ಉತ್ತರ ಪ್ರದೇಶ : ನಿನ್ನೆ ಪಂಚರಾಜ್ಯಗಳ ಚುನಾವಣೆ ಅಂತ್ಯ ವಾಗಿದ್ದು, ಇದರಲ್ಲಿ ಉತ್ತರಪ್ರದೇಶ ಕೂಡ ಒಂದು ಹೀಗೆ ಚುನಾವಣೆ ಕರ್ತವ್ಯದಲ್ಲಿದ್ದ ಕರ್ನಾಟಕ ಮೂಲದ ಸಿಐಎಸ್ಎಫ್ ಯೋಧರೊಬ್ಬರು ಸೋಮವಾರ ಮೃತಪಟ್ಟ ಘಟನೆ ಚಂದೌಲಿ ಜಿಲ್ಲೆಯಲ್ಲಿ ನಡೆದಿದೆ.
ಮೃತ ಯೋಧನನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲ್ಲೂಕಿನ ಕುರ್ಲಿ ಗ್ರಾಮದ ನಿವಾಸಿ ನವಂತ್ ಅಪ್ಪಾಸಾಹೇಬ ದೀವಾಟೆ (43) ಎಂದು ಗುರುತಿಸಲಾಗಿದೆ.ಕರ್ತವ್ಯದಲ್ಲಿದ್ದಾಗಲೇ ಯೋಧ ನವಂತ್ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಟ್ಟಿದೆ. ಹೀಗಾಗಿ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು.
ಆದರೆ ವೈದ್ಯರು ಯೋಧ ನವಂತ್ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಯೋಧ ನವಂತ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಸ್ಥಳೀಯ ಪೊಲೀಸರು ಯೋಧ ನವಂತ್ ‘ರ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಶವಗಾರಕ್ಕೆ ರವಾನಿಸಿದ್ದಾರೆ.