ಧಾರವಾಡ : ಕುಡಿದ ಮತ್ತಿನಲ್ಲಿ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದಕ್ಕೆ ವ್ಯಕ್ತಿಯೊಬ್ಬನಿಗೆ ಮಹಿಳೆಯೊಬ್ಬಳು ಚಪ್ಪಲಿಯಿಂದ ಥಳಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಧಾರವಾಡದ ಸುಭಾಷ್ ನಗರದಲ್ಲಿ ಘಟನೆ ನಡೆದಿದೆ.
ಅಷ್ಟೇ ಅಲ್ಲದೇ ಮೊಬೈಲ್ ನಂಬರ್ ಕೊಡಿ ಎಂದು ಕೇಳಿದಕ್ಕೆ ಚಪ್ಪಲಿಯಿಂದ ಮಹಿಳೆಯೇ ಥಳಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸುವುದನ್ನು ನಾವು ಕೇಳಬಹುದು.
https://twitter.com/KeypadGuerilla/status/1608713474615701506?t=_nCTlGTiXN5hMLE3w0h8DQ&s=19
ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಈತನ ಅನುಚಿತ ವರ್ತನೆಗೆ ಸುತ್ತಮುತ್ತಲಿನ ಜನರೂ ಕೂಡಾ ಆತನಿಗೆ ಚಪ್ಪಲಿಯಿಂದ ಒದ್ದು ಥಳಿಸಿದ್ದಾರೆ. ಈ ದೃಶ್ಯಾವಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.