ಬೈಲಹೊಂಗಲ: ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ತಜ್ಞವೈದ್ಯರಾಗಿ ನಾಡಿನ ರೋಗಿಗಳಿಗೆ ಅವಿರತ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ರವೀಂದ್ರ ಜಕನೂರವರ 41ನೇ ಜನ್ಮದಿನದ ನಿಮಿತ್ಯ ಅವರ ಅಭಿಮಾನಿಗಳು ರೋಗಿಗಳಿಗೆ ಬಿಸ್ಕಿಟ್, ಬ್ರೇಡ್ ಹಾಗೂ ಹಣ್ಣು ಹಂಪಲ ವಿತರಿಸಿ ವೈದ್ಯರನ್ನು ಸತ್ಕರಿಸಿ ವೈದ್ಯರ ಜನ್ಮದಿನವನ್ನು ಖಾಸಗಿ ಆಸ್ಪತ್ರೆಯಲ್ಲಿ ರೋಗಿಗಳ ಜೋತೆಯಲ್ಲಿ ಆಚರಿಸಿದರು.
ನ್ಯಾಯವಾದಿ, ಸಮಾಜ ಸೇವಕ ಎಫ್.ಎಸ್.ಸಿದ್ದನಗೌಡರ ಡಾ.ರವೀಂದ್ರ ಜಕನೂರ ಅವರನ್ನು ಜನ್ಮದಿನದ ನಿಮಿತ್ಯ ಸತ್ಕರಿಸಿ ಮಾತನಾಡಿ, ಬೈಲಹೊಂಗಲ ನಾಡಿನ ಗ್ರಾಮೀಣ ಪ್ರದೇಶದಿಂದ ಬರುವ ನೂರಾರು ರೋಗಿಗಳಿಗೆ ಪಟ್ಟಣದ ಸರ್ಕಾರಿ ಸಾರ್ವಜನಿಕ ತಾಲೂಕಾ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಾ ಜನಮಾನಸದಲ್ಲಿ ಅಚ್ಚುಳಿಯುವಂತೆ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ರವೀಂದ್ರ ಜಕನೂರ ನೂರಾರುಕಾಲ ಉತ್ತಮ ಆರೋಗ್ಯದಿಂದ ಈ ನಾಡಿನ ಜನರಿಗೆ ವೈದ್ಯಕೀಯ ಸೇವೆ ನೀಡಲೆಂದು ಹಾರೈಸಿದರು.
ಡಾ.ರವೀಂದ್ರ ಜಕನೂರ ಸತ್ಕಾರ ಸ್ವೀಕರಿಸಿ ಮಾತನಾಡಿ, ನಾನು ರೈತ ಕುಟುಂಬದಿಂದ ಬಂದಿದ್ದು ಸರ್ಕಾರದ ಕೊಟಾ ಅಡಿಯಲ್ಲಿ ನನ್ನ ವೈಧ್ಯಕೀಯ ಹಾಗೂ ಸ್ನಾತಕೋತ್ತರ ವೈದ್ಯಕೀಯ ಪದವಿಗಳನ್ನು ಪೊರೈಸಿ ನನಗೆ ಸರ್ಕಾರದ ವೈದ್ಯನಾಗಿ ಸೇವೆ ಸಲ್ಲಿಸಲು ಬೈಲಹೊಂಗಲ ನಾಡಿನಲ್ಲಿ ಅವಕಾಶ ಸಿಕ್ಕಿರುವದು ನನ್ನ ಭಾಗ್ಯ ಎಂದರು.
ಈ ನಾಡಿನ ಜನತೆ ನನಗೆ ಸಹಕಾರ ನೀಡುತಿದ್ದು ನನ್ನ ಜನ್ಮದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ಅಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲ ನೀಡುವ ಮೂಲಕ ಜನ್ಮದಿನವನ್ನು ಆಚರಿಸಿದ್ದು ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದೆ ನನ್ನ ಹತ್ತಿರ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಸ್ಪಂದಿಸಿ ನನ್ನ ಶಕ್ತಿ ಮೀರಿ ಪ್ರಾಮಾಣಿಕ ಸೇವೆ ನೀಡುತಿದ್ದೆನೆ. ಮುಂದಿನ ದಿನಗಳಲ್ಲಿಯು ಅತ್ಯಂತ ಯಶಸ್ವಿಯಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ನಂದಿ ಡ್ರೇಸಿಸ್ಸ್ ಮಾಲಿಕ ಮಲ್ಲಿಕಾರ್ಜುನ ವಕ್ಕುಂದ, ಗೌಡಪ್ಪ ಹೊಸಮನಿ, ಗ್ರಾಪಂ ಸದಸ್ಯ ಮುಶೆಪ್ಪ ಜಡಿ, ಸಚಿನ ಬೂದಿಹಾಳ ಹಾಗೂ ಅಸ್ಪತ್ರೆ ಸಿಬ್ಬಂದಿ ಮುಂತಾದವರು ಇದ್ದರು.