ಬೆಳಗಾವಿ : ರಾಷ್ಟ್ರೀಯ ತೆಂಗು ದಿನಾಚರಣೆ ಪ್ರಯುಕ್ತ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ಇಂದು ತೆಂಗು ದಿನಾಚರಣೆಗೆ ಚಾಲನೆ ನೀಡಲಾಯಿತು.
ಬಳಿಕ ಡೆಂಗ್ಯೂ ದಿನಾಚರಣೆ ಚಾಲನೆಯನ್ನು ಜಿಲ್ಲಾಧಿಕಾರಿಗಳ ನಿತೀಶ್ ಪಾಟೀಲ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್,ಹೆಚ್. ವಿ. ಚಾಲನೆಯನ್ನು ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಡೆಂಗ್ಯೂ ರೋಗ ಹರಡುವ ಮತ್ತು ನಿಯಂತ್ರಣ ಪ್ರದರ್ಶನ ಮಳೆಗೆ ಉದ್ಘಾಟಿಸಿ ಮಾತನಾಡಿದ ಅವರು, ಈ ಮಳಿಗೆಗಳಲ್ಲಿ ಸೊಳ್ಳೆಗಳ ಮಾದರಿ ರೋಗ ಹರಡುವುದು ಒಂದು ಸಾರ್ವಜನಿಕರಿಗೆ ಚಿತ್ರಗಳ ಬ್ಯಾನರ್ ಚಿತ್ರ ಪ್ರದರ್ಶನಗಳು ಕೈಬರಹ ಪ್ರದರ್ಶನಗಳು ಜನರ ಗಮನ ಸೆಳೆಯಿತು. ಜಿಲ್ಲಾಧಿಕಾರಿ ಕಚೇರಿಯಿಂದ ಸಂಭಾಜಿ ವೃತ್ತದವರೆಗೆ ಶೋಭಾಯಾತ್ರೆಯನ್ನು ಮಾಡಲಾಯಿತು.
ಶೋಭಾಯಾತ್ರೆ ಮೂಲಕ ಚಿಕನಗುನ್ಯಾ ಅರಿವು ಮೂಡಿಸುವ ಫಲಕಗಳು ಜನರ ಗಮನ ಸೆಳೆದವು. ಡೆಂಗ್ಯೂ ರೋಗವು ಈಜಿಪ್ಟ್ ಸೊಳ್ಳೆಗಳಿಂದ ಹರಡುತ್ತದೆ. ಡೆಂಗ್ಯೂ ರೋಗವು ಮಾರಣಾಂತಿಕ ಕಾಯಿಲೆ ಇರುವುದರಿಂದ ಜ್ವರ ಬಂದ ಕೂಡಲೇ ರಕ್ತ ತಪಾಸಣೆ ಮಾಡಿಕೊಳ್ಳಬೇಕು. ನೀರಿನ ಸ್ಥಾನಗಳಲ್ಲಿ ಲಾರ್ವೇ ಉತ್ಪತ್ತಿಯಾಗದಂತೆ ನೋಡಿಕೊಳ್ಳಬೇಕು.ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಮಲೇರಿಯಾ ರೋಗವನ್ನು ನಿಯಂತ್ರಿಸಬಹುದಾದ ಮಾಹಿತಿಗಳನ್ನು ಧ್ವನಿವರ್ಧಕದ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು ಎಂದರು.
ಬಳಿಕ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿಕಾಂತ್ ಮನ್ಯಾಳ ಅವರು ಮಾತನಾಡಿ ಮನೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೀರು ನಿಲ್ಲುವ ಸ್ಥಳಗಳಲ್ಲಿ ಗಮನಿಸಿ ಅವನು ಸ್ವಚ್ಛಗೊಳಿಸುವುದು ನೀರಿಲ್ಲದಂತೆ ಕ್ರಮ ಕೈಗೊಳ್ಳಬೇಕು. ಡೆಂಗ್ಯೂ ನಿಯಂತ್ರಿಸುವ ಸಲುವಾಗಿ ಸಮುದಾಯ ಸಹಭಾಗಿತ್ವ ಅಷ್ಟೇ ಮುಖ್ಯವಾಗುತ್ತದೆ. ಜ್ವರ ಬಂದಲ್ಲಿ ಇಲಾಖೆಯ ಸಹಕಾರ ಪಡೆದುಕೊಳ್ಳುವುದು ರಕ್ತ ತಪಾಸಣೆ ಮಾಡಿಕೊಳ್ಳುವುದು ಮುಂಜಾಗೃತ ಕ್ರಮಗಳನ್ನು ಕೈಗೊಂಡರೆ ಮುಂದಾಗುವ ಸಾವು-ನೋವುಗಳನ್ನು ತಡೆಯಬಹುದು ಎಂದು ಡಾಕ್ಟರ್ ಮನ್ಯಾಳ ಅವರು ಅಭಿಪ್ರಾಯಪಟ್ಟರು
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯವಾಹಕ ಆಶ್ರಿತ ರೋಗಗಳ ನಿಯಂತ್ರಣ ಅಧಿಕಾರಿಗಳಾದ ಡಾ. ಎಂ ಎಸ್ ಪಲ್ಲದ ಅವರು ಕಾರ್ಯಕ್ರಮದಲ್ಲಿ ಮಾತನಾಡಿ ಭಾರತ ಸರ್ಕಾರದ ಮಾರ್ಗಸೂಚಿಯಂತೆ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕ್ರಮಗಳನ್ನು ರೋಗಹರಡದಂತೆ ಸಮುದಾಯವನ್ನು ಸಜ್ಜೆ ಗೊಳಿಸಬೇಕಾಗಿದೆ.
ಭಾರತ ಸರ್ಕಾರದ ಮಾರ್ಗದರ್ಶನದ ಮಾರ್ಗಸೂಚಿಯಂತೆ ಪ್ರತಿವರ್ಷ ಮೇ 16 ನೇ ತಾರೀಕಿಗೆ ತೆಂಗು ದಿನಾಚರಣೆಯಾಗಿ ಆಚರಣೆ ಮಾಡಲಾಗುತ್ತದೆ. ಅದರಂತೆ ಸಮುದಾಯವನ್ನು ಸಾಂಕ್ರಾಮಿಕ ರೋಗಗಳಿಂದ ತಡೆಗಟ್ಟುವ ಸಲುವಾಗಿ ಅರಿವು ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಚಿಕ್ಕ ಮಕ್ಕಳು, ಗರ್ಭಿಣಿಯರು, ವೃದ್ಧರು, ಇವರೆಲ್ಲರ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಮುದಾಯದ ಆರೋಗ್ಯ ಇಲಾಖೆ ಅಧಿಕಾರಿಗಳು, ಇಲಾಖೆ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.