ನವದೆಹಲಿ : ಡಿಸೆಂಬರ್ 1 ರಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಾಯೋಗಿಕವಾಗಿ, ಚಿಲ್ಲರೆ ವ್ಯಾಪಾರಕ್ಕಾಗಿ ಡಿಜಿಟಲ್ ರೂಪಾಯಿಯನ್ನ ಪರಿಚಯಿಸಲಿದೆ.
ನಿಯಂತ್ರಕ ಸಂಸ್ಥೆ ನವೆಂಬರ್ 1ರಂದು ಭಾರತದಲ್ಲಿ ಸಗಟು ಗಾಗಿ ಡಿಜಿಟಲ್ ರೂಪಾಯಿಯನ್ನ ಪ್ರಾರಂಭಿಸಿದ ಒಂದು ತಿಂಗಳ ನಂತರ ಇದು ಬಂದಿದೆ.
ಹೊಸದಾಗಿ ಬಿಡುಗಡೆಯಾದ ಇ₹-ಆರ್ ಮತ್ತು ಇ₹-ಡಬ್ಲ್ಯು ಭಾರತದ ಸ್ವಂತ ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಎರಡು ರೂಪಾಂತರಗಳಾಗಿವೆ.
ಈ ಕುರಿತು ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಆರ್ ಬಿ ಐ ಭಾಗವಹಿಸುವ ಗ್ರಾಹಕರು ಮತ್ತು ವ್ಯಾಪಾರಿಗಳನ್ನು ಒಳಗೊಂಡಿರುವ ಕ್ಲೋಸ್ಡ್ ಯೂಸರ್ ಗ್ರೂಪ್ ಯಲ್ಲಿ ಆಯ್ದ ಸ್ಥಳಗಳನ್ನ ಪೈಲಟ್ ಒಳಗೊಳ್ಳಲಿದ್ದಾರೆ ಎಂದು ತಿಳಿಸಿದೆ.
ಪ್ರಸ್ತುತ ಕಾಗದದ ಕರೆನ್ಸಿ ಮತ್ತು ನಾಣ್ಯಗಳನ್ನ ಹೇಗೆ ಬಿಡುಗಡೆ ಮಾಡಲಾಗ್ತಿದ್ಯೋ ಅದೇ ಮುಖಬೆಲೆಯ ನಾಣ್ಯಗಳಲ್ಲಿ ಡಿಜಿಟಲ್ ಕರೆನ್ಸಿ ನೀಡಲಾಗುವುದು. ಇದನ್ನ ಮಧ್ಯವರ್ತಿಗಳ ಮೂಲಕ ಅಂದರೆ ಬ್ಯಾಂಕುಗಳ ಮೂಲಕ ವಿತರಿಸಲಾಗುವುದು ಎಂದರು. ಡಿಜಿಟಲ್ ವ್ಯಾಲೆಟ್ ಮೂಲಕ ಬಳಕೆದಾರರು ಡಿಜಿಟಲ್ ರೂಪಾಯಿಯೊಂದಿಗೆ ವಹಿವಾಟು ನಡೆಸಲು ಸಾಧ್ಯವಾಗುತ್ತದೆ ಎಂದು ಹೇಳಿದೆ.