ಬೆಳಗಾವಿ ವಿಜಯನಗರ ರಸ್ತೆ ಚರಂಡಿ ಕಳಪೆ ಕಾಮಗಾರಿ ಮಾಡಲಾಗಿದೆ ಎಂದು ಸ್ಥಳೀಯ ನಾಗರೀಕರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸ್ಥಳೀಯರಾದ ದಯಾನಂದ ಭುಗನ್ ಹಿಂಡಲಗಾ ರೋಡ್ ಜಯನಗರ ಗಲ್ಲಿ
ಎಲ್ಲಿ ಕೈಗೊಂಡಿರುವ ಚರಂಡಿ ನಿರ್ಮಾಣ ಹಾಗೂ ಸಿಡಿ ನಿರ್ಮಾಣ ಸಂಪೂರ್ಣ ಕಳಪೆ ಮತ್ತು ಅಧಿಕಾರಿಗಳ ನಿರ್ಲಕ್ಷ ಹಾಗೂ ಗುತ್ತಿಗೆದಾರನ ಕೈಚಳಕ ವಾಗಿದೆ. ಹೆಸರಿಗೆ ಮಾತ್ರ ಸಿಮೆಂಟ್ ಉಪಯೋಗಿಸಿರುವ ಹಾಗಿದೆ.
ಈ ರಸ್ತೆ ಸುಮಾರು 15 ದಿನಗಳಿಂದ ಸಂಪೂರ್ಣವಾಗಿ ಹದಿಗೆಟ್ಟು ಹೋಗಿದೆ. ಇದನ್ನು ನಿರ್ಮಾಣ ಮಾಡಿದ ದಿನದಿಂದಲೇ ಈ ರಸ್ತೆ ಹದಿಗೆಟ್ಟಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಗಲಿಯಲ್ಲಿ ಹೆಚ್ಚಾಗಿ ಸರ್ಕಾರಿ ಅಧಿಕಾರಿಗಳ ನಿವಾಸ ಇದು ಆದರೂ ಕೂಡ ಯಾರೋ ಒಬ್ಬರು ಈ ಕಡೆ ಗಮನ ನೀಡುತ್ತಿಲ್ಲ.
ಈ ಕಾಮಗಾರಿ ಯಾವ ಯೋಜನೆಯಲ್ಲಿ ನಿರ್ಮಾಣವಾಗಿದೆ, ಇದರ ಗುತ್ತಿಗೆಗಾರರ ಹೆಸರು ಏನು? ಈ ಕಾಮಗಾರಿಗೆ ವೆಚ್ಚ ಎಷ್ಟಾಗಿದೆ ಹಾಗೂ ಇದು ಯಾವ ಇಲಾಖೆಯ ಸಂಬಂಧ ಪಟ್ಟ ಕಾಮಗಾರಿಯಾಗಿದೆ ಅನ್ನುವುದು ಮಾತ್ರ ವಿಸ್ಮಯ. ಯಾಕೆಂದರೆ ಕಾಮಗಾರಿಗೆ ನಾಮಫಲಕ ಇರದೇ ಇರುವುದು ಸಾರ್ವಜನಿಕರಿಗೆ ಗೊಂದಲ ಉಂಟುಮಾಡಿದೆ.
ಆದಷ್ಟು ಬೇಗ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳು ಈ ಕಾಮಗಾರಿಗೆ ಕಡೆ ಗಮನ ನೀಡಬೇಕು ಹಾಗೂ ಅಲ್ಲಿಯ ಸ್ಥಳೀಯ ಸರ್ಕಾರಿ ಅಧಿಕಾರಿಗಳು ನಿಮ್ಮ ಸಮಸ್ಯೆಗೆ ನೀವೇ ಉತ್ತರ ನೀಡಬೇಕಾಗಿದೆ ಎಂದು ಅಗ್ರಹಿಸಿದ್ದಾರೆ.