ಕೋಲಾರ : ಗ್ರಾಮದೇವತೆ ಮೆರವಣಿಗೆ ವೇಳೆ ದೇವರನ್ನು ಮುಟ್ಟಿದ್ದಾನೆ ಎಂದು ದಲಿತ ಸಮುದಾಯದ ಬಾಲಕನಿಗೆ 60 ಸಾವಿರ ರೂಪಾಯಿ ದಂಡ ವಿಧಿಸಿರುವ ಘಟನೆ ಜಿಲ್ಲೆಯ ಮಾಲೂರು ತಾಲೂಕಿನ ಹುಳ್ಳೆರಹಳ್ಳಿಯಲ್ಲಿ ನಡೆದಿದೆ.
ಕಳೆದ ಮೂರು ದಿನಗಳ ಹಿಂದೆ ಹುಳ್ಳೆರಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಮೆರವಣಿಗೆ ವೇಳೆ ಗ್ರಾಮದ ಚೇತನ್ ಎಂಬ ದೇವರನ್ನು ಮುಟ್ಟಿದ್ದಾನೆ ಎಂದು ಅರೋಪಿಸಿ ಬೆದರಿಕೆ ಹಾಕಿ 60,000 ರೂಪಾಯಿ ದಂಡ ವಿಧಿಸಲಾಗಿದೆ. ಮಾಸ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.