spot_img
spot_img
spot_img
21.1 C
Belagavi
Friday, September 30, 2022
spot_img

ಖಾಸಗಿ ಮಾರುಕಟ್ಟೆ ವಿರುದ್ಧ ರೈತರ ಪ್ರತಿಭಟನೆಗೆ ಡಿಕೆಶಿ ಸಾಥ್

spot_img

ವರದಿ : ರತ್ನಾಕರ್ ಗೌಂಡಿ

ಬೆಳಗಾವಿ: ಇಂದು ಬೆಳಗಾವಿಗೆ ಬೇಟಿ ನೀಡಿದ ಕೆಪಿಸಿಸಿ ರಾಜ್ಯಾಧ್ಯಕ್ಷ ಡಿಕೆ. ಶಿವಕುಮಾರ ಅವರು ಖಾಸಗಿ ಮಾರುಕಟ್ಟೆ ರದ್ದು ಮಾಡುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನಾ ಸ್ಥಳಕ್ಕೆ ಬೇಟಿ ನೀಡಿ ಪ್ರತಿಭಟನೆಗೆ ಸಾಥ್ ನೀಡಿದರು. ಈ ವೇಳೆ ಮಾದ್ಯಮಗಳೊಂದಿಗೆ ಮಾತನಾಡಿದ ಅವರು. ಜೈ ಕಿಸಾನ್ ಖಾಸಗಿ ಕೃಷಿ ಮಾರುಕಟ್ಟೆ ವಿರುದ್ಧ ಆಮರಣ ಉಪವಾಸ ಸತ್ಯಾಗ್ರಹವನ್ನು ಕಳೆದ 10 ದಿನಗಳಿಂದ ನಡೆಸಲಾಗುತ್ತಿದ್ದು ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಯಶಸ್ವಿಯಾಗಿದೆ.

ಕಾಂಗ್ರೆಸ್ ಪಕ್ಷ ರೈತರ ಪರವಾಗಿದೆ ರೈತರ ಹಿತ ಕಾಪಾಡಲು ಸದಾ ಸಿದ್ಧವಾಗಿದೆ ಜೈ ಕಿಸಾನ್ ಜೈ ಜವಾನ್ ಘೋಷಣೆಯನ್ನು ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು ಘೋಷಿಸಿದಾಗ ರೈತರು ಮತ್ತು ಸೈನಿಕರ ಮಹತ್ವವನ್ನು ಎತ್ತಿಹಿಡಿದಂತಾಗಿದೆ.

ಅದರ ಸಲುವಾಗಿ ಸರ್ಕಾರದ ವಿರುದ್ಧ ರೈತ ವಿರೋಧಿ ಸರ್ಕಾರ ರಾಜ್ಯದಲ್ಲಿರುವ ಕೃಷಿ ಮಾರುಕಟ್ಟೆ ಕಾನೂನುಗಳ ವಾಪಸ್ ಪಡೆಯಲು ಸರ್ಕಾರಕ್ಕೆ ಒತ್ತಡ ತರಲಾಗುವುದು. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ಸಿನ ಎಲ್ಲಾ ಶಾಸಕರುಗಳು ರೈತರ ಪರವಾಗಿ ನಿಂತು ರೈತರಿಗೆ ನ್ಯಾಯ ದೊರಕಿಸುವ ಸಲುವಾಗಿ ನಾವು ಪ್ರಯತ್ನಿಸಲಾಗುವುದು ಎಂದರು.

ಬಳಿಕ ಆಮರಣ ಸತ್ಯಾಗ್ರಹ ನಡೆಸುತ್ತಿದ್ದ ರೈತ ಮುಖಂಡ ಸಿದನಗೌಡ ಮೋದಗಿ ಅವರಿಗೆ ಉಪವಾಸ ಹಿಂಪಡೆಯಬೇಕೆಂದು ಮನವಿ ಮಾಡಿಕೊಂಡರು ಬಳಿಕ ಪ್ರತಿಭಟನಾಕಾರರು ಎಳೆನೀರು ಕುಡಿಯುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಕೈಬಿಟ್ಟರು.

spot_img

Related News

ಪ್ರತಿ ಇನ್ಸಸ್ಟಾಗ್ರಾಂ ಪೋಸ್ಟ್ ಗೆ 8 ಕೋಟಿ ರೂ. ಪಡೆಯುವ ವಿರಾಟ್ ಕೊಹ್ಲಿ

ನವದೆಹಲಿ: ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅವರು ಪ್ರತಿ ಪ್ರಾಯೋಜಿತ ಪೋಸ್ಟ್​ಗೆ ಬರೋಬ್ಬರಿ 8 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಿದ್ದಾರೆ. ಈ ಮೂಲಕ ಇನ್​ಸ್ಟಾಗ್ರಾಂನಲ್ಲಿ ಗರಿಷ್ಠ ಹಣ...

ಕೊಲೆಯಾದ ಪ್ರವೀಣ್ ಪತ್ನಿಗೆ ಸಿಎಂ ಕಚೇರಿಯಲ್ಲಿ ಗುತ್ತಿಗೆ ನೌಕರಿ 

ಬೆಂಗಳೂರು : ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -