spot_img
spot_img
spot_img
28.1 C
Belagavi
Thursday, September 29, 2022
spot_img

ನರೇಗಾದಲ್ಲಿ ಕೆಲಸ ನೀಡಲು ವಿಳಂಬ : ಪಿಡಿಒ ಹಾಗೂ ಸಿಬ್ಬಂದಿಗಳ ಮೇಲೆ ಹಲ್ಲೆ 

spot_img

ದಾವಣಗೆರೆ: ನರೇಗಾ ಕೆಲಸ ನೀಡಲು ವಿಳಂಬ ಮಾಡಿದ್ದಾರೆಂಬ ಯುವಕರಿಬ್ಬರ ಪಿಡಿಒ, ಸಿಬ್ಬಂದಿ ಮೇಲೆ ಹಲ್ಲೆ ‌ನಡೆಸಿ ಪೀಠೋಪಕರಣ ಧ್ವಂಸ ಮಾಡಿರುವ ಘಟನೆ ಜಿಲ್ಲೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟೆ ಗ್ರಾಮದಲ್ಲಿ ನಡೆದಿದೆ.

ಬಿದರಹಳ್ಳಿ ಗ್ರಾಮದ ಆರೋಪಿಗಳಾದ ಸಿದ್ದೇಶ್ ನಾಯ್ಕ್ , ಲಕ್ಕಿನಕೊಪ್ಪದ ಗಿರೀಶ್ ನಾಯ್ಕ್​ರಿಂದ ನರೇಗಾ ಕೆಲಸಕ್ಕಾಗಿ ದಾಂಧಲೆ ನಡೆಸಿದ್ದಾರೆ.

ತಮಗೆ ಬೇಕಾದ ಕಡೆ ನರೇಗಾ ಕೆಲಸ ಕೊಡಿ‌ ಎಂದು ಪಿಡಿಓಗೆ ಹಾಗು ಪಂಚಾಯಿತಿ ಸಿಬ್ಬಂದಿಗೆ ಒತ್ತಾಯಿಸಿದರು. ಇದಕ್ಕೆ ವಿರೋಧಿಸಿದ್ದಕ್ಕೆ ಪಿಡಿಓ ಹಾಗೂ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ‌ ನಿಂದಿಸಿದ ಆರೋಪಿಗಳಿಬ್ಬರು ಕಚೇರಿಯಲ್ಲಿದ್ದ ಕುರ್ಚಿ, ಕಿಟಕಿ‌ಗಾಜುಗಳನ್ನು ಒಡೆದು ಹಾಕಿದ್ದಾರೆ.

ಈ ಸಂಬಂಧ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

spot_img

Related News

ತಾಳ್ಮೆ ಕಳೆದುಕೊಂಡು ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ : ಮಾಜಿ ಸಿಎಂ ಯಡಿಯೂರಪ್ಪ 

ಶಿವಮೊಗ್ಗ: ಇತ್ತೀಚೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತಾಳ್ಮೆ ಕಳೆದುಕೊಂಡು ಹುಚ್ಚುಚ್ಚರಾಗಿ ಮಾತನಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ವಾಗ್ದಾಳಿ ನಡೆಸಿದ್ದಾರೆ. ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯಗೆ ತಲೆಕೆಟ್ಟಿದೆ....

ಯಾರ ಮೇಲೆ ಜಾಸ್ತಿ ಪ್ರೀತಿ ಇರುತ್ತೋ ಅವರ ಮೇಲೆ ರೈಡ್ ಮಾಡ್ತಾರೆ : ಡಿಕೆಶಿ 

ಬೆಂಗಳೂರು: ಈಗಾಗಲೇ ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವಂತ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ನಿನ್ನೆ ದಾಳಿ ನಡೆಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿ.ಕೆ ಶಿವಕುಮಾರ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -