ಬೆಳಗಾವಿ : ಕಳೆದ ಐದು ವರ್ಷಗಳಲ್ಲಿ 36117 ಹೊಸ ಶಾಲಾ ಕಟ್ಟಡಗಳನ್ನು ನಿರ್ಮಿಸಲಾಗಿದ್ದು,18618 ಕಟ್ಟಡಗಳನ್ನು ದುರಸ್ಥಿ ಮಾಡಲಾಗಿದೆ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.ವಿಧಾನಸಭೆಯಲ್ಲಿ ಗುರುವಾರ ಶಾಸಕ ಪ್ರಿಯಾಂಕ್ ಖರ್ಗೆಯವರ ಪ್ರಶ್ನೆಗೆ ಅವರು ಉತ್ತರಿಸಿದರು.
ಹಿಂದಿನ ಸರ್ಕಾರ ಕಾಲ ಕಾಲಕ್ಕೆ ತಕ್ಕಂತೆ ಶಾಲಾ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ಥಿಕಾರ್ಯ ಮಾಡದ ಹಿನ್ನೆಲೆ ನಮ್ಮ ಸರ್ಕಾರ ಇಷ್ಟೊಂದು ಪ್ರಮಾಣದ ಕಟ್ಟಡಗಳ ನಿರ್ಮಾಣ ಹಾಗೂ ದುರಸ್ಥಿಗೆ ದೊಡ್ಡ ಮೊತ್ತದ ಅನುದಾನ ಬಳಸಬೇಕಾಗಿದೆ ಎಂದುಅವರು ತಿಳಿಸಿದರು.
2013ರಿಂದ 18ರವರೆಗೆ ಶಾಲಾಕಟ್ಟಡಗಳ ದುರಸ್ಥಿ ಆಗಿರುವುದಿಲ್ಲ ಹಾಗಾಗಿ ನಮ್ಮ ಸರ್ಕಾರ ಅವಧಿಯಲ್ಲಿ ದುರಸ್ಥಿ ಕಾರ್ಯ ಹೆಚ್ಚಾಗಿದೆ, ಪ್ರತಿವರ್ಷ 3 ಸಾವಿರ ಕೊಠಡಿಗಳ ದುರಸ್ಥಿ ಆಗುತ್ತಿದೆ ಮತ್ತು ಪಠ್ಯಪುಸ್ತಕಗಳ ಸುಳ್ಳು ಇತಿಹಾಸ ತೆÀಗೆದು ಸತ್ಯವನ್ನಷ್ಟೇ ಹೇಳಲಾಗುತ್ತ್ತಿದೆ ಎಂದರು.
2022-23 ನೇ ಸಾಲಿನ ಯುಸೈಡ್/ ಸ್ಯಾಟ್ಸ್ ಅಂಕಿ ಅಂಶಗಳ ಪ್ರಕಾರ 75,675 ಸರ್ಕಾರಿ ಶಾಲಾ ಕೊಠಡಿಗಳಿಗೆ ದುರಸ್ಥಿ ಅವಶ್ಯಕತೆಇರುತ್ತದೆ.ಈ ಪೈಕಿ 36,724 ಕೊಠಡಿಗಳಿಗೆ ಸಣ್ಣ ಪ್ರಮಾಣದ ಅವಶ್ಯಕತೆ ಇರುತ್ತದೆ. ಪ್ರತಿ ಕೊಠಡಿಗಳಿಗೆ ರೂ.2 ಲಕ್ಷಗಳಂತೆ ಒಟ್ಟು ರೂ.73448 ಲಕ್ಷಗಳ ಅವಶ್ಯಕತೆ ಇರುತ್ತದೆ.38,951 ಕೊಠಡಿಗಳಿಗೆ ದೊಡ್ಡ ಪ್ರಮಾಣದ ದುರಸ್ಥಿಯ ಅವಶ್ಯಕತೆಇದ್ದು, ಪ್ರತಿ ಕೊಠಡಿಗೆಐದು ಲಕ್ಷಗಳಂತೆ ಒಟ್ಟು ರೂ.194755 ಲಕ್ಷಗಳ ಅವಶ್ಯಕತೆ ಇರುತ್ತದೆ. ಒಟ್ಟು 75.675 ಕೊಠಡಿಗಳ ದುರಸ್ತಿಗೆ 2682 ಕೋಟಿಗಳ ಅವಶ್ಯಕತೆ ಇರುತ್ತದೆ ಎಂದರು