ಬೆಳಗಾವಿ : ಯುವ ಜನತೆಯ ಸ್ಪೂರ್ತಿಯಾದ ಉದ್ಯಮಿ ಹಾಗೂ ಭಾರತ ವೈಭವ ದಿನಪತ್ರಿಕೆ ಮತ್ತು ಬಿವಿ ನ್ಯೂಸ್ ಚನಲ್ ನ ಸಂಪಾದಕರಾದ ಡಾ. ಎನ್ ಪ್ರಶಾಂತ ರಾವ ಐಹೊಳೆ ಅವರಿಗೆ ಇಂದು ಗೋವಾ ರಾಜ್ಯದ Real group of Companies ಸಂಸ್ಥೆ ಯು ಪ್ರೇರಣಾ ಮೂರ್ತಿ ಪುರಸ್ಕಾರ ನೀಡಿ ಗೌರವಿಸಿದೆ.
ಗೋವಾದ ಸಂಕಲಿಯ ರವಿಂದ್ರ ಭವನ ನಾಟ್ಯಗೃಹದಲ್ಲಿ ನಡೆದ ಈ ಕಾರ್ಯದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಗೋವಾ ಮುಖ್ಯ ಮಂತ್ರಿಗಳಾದ ಡಾ. ಪ್ರಮೋದ ಸಾವಂತ ಪುರಸ್ಕಾರವನ್ನು ನೀಡಿ ಗೌರವಿಸಿದರು.
ಪುರಸ್ಕಾರವನ್ನು ಸ್ವೀಕರಿಸಿ ಉದ್ಯಮಿ ಹಾಗೂ ಸಂಪಾದಕರಾದ ಡಾ. ಎನ್ ಪ್ರಶಾಂತ ರಾವ ಐಹೊಳೆ ಮಾತನಾಡಿ, ಸಾಂಸ್ಕೃತಿಕ, ಕ್ರೀಡೆ, ರಾಜಕೀಯ ಮತ್ತು ಸಾಮಾಜಿಕ ಸೇವೆ ಹೀಗೆ ಹಲವು ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ Real group of Companies ಸಂಸ್ಥೆ ಯು ಪ್ರತಿವರ್ಷ ಪುರಸ್ಕರಿಸಿ ಗೌರವಿಸುತ್ತಿದೆ. ಯುವ ಜನತೆ ಸತತ ಪ್ರಯತ್ನದಿಂದ ಮತ್ತು ತಮ್ಮ ಚಾತುಯುದಿಂದ ಅಭಿವೃದ್ದಿಯಿಂದ ಹೊಂದಬೇಕು. ಪ್ರಾಮಾಣಿಕತೆಯಿಂದ ಗುರಿ ಸಾಧನೆಗಾಗಿ ಹಗಲಿರುಳು ಶ್ರಮಿಸಬೇಕು ಅಂದಾಗ ಮಾತ್ರ ತಮ್ಮ ಯಶಸ್ಸಿನ ಗುರಿ ತಲುಪಬಹುದು. ಸತತ ಪ್ರಯತ್ನವೆ ಯಶಸ್ಸಿನ ಗುಟ್ಟು ಎಂದು ಯುವಕರಿಗೆ ಸ್ಪೂರ್ತಿದಾಯಕ ಸುಡಿಗಳನ್ನು ಮಾತನಾಡಿದರು
ಈ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಮತ್ತು ಪ್ರವಾಸೊದ್ಯಮ ಸಚಿವರಾದ ಪ್ರಮೋದ ಶ್ರೀವಿನಾಯಕ ಖೆದೆಕರ, ಶ್ರಿಪಾದ ನಾಯಿಕ, ಮಾಜಿ ಮುಖ್ಯಮಂತ್ರಿಗಳಾದ ಪ್ರತಾಪ ಸಿಂಗ್ ರಾನೆ ಮತ್ತು ದಿಗಂಬರ ಕಾಮತ್, ಮಾಜಿ ಕಾನೂನು ಸಚಿವರಾದ ನ್ಯಾಯವಾದಿ ರಮಾಕಾಂತ ಖಲಾಪ, ಶಾಸಕರಾದ ಡಾ. ಚಂದ್ರಕಾಂತ ಶೆಟ್ಟಿ ಮೊದಲಾದವರು ಉಪಸ್ಥಿರಿದ್ದರು.