ಹಾವೇರಿ : ಗ್ರಾಮ ಪಂಚಾಯಿತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವ ಸಲುವಾಗಿ ರೆಸಾರ್ಟ್ ನಲ್ಲಿ ಬೀಡು ಬಿಟ್ಟಿದ್ದ ಸದಸ್ಯರು ವಿಮಾನದಲ್ಲಿ ಬಂದು ಈಗ ನಿರ್ಣಯ ಮಂಡನೆ ಮಾಡಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಗ್ರಾಮ ಪಂಚಾಯಿತಿಯಲ್ಲಿ ನಡೆದಿದ್ದು, ಇಲ್ಲಿನ 9 ಮಂದಿ ಸದಸ್ಯರು ಕಳೆದ 40 ದಿನಗಳಿಂದ ಬೆಂಗಳೂರಿನ ರೆಸಾರ್ಟ್ ನಲ್ಲಿ ತಂಗಿದ್ದರು. ಎದುರಾಳಿಗಳು ತಮ್ಮ ಸದಸ್ಯರನ್ನು ಸೆಳೆಯಬಹುದು ಎಂಬ ಕಾರಣಕ್ಕೆ ಇವರುಗಳನ್ನು ರೆಸಾರ್ಟ್ ನಲ್ಲಿ ಇರಿಸಲಾಗಿತ್ತು.
ಬೆಂಗಳೂರಿನಿಂದ ಹುಬ್ಬಳ್ಳಿಗೆ ವಿಮಾನದಲ್ಲಿ ಬಂದ ಈ ಒಂಬತ್ತು ಸದಸ್ಯರು ಅವಿಶ್ವಾಸ ನಿರ್ಣಯ ಮಂಡನೆಯಲ್ಲಿ ಪಾಲ್ಗೊಂಡಿದ್ದಾರೆ. ಹಾಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಲತೇಶ ನಾಯರ್ ತಮ್ಮ ಆಯ್ಕೆಯ ಸಂದರ್ಭದಲ್ಲಿ 15 ತಿಂಗಳ ಬಳಿಕ ಮತ್ತೊಬ್ಬ ಸದಸ್ಯ ಸುರೇಶ್ ತಳಗೇರಿ ಅವರಿಗೆ ಸ್ಥಾನ ಬಿಟ್ಟು ಕೊಡುವ ವಾಗ್ದಾನ ನೀಡಿದ್ದರಂತೆ. ಆದರೆ ಇದನ್ನು ಪಾಲಿಸದ ಕಾರಣ ಅವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ.