ಬೆಳಗಾವಿ: ಖಾನಾಪುರ್ ತಾಲೂಕು ಕಾಂಗ್ರೆಸ್ ಹೊಸ ಪದಾಧಿಕಾರಿಗಳ ನೇಮಕ ಮಾಡಲಾಯಿತು. ಪಕ್ಷ ಸಂಘಟನೆಗೋಸ್ಕರ ರಾಷ್ಟ್ರೀಯ ಕಾಂಗ್ರೆಸ್ ಕಾರ್ಯದರ್ಶಿಗಳಾದ ಡಾ ಅಂಜಲಿ ನಿಂಬಾಳ್ಕರ್ ಅವರು ಖಾನಾಪುರ್ ಕಾಂಗ್ರೆಸ್ ನಲ್ಲಿ ಹೊಸ ಸರ್ಜರಿಯನ್ನು ಮಾಡಿದ್ದಾರೆ. ಹೊಸತನದ ಖಾನಾಪುರ ಕ್ಷೇತ್ರದಲ್ಲಿ ಪಕ್ಷವನ್ನು ಮತ್ತಷ್ಟು ಬಲಗೊಳಿಸಲು ಪದಾಧಿಕಾರಿಗಳ ಹೊಸದಾಗಿ ನೇಮಕವನ್ನು ಮಾಡಲಾಗಿದೆ.
ಕಾಂಗ್ರೆಸ್ ಪಕ್ಷದ ಸರ್ಕಾರದ ಸಾಧನೆ ಮತ್ತು ಗ್ಯಾರಂಟಿ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಪಕ್ಷದ ಪದಾಧಿಕಾರಿಗಳು ಕಾರ್ಯರೂಪಕ್ಕೆ ಸಿದ್ಧಗೊಳ್ಳಬೇಕಾಗಿದೆ ಮತ್ತು ಖಾನಾಪುರ ಕ್ಷೇತ್ರದ ಸರ್ವಾಂಗಿನ ಅಭಿವೃದ್ಧಿ ಮಾಡಿದ ಡಾ ಅಂಜಲಿ ನಿಂಬಾಳ್ಕರ್ ಅವರ ಕೆಲಸಗಳನ್ನು ಜನರಿಗೆ ಮತ್ತಷ್ಟು ಮನವರಿಕೆ ಆಗುವಂತೆ ತಿಳಿಸುವ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಖಾನಾಪುರ್ ತಾಲೂಕ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ್ ಗಾಡಿ ತಮ್ಮ ಅಭಿಪ್ರಾಯ ಹಂಚಿಕೊಂಡರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಡಾ ಅಂಜಲಿ ನಿಂಬಾಳ್ಕರ್ ಮಾತನಾಡಿ ಸರ್ಕಾರದ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳನ್ನು ಜನರತ್ತ ತೆಗೆದುಕೊಂಡು ಹೋಗುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಮತ್ತು ಪ್ರತಿಯೊಬ್ಬರು ಪಕ್ಷ ಸಂಘಟನಾತ್ಮಕವಾಗಿ ಬಲಿಷ್ಠ ಗೊಳಿಸುವುದು ಮುಖ್ಯ ಜವಾಬ್ದಾರಿಯಾಗಿದೆ ಎಂದು ಹೊಸದಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ಹುರಿದುಂಬಿಸಿದರು.
ಇದೇ ಸಂದರ್ಭದಲ್ಲಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ವಿತರಿಸಿದರು. ನೂತನ ಖಾನಾಪುರ ತಾಲೂಕಿನ ಪದಾಧಿಕಾರಿಗಳಾದ ಈಶ್ವರ್ ಗಾಡಿ , ಖಾನಾಪುರ ತಾಲೂಕ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷರು ಮಹಾಂತೇಶ್ ರಾಹುತ್, ಖಾನಾಪುರ್ ನಗರ ಕಾಂಗ್ರೆಸ್ ಅಧ್ಯಕ್ಷರು , ಸಾವಿತ್ರಿ ಮದರ್ ಮಹಿಳಾ ನಗರ ಕಾಂಗ್ರೆಸ್ ಅಧ್ಯಕ್ಷರು ದೀಪಾ ಪಾಟೀಲ್
ಖಾನಾಪುರ್ ತಾಲೂಕ ಕಾಂಗ್ರೆಸ್ ಮಹಿಳಾ ಗ್ರಾಮೀಣ ಅಧ್ಯಕ್ಷರು, ತೋಹಿತ್ ಚಂದನವರ್ ಮೈನಾರಿಟಿ ಖಾನಾಪುರ ತಾಲೂಕ ಕಾಂಗ್ರೆಸ್ ಅಧ್ಯಕ್ಷರು, ಮುಬಾರಕ್ ಕಿತ್ತೂರ್ ಮೈನಾರಿಟಿ ಖಾನಾಪುರ್ ತಾಲೂಕ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಇದರ ಜೊತೆಗೆ ವಿವಿಧ ಪದಾಧಿಕಾರಿಗಳಿಗೆ ನೇಮಕಾತಿ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ಮಹದೇವ್ ಕೋಳಿ, ಈಶ್ವರ್ ಗಾಡಿ, ಮಹಾಂತೇಶ್ ರಾಹುತ್, ಸಾವಿತ್ರಿ ಮಾದರ್, ದೀಪಾ ಪಾಟೀಲ್, ತೋಹಿತ್ ಚಂದನವರ್, ಮುಬಾರಕ್ ಕಿತ್ತೂರ್, ತಮ್ಮಣ ಕೊಲ್ಕಾರ್, ಗುಡ್ಡು ತೇಕಡಿ ,ಹಾಗೂ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.