spot_img
spot_img
spot_img
34.1 C
Belagavi
Monday, May 29, 2023
spot_img

1.38 ಕೋಟಿ ರೂ. ವೆಚ್ಚದಲ್ಲಿ ರಸ್ತೆಗಳ ಅಭಿವೃದ್ಧಿ: ಚನ್ನರಾಜ ಹಟ್ಟಿಹೊಳಿ ಪೂಜೆ

ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮಾಸ್ತಮರ್ಡಿ, ಬಸರೀಕಟ್ಟಿ ಹಾಗೂ ತಾರಿಹಾಳ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಅಭಿವೃದ್ಧಿಗಾಗಿ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ 1.18 ಕೋಟಿ ರೂ,ಗಳನ್ನು ಬಿಡುಗಡೆ ಮಾಡಿಸಿದ್ದು, ಭಾನುವಾರ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾಸ್ತಮರ್ಡಿ ಗ್ರಾಮದಲ್ಲಿ ಪೂಜೆಯನ್ನು ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಮಯದಲ್ಲಿ ಅಶೋಕ ತೋರ್ಲಿ, ಪ್ರಕಾಶ ಪಾಟೀಲ, ಸಂತೋಷ ಮಡ್ಡೆಪ್ಪಗೋಳ, ಯಲ್ಲಪ್ಪ ತೋರ್ಲಿ, ಮಹಾಂತವ್ವ ಮರಕಟ್ಟಿ, ಶ್ರೀಶೈಲ್ ಪಾಟೀಲ, ಸುರೇಶ ಪಾಟೀಲ, ವಿಜಯ ಪಾಟೀಲ, ಬಾಬು ತೋರ್ಲಿ, ಬಸವರಾಜ ಕೋಲಕಾರ, ಈರಪ್ಪ ಮಠಾರಿ, ರಾಘವೇಂದ್ರ ಮಾವಿನಕಟ್ಟಿ, ಚಂದ್ರು ಜಂಗ್ಲಿ, ಮಾರುತಿ ಚೌಗುಲಾ, ಶಿವರಾಯ ಬರಣಿ, ಮಹಾಂತೇಶ ಪಾರಿಶ್ವಾಡ್ ಮುಂತಾದವರು ಉಪಸ್ಥಿತರಿದ್ದರು.

 

ನಂತರ ಶೆಗಣಮಟ್ಟಿ ಗ್ರಾಮದೊಳಗಿನ ರಸ್ತೆಗಳ ನಿರ್ಮಾಣದ ಸಲುವಾಗಿ 20 ಲಕ್ಷ ರೂ. ಅನುದಾನವನ್ನು ಮಂಜೂರು ಮಾಡಿಸಲಾಗಿದ್ದು, ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆಗಳ ನಿರ್ಮಾಣದ ಕಾಮಗಾರಿಗಳಿಗೆ ಸಹ ಚನ್ನರಾಜ ಹಟ್ಟಿಹೊಳಿ ಭೂಮಿ ಪೂಜೆಯನ್ನುನೆರವೇರಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸಂತೋಷ ಅಷ್ಟೇಕರ್, ವಿಶ್ವನಾಥ ಕಿಲಿಕೇತರ್, ಮಹಾವೀರ ಪಾಟೀಲ್, ಪಾರಿಶ್ ಪಾಟೀಲ, ಸಂತು ಸನದಿ, ಗುಂಡು ದೇಸಾಯಿ, ರಫಿಕ್ ಸನದಿ, ರಾಜು ಪಾಟೀಲ, ಸುಭಾಷ ಪಾಟೀಲ, ಹನುಮಂತ ಪಾಟೀಲ, ಫಕೀರ್ ಪಾಟೀಲ, ನಾಗೇಶ ಮ್ಯಾಗೇರಿ ಮುಂತಾದವರು ಉಪಸ್ಥಿತರಿದ್ದರು.

Related News

ಒಳ್ಳೆಯ ದಿನಗಳು ಬರುತ್ತವೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನಿರಾಸೆ ಆಗಿಲ್ಲ: ಲಕ್ಷ್ಮಣ ಸವದಿ

ಚಿಕ್ಕೋಡಿ: ಮನುಷ್ಯನಿಗೆ ದೂರದೃಷ್ಟಿ ಮತ್ತು ತಾಳ್ಮೆ ರಾಜಕೀಯದಲ್ಲಿ ಬಹಳ ಮುಖ್ಯ. ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ನನಗಂತೂ ನಿರಾಸೆ ಆಗಿಲ್ಲ. ಒಳ್ಳೆಯ ದಿನಗಳು ಬರುತ್ತವೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದ್ದಾರೆ. ಅಥಣಿ ಪಟ್ಟಣದಲ್ಲಿ ಪ್ರತಿಕ್ರಿಯೆ...

ಜುಲೈನಲ್ಲಿ ಚಂದ್ರಯಾನ-3 ಉಡಾವಣೆ: ಎಸ್ ಸೋಮನಾಥ್

ಈ ವರ್ಷ ಜುಲೈನಲ್ಲಿ ಚಂದ್ರಯಾನ-3 ಉಡಾವಣೆ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಅಧ್ಯಕ್ಷ ಎಸ್ ಸೋಮನಾಥ್ ಸೋಮವಾರ ಹೇಳಿದ್ದಾರೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಅವರ ಬಾಹ್ಯಾಕಾಶ ಕೇಂದ್ರದಿಂದ ಎರಡನೇ ಜನರೇಷನ್ನ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -