ಬೆಳಗಾವಿ: ಮತ್ತೆ ಎಂಇಎಸ್ ಪುಂಡರು ಗಡಿ ವಿಚಾರದಲ್ಲಿ ಕ್ಯಾತೆ ತೆಗೆದಿದ್ದಾರೆ. ಮೊನ್ನೆ ನಡೆಯಬೇಕಿದ್ದ ಮಹಾಮೇಳಾವ್ ಗೆ ಅನುಮತಿ ನೀಡದ್ದಕ್ಕೆ ನಾಡದ್ರೋಹಿ ಎಂಇಎಸ್ ಮಹಾರಾಷ್ಟ್ರಕ್ಕೆ ತೆರಳಿ ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ಕೊಲ್ಲಾಪುರದಲ್ಲಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಸೇರಿ ಪುಂಡಾಟ ಮುಂದುವರಿಸಿದ್ದಾರೆ. ಮಹಾವಿಕಾಸ್ ಆಘಾಡಿ ಸಭೆಯಲ್ಲಿ ಬೆಳಗಾವಿಯ ಎಂಇಎಸ್ ನಾಯಕರು ಭಾಗಿಯಾಗಿದ್ದು ಬೈಕ್ ರ‍್ಯಾಲಿ ಮೂಲಕ ಬೆಳಗಾವಿಯಿಂದ ಕೊಲ್ಲಾಪುರಕ್ಕೆ ತೆರಳಲು ಎಂಇಎಸ್ ಪುಂಡರ ತೀರ್ಮಾನ ಮಾಡಿದ್ದಾರೆ.
ಡಿಸೆಂಬರ್ 26ರಂದು ಬೆಳಗಾವಿಯಿಂದ ಕೊಲ್ಲಾಪುರಕ್ಕೆ ತೆರಳಿ ಪ್ರತಿಭಟನೆ ನಡೆಸಲು ನಿರ್ಧಾರ ಮಾಡಿದ್ದು, ನಿಪ್ಪಾಣಿ ತಾಲೂಕಿನ ಕೊಗನೊಳ್ಳಿ ಟೋಲ್‌ಗೇಟ್‌ನಿಂದ ಬೈಕ್ ರ‍್ಯಾಲಿಗೆ ತೀರ್ಮಾನಿಸಿದ್ದಾರೆ.