spot_img
spot_img
spot_img
21.1 C
Belagavi
Friday, September 30, 2022
spot_img

ನೈಸರ್ಗಿಕವಾಗಿ ಮಾಗಿದ ಮಾವು ಸವಿದು ರೈತರನ್ನು ಪ್ರೋತ್ಸಾಹಿಸಿ : ಜಿಲ್ಲಾಧಿಕಾರಿ ನಿತೇಶ್ ಪಾಟೀಲ

spot_img

ಬೆಳಗಾವಿ : ವೈಜ್ಞಾನಿಕ ರೀತಿಯಲ್ಲಿ ಕಾಯಿಗಳನ್ನು ಕಟಾವು ಮಾಡಿ ನೈಸರ್ಗಿಕವಾಗಿ ಮಾಗಿಸಿದ ಹಾಗೂ ಕ್ಯಾಲ್ಸಿಯಂ, ಕಾರ್ಬೈಡ್ ಮುಕ್ತ ಹಣ್ಣುಗಳನ್ನು ಯೋಗ್ಯ ದರದಲ್ಲಿ ನೆರವಾಗಿ ರೈತರಿಂದಲೇ ಗ್ರಾಹಕರಿಗೆ ದೊರಕಿಸಲು ಮಾವು ಪ್ರದರ್ಶನ ಮತ್ತು ಮಾರಾಟ ಮೇಳ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಹೇಳಿದರು.

ತೋಟಗಾರಿಕೆ ಇಲಾಖೆ, ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ಕ್ಲಬ್ ರಸ್ತೆ ಹತ್ತಿರವಿರುವ ಹ್ಯೂಮ್ ಪಾರ್ಕ್ ನಲ್ಲಿ ಮೇ.26ರಿಂದ ಮೇ.29ರವರೆಗೆ 4ದಿನಗಳ ಕಾಲ ನಡೆಯುವ ಮಾವು ಪ್ರದರ್ಶನ ಮತ್ತು ಮಾರಾಟ ಮೇಳ-2022 ಉದ್ಘಾಟಿಸಿ ಅವರು ಮಾತನಾಡಿದರು.

ಮೇಳದಲ್ಲಿ ಹಲವು ಬಗೆಯ ಮಾವಿನ ಹಣ್ಣುಗಳು ಮಾರಾಟಕ್ಕಿವೆ. ಜಿಲ್ಲೆಯ ಎಲ್ಲ ಗ್ರಾಹಕರು ಯೋಗ್ಯ ದರದಲ್ಲಿ ಮಾವು ಖರೀದಿಸಿ ರುಚಿಕರ ಮಾವು ಸವಿಯಬಹುದು ಎಂದು ಹೇಳಿದರು. ಇದೇ ವೇಳೆ ಅರ್ಕಾ ಮೈಕ್ರೋಬಿಯಲ್ ಕನ್ಸಾರ್ಷಿಯಂ ದ್ರವ ರೂಪದ ಗೊಬ್ಬರವನ್ನೂ ಲೋಕಾರ್ಪಣೆಗೊಳಿಸಿದರು.

ಮಾವು ಪ್ರದರ್ಶನ ಕೋಣೆ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್ ಹೆಚ್.ವ್ಹಿ ಇಂಥ ಮೇಳಗಳು ರೈತರಲ್ಲಿ ಆತ್ಮ ವಿಶ್ವಾಸ ತುಂಬುತ್ತವೆ. ಬರೀ ಮಾವು ಪ್ರದರ್ಶನ ಅಷ್ಟೇ ಅಲ್ಲದೇ ಪ್ರತಿ ಎರಡು ತಿಂಗಳಿಗೊಮ್ಮೆ ರೈತರು ಬೆಳೆದ ವಿವಿಧ ತೋಟಗಾರಿಕಾ ಬೆಳೆಗಳ ಮೇಳವನ್ನೂ ಆಯೋಜಿಸಿ ರೈತರನ್ನು ಪ್ರೋತ್ಸಾಹಿಸಲಾಗುತ್ತದೆ ಎಂದು ತಿಳಿಸಿದರು.

ಮಾವಿನ ಮಳಿಗೆ ವೀಕ್ಷಿಸಿದ ಜಿಲ್ಲಾಧಿಕಾರಿ:

ಮೇಳವನ್ನು ಉದ್ಘಾಟಿಸಿ ಪ್ರತಿಯೊಂದು ಮಾವಿನ ಹೋಳಿಗೆಯನ್ನೂ ವೀಕ್ಷಿಸಿ ರೈತರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ರೈತರನ್ನು ಹುರಿದುಂಬಿಸಿದರು. ಬೆಳಗಾವಿ, ಖಾನಾಪುರ, ಧಾರವಾಡ, ಕಿತ್ತೂರ ಸೇರಿದಂತೆ ವಿವಿಧ ತಾಲೂಕುಗಳಿಂದ ಮಾವು ಮಾರಾಟಕ್ಕೆ ಬಂದಿದ್ದ ರೈತರು ತಾವು ಬೆಳೆದ ಮಾವಿನ ಮಾವು ಬಗ್ಗೆ ಜಿಲ್ಲಾಧಿಕಾರಿಗೆ ವಿವರಿಸಿದರು. ಮೇಳದಲ್ಲಿ ಬರೀ ಕರ್ನಾಟಕ ಅಷ್ಟೇ ಅಲ್ಲದೇ ಮಹಾರಾಷ್ಟ್ರದಿಂದಲೂ ಬಂದಿದ್ದ ರೈತರು ಮಾವು ಮಾರಾಟ ಮಾಡಿದರು.

ಗಮನ ಸೆಳೆದ ತರಹೇವಾರಿ ಮಾವು:

ತೊತಾಪುರಿ, ಕೇಸರ, ಮಲಗೋವಾ, ದೂಧಪೇಡಾ, ಕೊಂಕಣ ರುಚಿ, ಆಪೂಸ್,ರಸಪೂರಿ, ದಸೇರಿ, ಬೆನೆಶಾನ, ಸಿಂಧುರಿ, ಮಲ್ಲಿಕಾ, ಕೊಬ್ರಿಕಾಯಿ, ಕರಿ ಇಶಾಡಿ, ಯಾಕೃತಿ ಸೇರಿದಂತೆ ನೂರಕ್ಕೂ ಹೆಚ್ಚು ತರಹೇವಾರಿ ತಳಿಯ ರುಚಿಕರ ಮಾವಿನ ಹಣ್ಣುಗಳು ಗ್ರಾಹಕರ ಬಾಯಲ್ಲಿ ನೀರೂರಿಸಿದವು. ಹತ್ತು ಹಲವು ಬಗೆಯ ಉಪ್ಪಿನಕಾಯಿ ಮಾವಿನಕಾಯಿಗಳೂ ಪ್ರದರ್ಶನದಲ್ಲಿ ಗ್ರಾಹಕರ ಗಮನ ಸೆಳೆದವು. ಮೇಳ ಉದ್ಘಾಟನೆ ಆಗುವ ಮೊದಲೇ ಆಗಮಿಸುವದಕ್ಕೆ ಶುರುವಿಟ್ಟುಕೊಂಡ ಗ್ರಾಹಕರು ಮಾವು ಖರೀದಿಯಲ್ಲಿ ನಿರತರಾಗಾದ್ದರು.

ಈ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಮಹಾಂತೇಶ ಮುರಗೋಡ, ಬೆಳಗಾವಿ ವಿಭಾಗದ ಜಂಟಿ ನಿರ್ದೇಶಕರಾದ ಸೋಮಶೇಖರ ಹುಳ್ಳೊಳ್ಳಿ ಹಾಗೂ ಇಲಾಖೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

spot_img

Related News

ಇಂದು ರಾಜ್ಯಕ್ಕೆ ಭಾರತ್ ಜೋಡೋ ಯಾತ್ರೆ

ಚಾಮರಾಜನಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಬರಮಾಡಿಕೊಳ್ಳಲು ಕಾಂಗ್ರೆಸ್ ತಯಾರಿ ಜೋರಾಗಿದೆ. ನಾಯಕರನ್ನು ಸ್ವಾಗತಿಸಲು ರಾಜ್ಯ ಕಾಂಗ್ರೆಸ್‌ ನಾಯಕರು ಸರ್ವ ರೀತಿಯಲ್ಲೂ...

ಪ್ರತಿ ಇನ್ಸಸ್ಟಾಗ್ರಾಂ ಪೋಸ್ಟ್ ಗೆ 8 ಕೋಟಿ ರೂ. ಪಡೆಯುವ ವಿರಾಟ್ ಕೊಹ್ಲಿ

ನವದೆಹಲಿ: ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅವರು ಪ್ರತಿ ಪ್ರಾಯೋಜಿತ ಪೋಸ್ಟ್​ಗೆ ಬರೋಬ್ಬರಿ 8 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಿದ್ದಾರೆ. ಈ ಮೂಲಕ ಇನ್​ಸ್ಟಾಗ್ರಾಂನಲ್ಲಿ ಗರಿಷ್ಠ ಹಣ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -