ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ ವಿದ್ಯುತ್ ದರ ಹೆಚ್ಚಳ ಮಾಡಲಾಗಿತ್ತು. ಇದರಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ್ದಂತ ಜನತೆಗೆ ಮತ್ತಷ್ಟು ಹೊರೆ ಬಿದ್ದಂತೆ ಆಗಿತ್ತು.
ಈ ಬೆನ್ನಲ್ಲೇ ಹೊಸ ವರ್ಷಕ್ಕೆ ವಿದ್ಯುತ್ ದರ ಕಡಿತಕ್ಕೆ ರಾಜ್ಯ ಸರ್ಕಾರ ಮುಂದಾಗಿ ಎನ್ನಲಾಗಿದೆ. ಈ ಬಗ್ಗೆ ಇಂಧನ ಇಲಾಖೆಯ ಸಚಿವ ವಿ.ಸುನೀಲ್ ಕುಮಾರ್, ವಿದ್ಯುತ್ ದರ ಕಡಿತ ಪ್ರಸ್ತಾವನೆ ಸಿದ್ಧಪಡಿಸುವಂತೆ ಇಲಾಖೆಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.
ಸಚಿವರ ಸೂಚನೆಯ ಮೇರೆಗೆ ಇಂಧನ ಇಲಾಖೆಯಿಂದ ವಿದ್ಯುತ್ ದರ ಇಳಿಕೆಯ ಪ್ರಸ್ತಾವನೆಯನ್ನು ಎಲ್ಲಾ ಎಸ್ಕಾಂಗಳು ಸಿದ್ಧಪಡಿಸಿ ಕೆ ಇ ಆರ್ ಸಿಗೆ ಸಲ್ಲಿಸಿವೆ ಎಂದು ಹೇಳಲಾಗುತ್ತಿದೆ.
ಸಲ್ಲಿಕೆಯಾಗಿರುವಂತ ಪ್ರಸ್ತಾವನೆಯಲ್ಲಿ ವಿದ್ಯುತ್ ಬಳಕೆದಾರರ ಶುಲ್ಕ ಕಡಿತ ಮಾಡಲು ತೀರ್ಮಾನಿಸಲಾಗಿದೆ ಎನ್ನಲಾಗುತ್ತಿದೆ. ಪ್ರತಿ ಯೂನಿಟ್ ಗೆ 70 ಪೈಸೆಯಿಂದ 2 ರೂವರೆಗೆ ಶುಲ್ಕ ಇಳಿಕೆ ಆಗಲಿದೆ ಎನ್ನಲಾಗಿದೆ. ಈ ಪ್ರಸ್ತಾವನೆಯನ್ನು ಎಲ್ಲಾ ಎಸ್ಕಾಂಗಳಿಂದ ಕೆ ಇ ಆರ್ ಸಿಗೆ ಸಲ್ಲಿಸಿರುವ ನಿರ್ಧಾರವನ್ನು ಕೈಗೊಂಡಿವೆ ಎನ್ನಲಾಗಿದೆ.