ಧಾರವಾಡ : ಸಾಲಗಾರರ ಕಿರುಕುಳಕ್ಕೆ ಬೇಸತ್ತು ಬಾಡಿ ಬಿಲ್ಡರ್ ಯೊಬ್ಬರು ಆತ್ಮಹತ್ಯೆ ಶರಣಾದ ಘಟನೆ ನಗರದ ಹೊಸಯಲ್ಲಾಪುರ ಪ್ರದೇಶದಲ್ಲಿ ನಡೆದಿದೆ. ಬಾಡಿ ಬಿಲ್ಡರ್ ಪ್ರಭಾಕರ ಆನಂದಪ್ಪ ಕಬ್ಬಾರ ಮೃತಪಟ್ಟ ದುರ್ದೈವಿ. ಮನೆಯ ಮೇಲ್ಚಾವಣಿಗೆ ಹಗ್ಗ ಕಟ್ಟಿ ನೇಣು ಹಾಕಿಕೊಂಡಿದ್ದಾರೆ.
40 ವರ್ಷದ ಪ್ರಭಾಕರ, ಆಟೋ ಓಡಿಸಿ ಕೊಂಡು ಜೀವನ ನಡೆಸುತ್ತಿದ್ದ,ಆದ್ರೆ ಅಡ್ಡದಾರಿ ಹಿಡಿದ ಇಸ್ಪೀಟ್ ಆಟದಿಂದ ಸಾಲದಲ್ಲಿ ಸುಳಿಯಲ್ಲಿ ಸಿಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.

ಇಸ್ಪೀಟ್ ಚಟಕ್ಕೂ ಮುಂಚೆ ಒಳ್ಳೆಯ ಜನ ಸಂಪರ್ಕ ಹೊಂದಿದ , ಆದ್ರೆ ಕಳೆದ 1 ವರ್ಷದಿಂದ ಜನರ ಸಂಪರ್ಕದಿಂದ ದೂರವುಳಿದಿದ್ದನೆಂದು ಹೇಳಲಾಗಿದೆ. ಅತಿಯಾದ ಇಸ್ಪೀಟ್ ನಿಂದ ಸಾಲ ಹೆಚ್ಚಾಗಿತ್ತೆಂದು ಗೊತ್ತಾಗಿದ್ದು, ಪೊಲೀಸರು ಶವವನ್ನ ಮರ ಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.