spot_img
spot_img
spot_img
21.1 C
Belagavi
Friday, September 30, 2022
spot_img

ಹಳೆ ಮಾರುಕಟ್ಟೆಯಲ್ಲಿನ ವ್ಯಾಪಾರ ಮಳಿಗೆಗಳನ್ನು ಬಾಡಿಗೆ ಕೊಡಿ ಇಲ್ಲವಾದಲ್ಲಿ ಕೆಡವಿ : ಶಾಸಕ ಬೆನಕೆ 

spot_img

ಬೆಳಗಾವಿ : ದಂಡುಮಂಡಳಿಯ ಸಮಾನ್ಯ ಸಭೆಯು ನಗರದ ಕ್ಯಾಂಟೋನ್ಮೆಂಟ್ ಬೋರ್ಡ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ದಂಡು ಮಂಡಳಿಯ ವಾರ್ಷಿಕ ಆಡಳಿತ ವರದಿ, ಲೆಕ್ಕಪತ್ರ, ಅಯವ್ಯಯ, ಅಭಿವೃದ್ದಿ ಕಾಮಗಾರಿಗಳು, ತೆರಿಗೆ ಸಂಗ್ರಹ, ಜನನ ಮರಣ ದಾಖಲಾತಿ ಹಾಗೂ ಇತರ ವಿಷಯಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ನಂತರದಲ್ಲಿ ಸಭೆಯಲ್ಲಿ ಹಳೆ ತರಕಾರಿ ಮಾರುಕಟ್ಟೆಯಲ್ಲಿನ ವ್ಯಾಪಾರ ಮಳಿಗೆಗಳ ಕುರಿತು ಮಾತನಾಡಿದ ಶಾಸಕ ಅನಿಲ ಬೆನಕೆರವರು ಮಾರುಕಟ್ಟೆಯು ಸ್ಥಳಾಂತರವಾಗಿರುವುದರಿಂದ ಅಲ್ಲಿನ ವ್ಯಾಪಾರ ಮಳಿಗೆಗಳು ವರ್ಷಗಳಿಂದ ಖಾಲಿ ಬಿದ್ದಿದ್ದು, ಯಾವುದೇ ಆದಾಯದ ಮೂಲಗಳು ಇಲ್ಲದಿರುವುದರಿಂದ ದಂಡುಮಂಡಳಿಗೆ ಇದರಿಂದ ನಷ್ಠವಾಗುತ್ತಿದೆ.

ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿರುವ ಮಾರುಕಟ್ಟೆಯಲ್ಲಿನ ವ್ಯಾಪಾರಿ ಮಳಿಗೆಗಳನ್ನು ಟೆಂಟರ್ ಕರೆದು ಬಾಡಿಗೆ ಕೊಡಬೇಕು ಇಲ್ಲವಾದಲ್ಲಿ ಜೆ.ಸಿ.ಬಿ.ಯಿಂದ ಕೆಡವಿ ಸಮತಟ್ಟು ಮಾಡಿ ಎಂದು ದಂಡುಮಂಡಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು. ನಂತರದಲ್ಲಿ ದಂಡು ಮಂಡಳಿಯ ನೌಕರರ ವೇತನ ಹಾಗೂ ನಿವೃತ್ತಿ ಪಿಂಚನಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಶಾಸಕ ಅನಿಲ ಬೆನಕೆ ದಂಡುಮಂಡಳಿ ಹಿರಿಯ ಅಧಿಕಾರಿಗಳು, ದಂಡುಮಂಡಳಿ ಸದಸ್ಯರು ಹಾಗೂ ಇತರರು ಉಪಸ್ಥಿತರಿದ್ದರು.

 

spot_img

Related News

ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ 1 ವರ್ಷ ಜೈಲು, 50 ಸಾವಿರ ದಂಡ

ನವದೆಹಲಿ: ಸಿಮ್ ಕಾರ್ಡ್ ಪಡೆಯಲು ನಕಲಿ ದಾಖಲೆ ನೀಡಿದರೇ ಭಾರತೀಯ ದೂರಸಂಪರ್ಕ ಮಸೂದೆ 2022 ರ ಸಿದ್ಧಪಡಿಸಿದ ಕರಡು ಪ್ರತಿಯ ಪ್ರಕಾರ, ನೀವು ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಅಥವಾ 50,000...

ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ : ಚನ್ನರಾಜ ಹಟ್ಟಿಹೊಳಿ

ಬೆಳಗಾವಿ : ಕಳೆದ ನಾಲ್ಕೂವರೆ ವರ್ಷದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅವರು ಅಭಿವೃದ್ಧಿಯ ಕ್ರಾಂತಿಯನ್ನೇ ಮಾಡಿದ್ದು, ಮುಂದಿನ ದಿನಗಳಲ್ಲಿ ಅಭಿವೃದ್ಧಿ ಇನ್ನಷ್ಟು ವೇಗ ಪಡೆಯಲಿದೆ ಎಂದು ವಿಧಾನ ಪರಿಷತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -