spot_img
spot_img
spot_img
20.2 C
Belagavi
Wednesday, October 5, 2022
spot_img

ಡಿ. ಕೆ. ಶಿವಕುಮಾರ್ ಪರ್ಮನೆಂಟ್ ಜೈಲಿಗೆ ಹೋಗುತ್ತಾರೆ : ಸಚಿವ ಅಶ್ವಥ್ ನಾರಾಯಣ್ 

spot_img

ರಾಮನಗರ : ಭ್ರಷ್ಟಾಚಾರ ಎಂದರೆ ಡಿ.ಕೆ.ಶಿವಕುಮಾರ್, ಡಿ.ಕೆ.ಶಿವಕುಮಾರ್ ಎಂದರೆ ಭ್ರಷ್ಟಾಚಾರ. ಅವರು ಪರ್ಮನೆಂಟ್ ಜಾಗವೆಂದರೆ ತಿಹಾರ್ ಜೈಲು ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಕಿಡಿಕಾರಿದ್ದಾರೆ.

ರಾಮನಗರದಲ್ಲಿ ಮಾತನಾಡಿದ ಅವರು , ನಾನು ಕಾಂಗ್ರೆಸ್ ನ ಯಾವ ನಾಯಕರನ್ನೂ ಭೇಟಿಯಾಗಿಲ್ಲ. ಅನಗತ್ಯವಾಗಿ ಡಿ.ಕೆ.ಶಿವಕುಮಾರ್ ಸುಳ್ಳು ಆರೋಪ ಮಾಡುತ್ತಿದ್ದಾರೆ.

ಡಿ.ಕೆ.ಶಿವಕುಮಾರ್ ಅವರದ್ದು ಭ್ರಷ್ಟಾಚಾರವೇ ಜೀವನವಾಗಿದೆ. ಅವರು ಮಾಡಿದ ಕರ್ಮಕಾಂಡಕ್ಕೆ ಪರ್ಮನೆಂಟ್ ಆಗಿ ತಿಹಾರ್ ಜೈಲಿಗೆ ಹೋಗುತ್ತಾರೆ. ಅವರೊಬ್ಬ ಜೈಲುಹಕ್ಕಿ. ಅವರ ಮಾತನ್ನು ಯಾರೂ ನಂಬುವುದೂ ಇಲ್ಲ ಕೇಳುವುದೂ ಇಲ್ಲ. ಮಾನ ಮರ್ಯಾದೆ ಇದ್ದರೆ, ನನ್ನ ವಿರುದ್ಧ ಮಾಡುವ ಆರೋಪಗಳಿಗೆ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.

spot_img

Related News

ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ : ರಾಜು ಕಾಗೆ

ಬೆಳಗಾವಿ: ಮುಜರಾಯಿ ಇಲಾಖೆಯ ಅನುದಾನವನ್ನು ಬೇರೆ ರಾಜ್ಯಗಳಿಗೆ ನೀಡಲಾಗುತ್ತಿದೆ ಎಂದು ಮುಜರಾಯಿ ಇಲಾಖೆ ಸಚಿವೆ ಶಶಿಕಲಾ‌ ಜೊಲ್ಲೆ ವಿರುದ್ಧ ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಐನಾಪೂರ ಪಟ್ಟಣದಲ್ಲಿ ಮಾತನಾಡಿರುವ...

ದುರ್ಗೆ ವೇಷ ಧರಿಸಿ ಹದಗೆಟ್ಟ ವಿರುದ್ಧ ಪ್ರತಿಭಟಿಸಿದ ಬಾಲಕಿ 

ಹುಬ್ಬಳ್ಳಿ : ದುರ್ಗೆಯ ವೇಷ ಧರಿಸಿ ಬಾಲಕಿಯೊಬ್ಬಳು ವೇಷ ಧರಿಸಿ ಹುಬ್ಬಳ್ಳಿಯಲ್ಲಿ ನೀರಿನ ಕೊಚ್ಚೆ ಗುಂಡಿಗಳಿಂದ ತುಂಬಿದ ರಸ್ತೆಯಲ್ಲಿ ನಡೆದಿದ್ದಾಳೆ. ಈ ವಿಡಿಯೋ ಮೂಲಕ ರಸ್ತೆಗಳ ದುರವಸ್ಥೆಯ ಬಗ್ಗೆ ಗಮನ ಸೆಳೆಯುವ ಪ್ರಯತ್ನದಲ್ಲಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -