ಬೆಂಗಳೂರು: ಕೆಎಸ್ ಆರ್ ಟಿಸಿ ಮತ್ತಷ್ಟು ಜನಸ್ನೇಹಿಯಾಗುತ್ತಿದೆ, ತನ್ನ ಪ್ರಯಾಣಿಕರಿಗೆ ಗುಡ್ನ್ಯೂಸ್ ನೀಡಲು ಮುಂದಾಗಿದೆ. ಚಿಲ್ಲರೆ ಸಮಸ್ಯೆಗೆ ಪರಿಹಾರ ಸೂಚಿಸುವ ‘ಡಿಜಿಟಲ್ ಪಾವತಿ’ ಸೌಲಭ್ಯ ಕಲ್ಪಿಸಲು ಮುಂದಾಗಿದೆ.
ಯುಪಿಐ ಮೂಲಕ ಹಣ ಪಾವತಿಸಿ ಟಿಕೆಟ್ ಖರೀದಿಸಬಹುದು. ಇಷ್ಟು ದಿನ ಕೆಎಸ್ಆರ್ ಟಿಸಿಯಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಇರಲಿಲ್ಲ. ಸಂಸ್ಥೆಯ ಹೊಸ ನಿಯಮದ ಪ್ರಕಾರ, ಆನ್‌ಲೈನ್ ಮೂಲಕವೂ ಹಣ ಪಡೆಯಲು ಅವಕಾಶ ನೀಡುವ ವೇಳೆ ಆಗುವ ಕಿರಿಕಿರಿ ತಪ್ಪಲಿದೆ. ಕೆಲವು ನಿರ್ವಾಹಕರು ಹಣ ಪಡೆದು ಟಿಕೆಟ್ ನೀಡದೇ ಇರುವ ಪ್ರಕರಣಗಳು ಸಹ ತಪ್ಪಲಿದೆ.