spot_img
spot_img
spot_img
21.1 C
Belagavi
Friday, September 30, 2022
spot_img

ಸಾರ್ವಜನಿಕ ಶಿಕ್ಷಣ ಇಲಾಖೆ ಬಿ.ಐ.ಇ.ಆರ್.ಟಿ ಹುದ್ದೆಗಳಿಗೆ ಅರ್ಜಿ ಆಹ್ವಾನ 

spot_img

ಬೆಳಗಾವಿ : 2022-23 ನೆ ಸಾಲಿನಲ್ಲಿ ಸಮನ್ವಯ ಶಿಕ್ಷಣ ಮಧ್ಯವರ್ತನೆ ಅನುಷ್ಠಾನಗೊಳಿಸಲು ಸರ್ಕಾರಿ ಹಾಗೂ ನೇರ ಗುತ್ತಿಯಡಿಯಲ್ಲಿ. ಬಿ.ಐ .ಇ.ಆರ್.ಟಿ ಜಿಲ್ಲೆಯಲ್ಲಿ ಖಾಲಿ ಇರುವ ಬಿ.ಐ.ಇ.ಆರ್.ಟಿ ಹುದ್ದೆಗಳಿಗೆ ನೇರ ಗುತ್ತಿಗೆಯಡಿ ನೇಮಕಾತಿ ಮಾಡಿಕೊಳ್ಳುವ ಸಂಬಂಧ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ದಿನಾಂಕ 24 ಮೇ 2022 ರ ಸಂಜೆ 5:00 ಗಂಟೆಯೊಳಗಾಗಿ ನಿಗದಿತ ವಿದ್ಯಾರ್ಹತೆ ಹೊಂದಿರುವ ಆಸಕ್ತ ಸರ್ಕಾರಿ ಶಿಕ್ಷಕರು ತಮ್ಮ ಅರ್ಜಿಯ ಜೊತೆಗೆ ಎಲ್ಲಾ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರಗಳನ್ನು ತಮ್ಮ ಬಿ.ಇ.ಓ ಕಚೇರಿಗೆ ಅರ್ಜಿ ಸಲ್ಲಿಸುವುದು ಹಾಗೂ ಸರ್ಕಾರಿ ಶಿಕ್ಷಕರಿಂದ ಪಡೆದಂತಹ ಅರ್ಜಿಗಳನ್ನು ಸಂಬಂಧಿಸಿದ ವಲಯಗಳ ಬಿ.ಇ.ಓ ರವರು ತಮ್ಮ ಹಂತದಲ್ಲಿ ನಿಯಮಾನುಸಾರ ಸುತ್ತೋಲೆಗಳಂತೆ ಪರಿಶೀಲಿಸಿ ಅರ್ಹವಿರುವ ಶಿಕ್ಷಕರ ಅರ್ಜಿಗಳನ್ನು ದೃಢೀಕರಿಸಿ ಸಲ್ಲಿಸುವುದು.

ಮತ್ತು ಸರ್ಕಾರಿ ಶಿಕ್ಷಕರಿಂದ ನೇಮಕಾತಿ ಹಾಗೂ ನಿಯೋಜನೆ ನಂತರ ಖಾಲಿ ಉಳಿಯವ ಬಿ.ಐ.ಇ.ಆರ್. ಟಿ ಹುದ್ದೆಗಳಿಗೆ ತಾತ್ಕಾಲಿಕವಾಗಿ ನೇರಗುತ್ತಿಗೆ ಬಯಸುವ ಅಭ್ಯರ್ಥಿಗಳು ಜಿಲ್ಲಾ ಕಚೇರಿಗೆ ಅರ್ಜಿಯ ಜೊತೆಗೆ ತಮ್ಮ ಎಲ್ಲಾ ಅಂಕಪಟ್ಟಿಗಳು, ಆರ್.ಸಿ.ಐ ಪ್ರಮಾಣ ಪತ್ರ, ವಿಶೇಷ ಶಿಕ್ಷಣ ಪ್ರಮಾಣ ಪತ್ರ ಹಾಗೂ ಈ ಹಿಂದೆ ಸೇವ ಸಲ್ಲಿಸಿದಲ್ಲಿ ಸೇವಾ ವಿವರ ದಾಖಲೆಗಳನ್ನು ಜಿಲ್ಲಾ ಕಚೇರಿ ದಿನಾಂಕ 25 ಮೇ 2022 ರಂದು ಸಂಜೆ 5;00 ಗಂಟೆಯೊಳೆಗೆ ಅರ್ಜಿಯನ್ನು ಖುದ್ದಾಗಿ/ಅಂಚೆ ಮೂಲಕ ಸಮಗ್ರ ಶಿಕ್ಷಣ ಕರ್ನಾಟಕ ಬೆಳಗಾವಿ ಈ ಕಚೇರಿ ಸಲ್ಲಿಸಲು ಸೂಚಿಸಲಾಗಿದೆ.

ಖಾಲಿ ಇರುವ ಹುದ್ದೆಗಳ ವಿವರ; ಪ್ರಾಥಮಿಕ ವಿಭಾಗ -(ಒಟ್ಟು 04) ಬೆಳಗಾವಿನಗರ-01, ಬೆಳಗಾವಿ ಗ್ರಾಮೀಣ-01 ಖಾನಾಪೂರ-01 ಸವದತ್ತಿ-01 ಪ್ರೌಢ ವಿಭಾಗ-(ಒಟ್ಟು 13) ಬೈಲಹೊಂಗಲ-2, ಕಿತ್ತೂರು-2, ಬೆಳಗಾವಿ ನಗರ-1, ಬೆಳಗಾವಿ ಗ್ರಾಮೀಣ-2, ಖಾನಾಪೂರ-2, ರಾಮದುರ್ಗ-2, ಸವದತ್ತಿ-2 ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಸಂಪರ್ಕಿಸಿ ಎಂದು ಉಪರ್ನೀಶಕರು (ಆ) ಸಾ.ಶಿ.ಇ ಬೆಳಗಾವಿ ಇವರನ್ನು ಸಂಪರ್ಕಿಸಬಹುದು ಎಂದು ಸಾ.ಶಿ.ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_img

Related News

ಪ್ರತಿ ಇನ್ಸಸ್ಟಾಗ್ರಾಂ ಪೋಸ್ಟ್ ಗೆ 8 ಕೋಟಿ ರೂ. ಪಡೆಯುವ ವಿರಾಟ್ ಕೊಹ್ಲಿ

ನವದೆಹಲಿ: ವಿರಾಟ್​ ಕೊಹ್ಲಿ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಂನಲ್ಲೂ ಹೊಸ ದಾಖಲೆ ಬರೆದಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ಅವರು ಪ್ರತಿ ಪ್ರಾಯೋಜಿತ ಪೋಸ್ಟ್​ಗೆ ಬರೋಬ್ಬರಿ 8 ಕೋಟಿ ರೂಪಾಯಿ ಚಾರ್ಜ್​ ಮಾಡುತ್ತಿದ್ದಾರೆ. ಈ ಮೂಲಕ ಇನ್​ಸ್ಟಾಗ್ರಾಂನಲ್ಲಿ ಗರಿಷ್ಠ ಹಣ...

ಕೊಲೆಯಾದ ಪ್ರವೀಣ್ ಪತ್ನಿಗೆ ಸಿಎಂ ಕಚೇರಿಯಲ್ಲಿ ಗುತ್ತಿಗೆ ನೌಕರಿ 

ಬೆಂಗಳೂರು : ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ ಕುಮಾರಿ ಅವರಿಗೆ ಮುಖ್ಯಮಂತ್ರಿ ಕಚೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ನೀಡಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆದೇಶಿಸಿದ್ದಾರೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -