spot_img
spot_img
spot_img
spot_img
spot_img
spot_img
spot_img
18.8 C
Belagavi
Tuesday, December 5, 2023
spot_img

ಧರ್ಮಸ್ಥಳವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಅನುಷ್ಠಾನಗೊಳಿಸುವ ಬಗ್ಗೆ ಸಮಾಲೋಚನ ಸಭೆ

ಧರ್ಮಸ್ಥಳ ಗ್ರಾಮವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಅನುಷ್ಠಾನಗೊಳಿಸುವ ಬಗ್ಗೆ ಧರ್ಮಸ್ಥಳ ಗ್ರಾಮದ ಸಂಘ ಸಂಸ್ಥೆಯ ಮುಖಂಡರು, ದೇವಸ್ಥಾನ ಚರ್ಚ್, ಮಸೀದಿ ಮುಖಂಡರುಗಳು, ಊರಿನ ಹಿರಿಯ ಪ್ರಮುಖರು, ನಿವೃತ್ತ ನೌಕರರು, ಅಧಿಕಾರಿಗಳು, ಮಹಿಳಾ ಸ್ವಸಹಾಯ ಸಂಘದ ಒಟ್ಟು ಸೇರಿ ಧರ್ಮಸ್ಥಳ ಗ್ರಾಮ್ ಪಂಚಾಯ್ತಿ ಸಭಾಂಗಣದಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ವಿಮಲಾ ಇವರ ಅಧ್ಯಕ್ಷತೆಯಲ್ಲಿ ಸಾಮಾಲೋಚನ ಸಭೆ ನಡೆಯಿತು.

ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸರಕಾರದ ನಿರ್ದೇಶನದಂತೆ ಕರ್ನಾಟಕದ ಪ್ರಮುಖ 5 ನಗರಗಳನ್ನು ಆಯ್ಕೆ ಮಾಡಿ, ಕಲಬುರ್ಗಿ, ಬೀದರ್, ಮೈಸೂರು, ಮಂಗಳೂರು, ಧರ್ಮಸ್ಥಳ ಸೇರಿದಂತೆಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಅನುಷ್ಠಾನಗೊಳಿಸುವ ಬಗ್ಗೆ ರಾಜ್ಯದಲ್ಲಿ ಆಯ್ಕೆ ಮಾಡಿ ಸೂಚನೆ ನೀಡಿರುವುದರಿಂದ ಸದರಿ ಸರಕಾರದ ಸುತ್ತೋಲೆಯಲ್ಲಿ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನ ಅಂದರೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಪ್ಲಾಸ್ಟಿಕ್ ಬ್ಯಾನರ್ಗಳು, ಪ್ಲಾಸ್ಟಿಕ್ ಫ್ಲೆಕ್ಸ್, ಪ್ಲಾಸ್ಟಿಕ್ ಪ್ಲೇಟುಗಳು, ಪ್ಲಾಸ್ಟಿಕ್ ಧ್ವಜಗಳು, ಪ್ಲಾಸ್ಟಿಕ್ ಕಪ್ ಗಳು, ಪ್ಲಾಸ್ಟಿಕ್ ಸ್ಪೂನುಗಳು, ಅಂಟಿಕೊಳ್ಳುವ ಫಿಲ್ಮಗಳು, ಎಲ್ಲಾ ದಪ್ಪದ ಡೈನಿಂಗ್ ಟೇಬಲ್ಗಳಲ್ಲಿ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಟ್ರಾಾಗಳು, ಥರ್ಮಾಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋಮಣಿಗಳಿಂದ ಮಾಡಿದ ವಸ್ತುಗಳು, ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು, ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಕೆ ಆಮದು ಸಂಗ್ರಹಣೆ ವಿತರಣೆ ಮಾರಾಟ ಮತ್ತು ಬಳಕೆಯನ್ನುಪ್ಲಾಸ್ಟಿಕ್ ಸ್ಟಿಕ್ ಬೆಡ್ಡುಗಳು ಬಲೂನ್ ಗಳಿಗೆ ಬಳಸುವ ಪ್ಲಾಸ್ಟಿಕ್ ಗಳು,ಆಮಂತ್ರಣ ಪತ್ರಗಳು, 100 ಮೈಕ್ರೋಳಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವಾ pvc ಬ್ಯಾನರ್ಗಳು,ಎಲ್ಲಾ ವಸ್ತುಗಳ ಉತ್ಪಾದಕರು, ದಾಸ್ತಾನುದಾರರು, ಕಿಲ್ಲರ ವ್ಯಾಪಾರಿಗಳು, ಅಂಗಡಿ ಮಾಲೀಕರು, ಬೀದಿ ವ್ಯಾಪಾರಿಗಳು, ವಾಣಿಜ್ಯ ಸಂಸ್ಥೆಗಳು, ಮಾಲುಗಳು,ಮಾರುಕಟ್ಟೆ ಸ್ಥಳ, ಶಾಪಿಂಗ್ ಕೇಂದ್ರಗಳು, ಪ್ರವಾಸೋದ್ಯಮ ಸ್ಥಳಗಳು, ಶಾಲೆ , ಕಚೇರಿ ಸಂಕೀರ್ಣಗಳು, ಆಸ್ಪತ್ರೆ, ಇತರ ಸಂಸ್ಥೆಗಳು, ಮತ್ತು ಸಾಮಾನ್ಯ ಸಾರ್ವಜನಿಕ ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಉತ್ಪಾದನೆ ಸಂಗ್ರಹಣೆ ವಿತರಣೆ ಮಾರಾಟ ಮತ್ತು ಬಳಕೆಯನ್ನು ಕಟ್ಟುವಂತಾಗಿ ನಿಲ್ಲಿಸುವಂತೆ ಈಗಾಗಲೇ ಕೇಂದ್ರ ಮಾಲಿನಿ ನಿಯಂತ್ರಣ ಮಂಡಳಿ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಾಗೂ ಸರಕಾರದಿಂದ ಸೂಕ್ತ ನಿರ್ದೇಶನ ನೀಡಲಾಗಿದ್ದು. ಈ ಬಗ್ಗೆ ಸದ್ರಿ ಆದೇಶದಲ್ಲಿ ಆಯ್ಕೆಯಾದ ಐದು ನಗರಗಳಲ್ಲಿ ಧರ್ಮಸ್ಥಳ ಸೇರಿ ಏಕ ಬಳಕೆ ಪ್ಲ್ಯಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ಸೂಚಿಸಿರುತ್ತಾರೆ.

ಈ ಬಗ್ಗೆ ಧರ್ಮಸ್ಥಳ ಗ್ರಾಮದಲ್ಲಿ ಸ್ವಚ್ಛತೆಯ ನಿರಂತರತೆಯ ಸುಸ್ಥಿರತೆಯನ್ನು ಕಾಪಾಡುವ ನಿಟ್ಟಿನಲ್ಲಿ. ಸದ್ರಿ ಆದೇಶಕ್ಕೆ ಸಹಮತ ಸೂಚಿಸಿ.ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ಬಗ್ಗೆ ಸಂಪೂರ್ಣ ಸಹಕಾರ ನೀಡುವ ಬಗ್ಗೆ ತೀರ್ಮಾನಿಸಿ. ಗ್ರಾಮ ಪಂಚಾಯತಿ ಕೈಗೊಳ್ಳುವ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವಂತೆ ತೀರ್ಮಾನಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಂಗಳೂರು ಪರಿಸರ ಅಧಿಕಾರಿ ಡಾ. ರವಿ ಡಿ. ಆರ್. ಇಲಾಖೆಯಿಂದ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸ್ವಚ್ಛ ಭಾರತ್ ಮಿಷನ್ ಜಿಲ್ಲಾ ಸಮಾಲೋಚಕರಾದ ಶ್ರೀ ಡೊಂಬಯ್ಯ ಕಾರ್ಯಕ್ರಮದ ವಿವರವನ್ನು ತಿಳಿಸಿದರು. ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ಶ್ರೀ ಪಿ ಶ್ರೀನಿವಾಸ್ ರಾವ್ ಕಾರ್ಯಕ್ರಮ ಅನುಷ್ಠಾನ ಮಾಡುವ ಬಗ್ಗೆ ಸಹಕಾರ ಕೋರಿದರು. ಸ್ವಚ್ಛತೆಯ ಅನುಷ್ಠಾನದ ಗ್ರಾಮ ಪಂಚಾಯತು ಕ್ರಿಯ ಯೋಜನೆ ಬಗ್ಗೆ ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀ ಹರೀಶ್ ಸುವರ್ಣ, ಶ್ರೀ ಸುಧಾಕರ ಗೌಡ, ಶ್ರೀಮತಿ ಶರ್ಮಿಳ, ಶ್ರೀಮತಿ ಭಾರತಿ, ಶ್ರೀಮತಿ ರೀನಾ, ಶ್ರೀ ದಿನೇಶ್ ರಾವ್, ಶ್ರೀ ಹರ್ಷಿತ್ ಜೈನ್, ಶ್ರೀ ಮುರಳಿಧರ ದಾಸ್, ಶ್ರೀ ಕಿಶೋರ್ ಭಂಡಾರಿ, ಶ್ರೀ ಕೆ ರಾಮಚಂದ್ರರಾವ್ , ಶ್ರೀ ಕ್ಷೇತ್ರ ಧರ್ಮಸ್ಥಳ ಮ್ಯಾನೇಜರ್ ಶ್ರೀ ಪಾರ್ಶ್ವನಾಥ ಜೈನ್, ಕ್ಷೇತ್ರದ ಆಪ್ತ ಕಾರ್ಯದರ್ಶಿ ಶ್ರೀ ವೀರು ಶೆಟ್ಟಿ, ಮಂಡಲ ಪಂಚಾಯತ್ ಮಾಜಿ ಪ್ರಧಾನರಾದ ಶ್ರೀ ಸುಂದರ ಗೌಡ, ಪಂಚಾಯತ್ ಮಾಜಿ ಅಧ್ಯಕ್ಷರಾದ ಶ್ರೀ ಕೇಶವ್ ಗೌಡ ಪಿ, ಶ್ರೀಮತಿ ಪದ್ಮಾವತಿ ಆರ್ ರಾವ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಪ್ರೀತಮ್, ಉಪಾಧ್ಯಕ್ಷರಾದ ಅಜಿತ್ ಕುಮಾರ್, ನಿರ್ದೇಶಕರಾದ ಶ್ರೀ ಪ್ರಭಾಕರ ಗೌಡ ಬೊಲ್ಮ, ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಶ್ರೀ ನೀಲಕಂಠ ಶೆಟ್ಟಿ, ಸಹಾಯಕ ಸಿಇಒ ಶ್ರೀ ಶ್ರೀನಿವಾಸ ನಾಯ್ಕ, ಜಾನುವಾರು ಅಧಿಕಾರಿ ಡಾ. ಜಯಕೀರ್ತಿ ಜೈನ್, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜು, ಸಂಘ ಸಂಸ್ಥೆಯ ಮುಖಂಡರು, ಶಾಲಾ ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರು, ಶಾಲಾ ಮುಖ್ಯೋಪಾಧ್ಯಾಯರುಗಳು, ಧರ್ಮಸ್ಥಳ ಪೊಲೀಸ್ ಠಾಣೆ ಅಧಿಕಾರಿಗಳು, ಅಂಗಡಿ ಹೋಟೆಲ್ ಮಾಲಕರು, ನಿವೃತ್ತ ಸರಕಾರಿ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತೆಯರು, ಸ್ವಸಹಾಯ ಸಂಘದ ಪ್ರತಿನಿಧಿಗಳು, ಯುವತಿ ಮಂಡಲದ ಸದಸ್ಯರು, ಉಪಸ್ಥಿತರಿದ್ದರು, ಕಾರ್ಯದರ್ಶಿ ಶ್ರೀ ದಿನೇಶ್ ಎಂ ಸ್ವಾಗತಿಸಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀ ಉಮೇಶ್ ಕೆ. ಪ್ರಸ್ತಾಪಿಸಿದರು. ಡಾ. ದೇವಿಪ್ರಸಾದ್ ಬೊಲ್ಮ ಕಾರ್ಯಕ್ರಮ ನಿರೂಪಿಸಿ. ಲೆಕ್ಕಸಹಾಯಕರಾದ ಶ್ರೀಮತಿ ಪ್ರಮೀಳ ವಂದಿಸಿದರು.

Related News

2030 ರೊಳಗೆ ಅಪೌಷ್ಠಿಕತೆ ಗಣನೀಯ ಪ್ರಮಾಣದಲ್ಲಿ ನಿಯಂತ್ರಣ-ಸಚಿವ ದಿನೇಶ್ ಗುಂಡೂರಾವ್

ಸುವರ್ಣ ಸೌಧ ಬೆಳಗಾವಿ: ಮಹಿಳೆಯರು ಮತ್ತು ಮಕ್ಕಳಲ್ಲಿರುವ ರಕ್ತಹೀನತೆ(ಅನೀಮಿಯಾ)ವನ್ನು 2030 ರೊಳಗೆ ಸಂಪೂರ್ಣವಾಗಿ ನಿವಾರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ವಿಧಾನಪರಿಷತ್ತಿನ ಶೂನ್ಯ ವೇಳೆಯಲ್ಲಿ ಸದಸ್ಯ ನಾಗರಾಜ್...

ಆನೆ ಹಾವಳಿ ನಿಯಂತ್ರಣ ಸಿಬ್ಬಂದಿಗೆ ಹೆಚ್ಚಿನ ತರಬೇತಿ-ಸಚಿವ ಈಶ್ವರ ಖಂಡ್ರೆ

ಸುವರ್ಣ ಸೌಧ ಬೆಳಗಾವಿ: ರಾಜ್ಯದಲ್ಲಿ ಈಗಾಗಲೇ ಏಳು ಆನೆ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದ್ದು, ಆನೆ ಹಿಡಿಯಲು ನಿಯೋಜಿಸಿರುವ ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುವುದ ಎಂದು ಅರಣ್ಯ ,ಜೈವಿಕ ಮತ್ತು ಪರಿಸರ ಸಚಿವ ಈಶ್ವರ...

Latest News

- Advertisement -
- Advertisement -
- Advertisement -
- Advertisement -