ಇವತ್ತು ಅಪ್ಪನ ನೆನೆಯೋ ದಿನ ಏನು ಹೇಳೋದು ಈ ದಿನ ಇಷ್ಟಾರ್ಥ ಪೂರ್ಣಗೊಳಿಸುವ ಯಾರಿಗಾದರೂ ಸಾಮರ್ಥ್ಯ ಇರುವುದಾದರೆ ಭಗವಂತ ಅಪ್ಪನಿಗೆ ಮಾತ್ರ ನೀಡಿದ್ದಾನೆ.
ಅಮ್ಮ 9 ತಿಂಗಳ ಪೋಷಿಸಿ ಜನ್ಮ ನೀಡುತ್ತಾಳೆ, ಆದರೆ ತಂದೆ ಜೀವನದ ಭಾಷೆ ಅರಿವು ಆಗುವವರೆಗೂ ಮಕ್ಕಳನ್ನು ಪೂಷಿಸುತ್ತಾನೆ. ಇಲ್ಲಿ ಯಾರು ಹೆಚ್ಚು ಯಾರು ಕಡಿಮೆ ಅನ್ನುವ ಮಾತಲ್ಲ, ಇದು ಕರ್ತವ್ಯದ ಮಾರ್ಗ ಮಾತ್ರ.
ಮಾತಿನಲ್ಲಿ ಬರುವಂತ ಸರಳವಾದ ಮಾತು ಗಾಡ್ ಫಾದರ್ ಇರಬೇಕು. ಬದುಕಿನ ಗುರಿ ಮುಟ್ಟಲು ತಂದೆ ಮಕ್ಕಳನ್ನು ಅರಿವಿಲ್ಲದೆನೆ ಅವರ ಗುರಿ ಮುಟ್ಟಲು ಪ್ರತಿಯೊಂದು ಹೆಜ್ಜೆ ಹೆಜ್ಜೆಗೂ ದಾರಿ ಮಾಡುತ್ತಾ ಹೋಗುತ್ತಾನೆ. ಪ್ರಪಂಚದಲ್ಲಿ ಎಷ್ಟು ಮಕ್ಕಳಿಗೆ ಅಪ್ಪ ಆದರ್ಶವಾಗಿ ನಿಲ್ಲುತ್ತಾನೆ. ಪ್ರತಿಯೊಂದು ಕ್ಷೇತ್ರಗಳಲ್ಲಿ ಮಕ್ಕಳ ಮತ್ತು ಅಪ್ಪನ ಸತತ ಪ್ರಯತ್ನ ಅವನ ಪರಿಶ್ರಮ ಮಕ್ಕಳಲ್ಲಿ ಕಾಣುತ್ತಾನೆ.
ಅಪ್ಪನ ಹೃದಯವಂತಿಕೆ ಹೆಚ್ಚಾಗಿ ಮಕ್ಕಳ ಗಮನಿಸುವುದಿಲ್ಲ. ಅವನ ಕಠೋರ ಸ್ವಭಾವ ಇದಕ್ಕೆ ಕಾರಣವಾಗಿರಬಹುದು ಆದರೆ ಅಪ್ಪ ಮಾತ್ರ ದೃಢತೆಯಿಂದ ಮಕ್ಕಳ ಹಿಂದೆ ನಿಲ್ಲುತ್ತಾನೆ. ನಾನು ಹೇಳೋದು ಇಷ್ಟೇ, ಇಂದು ಗಾಡ್ ಫಾದರ್ ದಿನಾಚರಣೆ ಒಂದು ಅಪ್ಪುಗೆ ಅಪ್ಪನಿಗೆ ಇರಲಿ. ಅಪ್ಪ ನೀವು ನನಗೆ ಯಾವತ್ತೂ ಪ್ರೇರಣೆ ಸ್ವರೂಪ…
– ರತ್ನಾಕರ ಸುಬ್ಬರಾವ್ ಗೌಂಡಿ