spot_img
spot_img
spot_img
spot_img
spot_img
30.1 C
Belagavi
Sunday, December 3, 2023
spot_img

ಡಿಕೆಶಿ ಒಬ್ಬ ಬ್ಲ್ಯಾಕ್ ಮೇಲರ್, ಪುಕ್ಕಲ ವ್ಯಕ್ತಿ: ರಮೇಶ ಜಾರಕಿಹೊಳಿ

ಬೆಳಗಾವಿ: ಡಿಸಿಎಂ ಡಿಕೆ ಶಿವಕುಮಾರ್ ಸಿಡಿ ಮಾಸ್ಟರ್ ಮೈಂಡ್. ಸಿಡಿನೇ ಡಿಕೆಶಿ ಶಕ್ತಿಯಾಗಿದ್ದು ಆತ ಒಬ್ಬ ಪುಕ್ಕಲ, ಮೋಸಗಾರ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಉಪಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕನಕಪುರದಲ್ಲಿ ನಡೆದ ಎಲ್ಲಾ ಚುನಾವಣೆ ಹೊಂದಾಣಿಕೆ ಆಗಿವೆ. ರಾಜ್ಯದಲ್ಲಿ ಆಪರೇಷನ್ ಕಮಲ ಎಲ್ಲವೂ ಸುಳ್ಳು. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿಯ ಯತ್ನ ಮಾಡಲಾಗುತ್ತಿದೆ. ಲಾಟರಿ ಮಂತ್ರಿ, ಶಾಸಕರು ಯಾವಾಗಲೂ ಡೇಂಜರ್ ಎಂದರು.

ಡಿಸಿಎಂ ಡಿಕೆ ಶಿವಕುಮಾರ್ ನಾಟಕ ಮಂಡಳಿ ಬಿಜೆಪಿ ನಾಯಕರ ಹೆಸರು ಕೆಡಿಸುತ್ತಿದ್ದಾರೆ. 50, 100 ಕೋಟಿ ಎಂದು ಅಪಪ್ರಚಾರ ಮಾಡಲಾಗಿದೆ. 2019ರಲ್ಲಿ ಡಿಕೆಶಿ ಸೊಕ್ಕು, ದುರಾಡಳಿತದಿಂದ ನಾವೆಲ್ಲ ಪಕ್ಷಾಂತರ ಮಾಡಿದ್ದೇವೆ. ಆಪರೇಷನ್ ಕಮಲ ಎಲ್ಲವೂ ನಡೆಯುತ್ತಿಲ್ಲ ಎಲ್ಲವೂ ಸುಳ್ಳು. ಗ್ಯಾರಂಟಿ ಯೋಜನೆ ಫೇಲ್ ಆಗಿದೆ. ಹೀಗಾಗಿ ಜನರ ದಿಕ್ಕು ಬದಲು ಮಾಡಲು ಈ ರೀತಿಯಲ್ಲಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಶಿವಕುಮಾರ್ ಅಷ್ಟೇ ಯಾಕೆ ಆಪರೇಷನ್ ಕಮಲದ ಬಗ್ಗೆ ಮಾತನಾಡುತ್ತಿದ್ದಾರೆ. ಅನಿವಾರ್ಯವಾಗಿ ನಿನ್ನೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದಾರೆ. ಅತಿ ಶೀಘ್ರದಲ್ಲೇ ಡಿಕೆಶಿ ಮಾಜಿ ಮಂತ್ರಿ ಆಗಲಿದ್ದಾರೆ. ನನಗೆ ಆಗಿರೋ ಕಷ್ಟ ಸತೀಶ್ ಜಾರಕಿಹೊಳಿಗೆ ಆಗಲ್ಲ ಎಂದರು.

 

Related News

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ -ಜಮೀರ್ ಅಹ್ಮದ್ ಖಾನ್

ತೆಲಂಗಾಣದಲ್ಲಿ ನಾವೆಲ್ಲರೂ ಒಗ್ಗೂಡಿ ಪಕ್ಷವನ್ನು ಗೆಲ್ಲಿಸಿದ್ದೇವೆ. ತೆಲಂಗಾಣದಲ್ಲಿ ಕಾಂಗ್ರೆಸ್​ಗೆ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. 70ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಸಿದ್ದರಾಮಯ್ಯ, ಡಿಕೆ & ನಾನು ಟೀಂ...

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು -ಎಂ.ಬಿ.ಪಾಟೀಲ್

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾರರ ತೀರ್ಪನ್ನು ಒಪ್ಪಲೇಬೇಕು. ಗ್ಯಾರಂಟಿಗೆ ವಿರೋಧ ಮಾಡಿದವರು ಗ್ಯಾರಂಟಿ ಘೋಷಣೆ ಮಾಡಿದರು ಎಂದು ವಿಜಯಪುರದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸ ಇದೆ....

Latest News

- Advertisement -
- Advertisement -
- Advertisement -
- Advertisement -