ಸರ್ವ ಲೋಕ ಸೇವಾ ಫೌಂಡೇಶನ್ ವತಿಯಿಂದ ಇಂದು ಬಣಂತಿಯರಿಗೆ ಹಣ್ಣು ಹಾಗೂ ಶಾಲಗಳನ್ನು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸರ್ವ ಲೋಕಸೇವಾ ಫೌಂಡೇಶನ್ ಸದಸ್ಯರಾದ ವೀರೇಶ್ ಹಿರೇಮಠ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ ನಮ್ಮ ಸಂಸ್ಥೆ ಸಮಾಜ ಸೇವೆಯಲ್ಲಿ ತೊಡಗಿರುವಾಗ ಸಮಾಜದ ಗಣ್ಯಮಾನ್ಯ ಸಂಸ್ಥೆಗಳು ಹಾಗೂ ಗಣ್ಯ ಮಾನ್ಯ ವ್ಯಕ್ತಿಗಳು ನಮ್ಮ ಸೇವೆಯನ್ನು ಗಮನಿಸಿ ನಮಗೆ ಸಂಸ್ಥೆಯ ಸದಸ್ಯರುಗಳಿಗೆ ಆಶೀರ್ವಾದ ರೂಪದಲ್ಲಿ ನೀಡಿರುವ ವಸ್ತ್ರಗಳನ್ನು ನಾನು ಸಂಗ್ರಹಿಸಿ ಈಗ ಅವುಗಳನ್ನು ಭಗವಂತನ ರೂಪದಲ್ಲಿರುವ ಚಿಕ್ಕ ಮಕ್ಕಳಿಗೆ ಅರ್ಪಿಸುತ್ತಾ ಇದ್ದೇನೆ ಎಂದರು.
ಬೆಳಗಾವಿ ಬೀನ್ಸ್ ಆಸ್ಪತ್ರೆ ವೈದ್ಯರಾದ ಡಾ. ರಮೇಶ ಅವರು ಮಾತನಾಡಿ ಸರ್ವ ಲೋಕ ಸೇವಾ ಫೌಂಡೇಶನ್ ಅವರು ಮಾಡುತ್ತಿರುವ ಕಾರ್ಯವನ್ನು ಅಭಿನಂದಿಸಿ ಆಸ್ಪತ್ರೆಯ ಆಡಳಿತ ಮಂಡಳಿಯಿಂದ ಅಭಿನಂದನೆಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಆಸ್ಪತ್ರೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು