ಬೆಂಗಳೂರು : ಜಾರಿ ನಿರ್ದೇಶನಾಲಯ ವಿಚಾರಣೆಗೆ ದೆಹಲಿಗೆ ಹಾಜರಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಡಿ ಕಚೇರಿಗೆ ತೆರಳಿ ವಿಚಾರಣೆಗೆ ಹಾಜರಾದರು.
ಈ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿದ್ದು, ತೀವ್ರ ಜ್ವರದಿಂದ ಬಳಲುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಜ್ವರ ಹೆಚ್ಚಾಗಿರುವುದರಿಂದ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಡಿ ಡ್ರಿಲ್ ಆಗಮಿಸಿದ ಸಂದರ್ಭದಲ್ಲಿ ಆರೋಗ್ಯದಲ್ಲಿ ಏರುಪೇರಾಗಿದೆ.
ನಿನ್ನೆ ವೇಳೆ ವಿಚಾರಣೆ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು 36 ವರ್ಷಗಳ ಹಿಂದಿನ ಬ್ಯಾಂಕ್ ದಾಖಲೆಗಳನ್ನು ಕೇಳಿದ್ದಾರೆ, ಇಡಿಗೆ ಸಂಪೂರ್ಣ ಸಹಕರವನ್ನು ನೀಡಲಾಗುವುದು ಅಂತ ತಿಳಿಸಿದರು. ಇನ್ನೂ ಬರೋಬ್ಬರಿ ನಿನ್ನೆ ಆರು ತಾಸುಗಳ ಇಡಿ ಅಧಿಕಾರಿಗಳು ಮಾಹಿತಿಯನ್ನು ಕಲೆ ಹಾಕಿದ್ದಾರೆ ಎನ್ನಲಾಗಿದೆ.