spot_img
spot_img
spot_img
24.8 C
Belagavi
Thursday, June 1, 2023
spot_img

ರಾಜ್ಯದ 5 ಸ್ಥಳಗಳಲ್ಲಿ ಶಾಶ್ವತ ಪ್ರದರ್ಶನ ಮಾರಾಟ ಮಳಿಗೆ ನಿರ್ಮಾಣ : ಬೊಮ್ಮಾಯಿ 

ಬೆಳಗಾವಿ : ಸ್ತ್ರಿ ಸಾಮರ್ಥ್ಯ ಅನುಷ್ಠಾನಕ್ಕಾಗಿ ಅಯವ್ಯಯದಲ್ಲಿ ರೂ. 1000 ಕೋಟಿ ಅನುದಾನ ಮೀಸಲಿರಿಸಲಾಗಿದೆ. ಯೋಜನೆಯಿಂದ ರಾಜ್ಯದ 33 ಸಾವಿರ ಮಹಿಳಾ ಸಂಘದ 5 ಲಕ್ಷ ಮಹಿಳೆಯರಿಗೆ ಲಾಭವಾಗಿದೆ. ಸ್ತ್ರೀ ಸಾಮರ್ಥ್ಯ ಯೋಜನೆಯಿಂದ ದೇಶದಲ್ಲಿ ದೊಡ್ಡ ಕ್ರಾಂತಿ ಉಂಟಾಗಲಿದೆ.

ಮಹಿಳಾ ಸ್ವ ಸಂಘ ಉತ್ಪನ್ನಗಳ ಮಾರಾಟಕ್ಕೆ ರಾಜ್ಯದ 5 ಸ್ಥಳಗಳಲ್ಲಿ ಶಾಶ್ವತ ಪ್ರದರ್ಶನ ಮಾರಾಟ ಮಳಿಗೆ ನಿರ್ಮಾಣ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಳಗಾವಿ ಸರದಾರ ಮೈದಾನದಲ್ಲಿ ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ ಮತ್ತು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ ಬೆಳಗಾವಿ ರವರ ಸಹಯೋಗದೊಂದಿಗೆ ಮಹಿಳಾ ಸ್ವ-ಸಾಹಾಯ ಸಂಘಗಳ ಉತ್ಪನ್ನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ಹಾಗೂ ಆರಂಭಿಕ ಗ್ರಾಮೀನ ಉದ್ದಿಮೆ ಯೋಜನೆಯ ಸಮುದಾಯ ಉದ್ಯಮ ನಿಧಿ ವಿತರಿಸಿ ಮುಖ್ಯಮಂತ್ರಿಗಳು ಮಾತನಾಡಿದರು.

ಸ್ತ್ರೀ ಸಾಮಥ್ರ್ಯ ಯೋಜನೆ ಮೂಲಕ ದೇಶದ ಅಭಿವೃಧ್ದಿ ಮಾಡುತ್ತಿರುವುದು ನಮ್ಮ ತಾಯಂದಿರು. ಸ್ತ್ರೀ ಸಾಮಥ್ರ್ಯದ ಮೌಲ್ಯಮಾಪನವಾಗಬೇಕು.

ಮಹಿಳೆಯರು ನಿರ್ವಹಿಸುವ ಮನೆ ಕೆಲಸ ಹಾಗೂ ಸೇವೆ ಸಾಮಾನ್ಯವಾದುದಲ್ಲ. ಮಹಿಳೆಯರ ಶ್ರಮಕ್ಕೆ ಯಾರೂ ಬೆಲೆ ನೀಡುವುದಿಲ್ಲ. ಮನೆ ಕೆಲಸ ಮಾಡುವ ಮಹಿಳೆಯರಿಗೂ ಗೌರವ ಸಿಗಬೇಕು. ಅವರ ಕೆಲಸಕ್ಕೆ ಆದಾಯ ಬರಬೇಕು.

ಗ್ರಾಮೀಣ ಭಾಗದಲ್ಲಿ ಮಹಿಳೆಯರು ಪುರುಷರು ರೀತಿಯಲ್ಲಿ ಹೆಚ್ಚು ಕೆಲಸ ಮಾಡುತ್ತಾರೆ. ಆದರೆ ಅವರಿಗೆ ಕಡಿಮೆ ಕೂಲಿ ನೀಡುತ್ತಾರೆ. ದೀನ ದಲಿತ ಮಹಿಳೆಯರು ಆಹಾರ ಕೊರತೆ ಎದುರಿಸುತ್ತಾರೆ. ಸ್ವಂತ ಭೂಮಿ ಇಲ್ಲದ ಅವರು ಬೇರೆಯವರ ಮನೆ ಹಾಗೂ ಜಮೀನಿನಲ್ಲಿ ದುಡಿಯುತ್ತಾರೆ. ಮಹಿಳೆಯರಿಗಾಗಿ ಅಭಿವೃಧ್ದಿಗಾಗಿ ಮುಂದಿನ ಅಯವ್ಯಯದಲ್ಲಿ ವಿಶೇಷ ಯೋಜನೆ ಘೋಷಣೆ ಮಾಡಲಾಗುವುದು.

ಸದ್ಯ ಸರ್ಕಾರದಿಂದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ 2 ಮಹಿಳಾ ಸಂಘಗಳಿಗೆ 1 ಲಕ್ಷ ಸಹಾಯಧನ ಹಾಗೂ ಬ್ಯಾಂಕ್ ಸಾಲ ನೀಡಿ ಅವರ ಸ್ವ ಉದ್ಯೋಗ ನೆರವು ನೀಡಲಾಗಿದೆ. ಅಮೃತ ಯೋಜನೆಯಡಿ 5000 ಸಾವಿರ ಮಹಿಳೆಯರಿಗೆ ಸಹಾಯ ಒದಗಿಸಲಾಗಿದೆ.

ಕರಕುಶಲತೆ ಭಾರತೀಯ ನಾರಿಯರಿಗೆ ದೇವರು ಕೊಟ್ಟ ವರ. ಇದಕ್ಕೆ ಮಾರುಕಟ್ಟೆ ಒದಗಿಸಲು ಪ್ರದರ್ಶನ ಮೇಳ ಆಯೋಜಿಸಲಾಗಿದೆ. ಆನ್‍ಲೈನ್ ಮಾರುಕಟ್ಟೆಗೆ ಮಹಿಳಾ ಸಂಘಗಳನ್ನು ಜೋಡಿಸಲು ಚಿಂತನೆ ನಡೆಸಲಾಗಿದೆ. ಮಹಿಳಾ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತಿರಿಸುವ ಕೆಲಸ ಮಾಡಲಗುವುದು.

ಮಹಿಳೆಯರ ಸಾಮಥ್ರ್ಯದ ಮೇಲೆ ನಂಬಿಕೆಯಿಂದ ಹೆಚ್ಚಿನ ಬಂಡವಾಳ ಹೂಡಲು ಸಿಧ್ದನಿದ್ದೆನೆ. ಮಹಿಳೆಯರು ತಂತ್ರಜ್ಞಾನ ಅಳವಡಿಸಿಕೊಂಡು ನವೀನ ಮಾದರಿ ಉದ್ಯಮ ಪ್ರಾರಂಭಿಸಬೇಕು ಎಂದರು.

ಉನ್ನತ ಶಿಕ್ಷಣ, ಐಟಿ ಬಿಟಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃಧ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸಚಿವ ಡಾ. ಸಿ.ಎನ್. ಅಶ್ವಥ ನಾರಾಯಣ ಮಾತನಾಡಿ ಮುಖ್ಯಮಂತ್ರಿಗಳು ಮಹಿಳಾ ಸ್ವಸಹಾಯ ಸಂಘಗಳಿಗೆ ಶಕ್ತಿ ಹಾಗೂ ನಾಯಕತ್ವ ನೀಡಿ ಮಹಿಳೆಯರು ಸಬಲೀಕರಣಕ್ಕೆ ಹಗಲಿರುಳು ದುಡಿಯುತ್ತಿದ್ದಾರೆ. ಸ್ವ-ಸಹಾಯ ಸಂಘಗಳಿಗೆ ಪ್ರಥಮ ಆದ್ಯತೆ ನೀಡಲಾಗಿದೆ.

ಮಹಿಳೆಯರ ಆರ್ಥಿಕ ಸಧೃಡತೆ ಶ್ರಮಿಸಲಾಗುತ್ತಿದೆ. ಈ ವರ್ಷದ ಅಯವ್ಯಯದಲ್ಲಿ ರೂ. 1000 ಕೋಟಿ ನೀಡಿ ಜೀವನೋಪಾಯ ವರ್ಷ ಎಂದು ಘೋಷಿಸಲಾಗಿದೆ. ಸ್ತ್ರೀ ಸಾಮಥ್ರ್ಯ ಯೋಜನೆಗೆ 500 ಕೋಟಿ ನೀಡಲಾಗಿದೆ. ಮಾರುಕಟ್ಟೆ ಬಲವರ್ಧನೆಗೆ, ಕೌಶಲ್ಯ ಅಭಿವೃದ್ದಿ ಇ ಕಾಮರ್ಸ ಸಂಸ್ಥೆಗಳೊಂದಿಗೆ ಒಡಂಬಡಿಕೆಯ ಮಾಡಿಕೊಳ್ಳಲಾಗಿದೆ.

ಆವಿಷ್ಕಾರ, ಪ್ರಗತಿಪರ ತಂತ್ರಜ್ಞಾನದಲ್ಲಿ ರಾಜ್ಯ ಮುಂಚೂಣ ಯಲ್ಲಿದೆ. ಇದರ ಲಾಭ ಮಹಿಳೆಯರಿಗೂ ಲಭಿಸಿ ನಮ್ಮ ನಾಡಿನ ಮಹಿಳೆಯರು ವಿಶ್ವ ಮಟ್ಟದ ಪ್ರಗತಿ ಹೊಂದಬೇಕು. ರಾಜ್ಯದ ವಿವಿಧ ಜಿಲ್ಲೆಗಳ ಮಹಿಳಾ ಸ್ವ-ಸಹಾಯ ಉತ್ಪನ್ನ ಸಂಘಗಳು ಭಾಗವಹಿಸಿದ ಬೆಳಗಾವಿ ಮೇಳ ಆಯೋಜನೆಗೆ ರೂ. 1 ಕೋಟಿ ಖರ್ಚು ಮಾಡಲಾಗಿದೆ ಎಂದರು.

ಶಾಸಕ ಅನಿಲ ಬೆನಕೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಬೆಳಗಾವಿ ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿಯನ್ನು ಹಂಚಿಕೊಂಡಿದ್ದು, ಬೆಳಗಾವಿಯಲ್ಲಿ ಶಾಶ್ವತ ಪ್ರದರ್ಶನ ಹಾಗೂ ಮಾರುಕಟ್ಟೆ ಸ್ಥಾಪಿಸಲು ಮುಖ್ಯಮಂತ್ರಿಗಳಲ್ಲಿ ಕೋರಿದರು.

ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಸೆಲ್ವಕುಮಾರ ಪ್ರಸ್ತಾವಿಕವಾಗಿ ಮಾತನಾಡಿ ಈ ಮೆಳದಲ್ಲಿ 160 ಮಳಿಗೆ ಸ್ಥಾಪಿಸಲಾಗಿದೆ. ಆಹಾರ ಮಳಿಗೆಗಳನ್ನು ತೆರೆಯಲಾಗಿದೆ. ಮಹಿಳೆಯ ಅಭಿವೃದ್ದಿಗಾಗಿ ಸ್ತ್ರೀ ಸಾಮಥ್ರ್ಯ ಯೋಜನೆಯಡಿ ರೂ. 500 ಕೋಟಿ ಅನುದಾನ ಒದಗಿಸಲಾಗಿದೆ. ಇದರಿಂದ 50 ಸಾವಿರ ಮಹಿಳಾ ಕುಟುಂಬಗಳಿಗೆ ಒಳಿತಾಗಲಿ ಎಂದರು.

ಕಾರ್ಯಕ್ರಮದಲ್ಲಿ ಗ್ರಾಮೀಣ ಉದ್ಯಮ ಯೋಜನೆಯಡಿ ಕೊಪ್ಪಳ ಹಾಗೂ ಮಯಸೂರಿನ ತಾಲೂಕುಗಳ ಮಹಿಳಾ ಸ್ವ-ಸಹಾಯ ಸಂಘಗಳಿಗೆ 50 ಲಕ್ಷ ರೂಪಾಯಿ ಚೆಕ್ ವಿತರಣೆ ಮಾಡಲಾಯಿತು. ತಾಂತ್ರಿಕ ಬೆಂಬಲ ಸಂಸ್ಥೆಗಳಿಗೆ ಒಡಂಬಡಿಕೆಯ ಪತ್ರಗಳನ್ನು ವಿತರಿಸಲಾಯಿತು.

Related News

ಶೆಟ್ಟರ್​, ಲಕ್ಷ್ಮಣ್ ಸವದಿ ನಮ್ಮ ನಾಯಕರು ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ

ಬೆಳಗಾವಿ: ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆ ಇದೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕರು ಎಂದು...

ರಾಜ್ಯದ ವಿವಿದೆಡೆ ಲೋಕಾಯುಕ್ತ ದಾಳಿ

ಬೆಂಗಳೂರು:  ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮೇ 31) ಬೆಳ್ಳಂಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಮತ್ತೊಂದೆಡೆ ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ ತುಮಕೂರಿನ ಕೆಐಎಡಿಬಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -