪ್ಪ ಮಾಕಿ, ಬಸಪ್ಪ ಹುಂಬಿ, ಕರಡಿಗುದ್ದಿ, ದೇಮಪ್ಪ ಮತ್ತಿಕೊಪ್ಪ ಮುದಖಪ್ಪ ಮೂಗಬಸವ, ಗೊಡಚಯ್ಯ ಗಣಾಚಾರಿ ಹಾಗೂ ಗುರಸಿದ್ದಪ್ಪ ಚಳಕೊಪ್ಪ ಅವರ ಕಾರ್ಯವನ್ನು ಶ್ಲಾಘಿಸಿದರು.
ವಿರೂಪಾಕ್ಷ ಮಾಮನಿ ಹಾಗೂ ತಾಲೂಕಾ ನಿಯಂತ್ರಣಾಧಿಕಾರಿ ಸಿ.ಆರ್.ಪಾಟೀಲ‌ ಮಾತನಾಡಿದರು. ಪಿಕೆಪಿಎಸ್ ಅಧ್ತಕ್ಷ ಸೋಮಲಿಂಗ ಚಳಕೊಪ್ಪ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯ ಮೇಲೆ ಜಿಲ್ಲಾ ಯುನಿಯನ್ ನಿರ್ದೇಶಕ ಈಶ್ವರಚಂದ್ರ ಇಂಗಳಗಿ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಗುರಸಿದ್ದಪ್ಪ ಚಳಕೊಪ್ಪ,ಡಿಸಿಸಿ ಬ್ಯಾಂಕ್ ಅಧಿಕಾರಿಗಳಾದ ಪ್ರವೀಣ ಕೊಟಗಿ, ಗೀರಿಷ ಪಾಟೀಲ, ಮಂಜುನಾಥ ಮಾರಿಹಾಳ, ಪಿಕೆಪಿಎಸ್ ಅಧ್ಯಕ್ಷರುಗಳಾದ ಚನ್ನಪ್ಪ ಬೂದಿಹಾಳ, ಗುರುಪಾದ ಕಳ್ಳಿ, ವಿನೀತ ಮೂಗಬಸವ, ಹಣಮಂತ ಭೋವಿ, ಕುಮಾರ ಛಬ್ಬಿ, ಬಸವಾಣೆಪ್ಪ ನಾಗನಗೌಡರ, ಅನೀಲ ಗುರಕನವರ, ಮಾರುತಿ ಬಂಡಿವಡ್ಡರ, ಈರಣ್ಣ ಹುಬ್ಬಳ್ಳಿ, ಶ್ರೀಕಾಂತ‌ ಸುಂಕದ ನಿರ್ದೇಶಕರಾದ ಪ್ರೇಮಾಭಾಯಿ ಪಾಟೀಲ, ಗಂಗವ್ವ ಯರಡಾಲ, ಶಿವರಾಜ ಮಾಕಿ, ಈರಪ್ಪ ಹುರಳಿ, ಮಲ್ಲ ಸರ್ಜ ಮೂಗಬಸವ, ಸಿದ್ದಪ್ಪ ನಾಗನೂರ, ಮಲ್ಲಪ್ಪ ಮದಲಭಾಂವಿ, ಶಿವಪ್ಪ ಹಿರುನ್ನವರ, ನಾಗಪ್ಪ ತಳವಾರ, ಕಲ್ಲಪ್ಪ ಚಳಕೊಪ್ಪ, ಪ್ರಸಾದ ಹುಂಬಿ, ಶಂಕರೆಪ್ಪ ಮಲ್ಲಣ್ಣವರ, ದುಂಡಪ್ಪ ಬೂದಿಹಾಳ, ದೇಮಪ್ಪ ಮೂಗಬಸವ, ರುದ್ರಪ್ಪ ಹುಲಿಕಟ್ಟಿ ಗ್ರಾಪಂ ಸದಸ್ಯರಾದ ಗಂಗವ್ವ ಅರವಳ್ಳಿ, ಮುಶೆಪ್ಪ ಜಡಿ, ಮಡಿವಾಳಪ್ಪ ಕಮತಗಿ, ಬಸವರಾಜ ಬಾಳೆಕುಂದರಗಿ, ಅಪ್ಪು ಈಳಿಗೇರ, ಮಲ್ಲವ್ವ ಸುತಗಟ್ಟಿ, ದೀಪಾ ಪಾಟೀಲ ಮುಂತಾದವರು ಇದ್ದರು. ಉಪನ್ಯಾಸಕ ಎಸ್.ಕೆ.ಮೆಳ್ಳಿಕೇರಿ ಕಾರ್ಯಕ್ರಮ ನಿರೂಪಿಸಿದರು ಕಲ್ಲಪ್ಪ ಚಳಕೊಪ್ಪ ಸ್ವಾಗತಿಸಿದರು. ಮಹಾದೇವ ಕಡಕೋಳ ವಂದಿಸಿದರು.

Related News

ಸರಕಾರದ ಜೊತೆ ಎಲ್ಲ ಸಮಾಜದವರೂ ಇದ್ದಾರೆ – ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯದ ಬೆಂಬಲ ಸಿಕ್ಕಿದೆ. ಕೇವಲ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿಲ್ಲ. ಎಲ್ಲಾ ಸಮಾಜದವರೂ ಸರಕಾರದೊಂದಿಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್...

ನಿಮ್ಮ ಆಸ್ತಿಗಳ ಮೌಲ್ಯಗಳನ್ನು ಅಪಮೌಲ್ಯ ಮಾಡಬೇಡಿ ನೈಜ್ಯ ಬೆಲೆಗೆ ವ್ಯವಹಾರ ಮಾಡಿ

ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರ ಸ್ಥಿರ ಆಸ್ತಿಗಳು ಮಾರ್ಗಸೂಚಿ ಬೆಲೆ ಪರಿಷ್ಕರಣೆ ಅಕ್ಟೋಬರ್ ಒಂದರಿಂದ ಶೆ. 10%ರಿಂದ 30%ವರೆಗೆ ಹೆಚ್ಚಳ ಮಾಡುವುದಾಗಿ ಆದೇಶ ಹೊರಡಿಸಿದೆ. ಅದರ ಅಂಗವಾಗಿ ಬೆಳಗಾವಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -