ಕಾವೇರಿ ನೀರು ವಿಚಾರವಾಗಿ ತಮಿಳುನಾಡು ಜೊತೆ ಸಿಎಂ ಮಾತಾಡಲಿ ಎಂದು ಬೆಂಗಳೂರಿನಲ್ಲಿ ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದರು.
ತಮಿಳುನಾಡು ಸಿಎಂ ಸ್ಟಾಲಿನ್ಗೂ ಸಿದ್ದರಾಮಯ್ಯಗೂ ಸಂಬಂಧ ಚೆನ್ನಾಗಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಇಬ್ಬರೂ ತಮಿಳುನಾಡಿಗೆ ಹೋಗಿ ಸಿಎಂ ಸ್ಟಾಲಿನ್ ಜೊತೆ ಮಾತಾಡಿ ರಾಜ್ಯದ ಜನರ ಕಷ್ಟದ ಬಗ್ಗೆ ವಿವರಿಸಿ. ಇದರಿಂದ ನಿಮಗೆ ತಾನೇ ರಾಜಕೀಯ ಲಾಭ ಆಗೋದು. ನೀವು ಯಾಕೆ ಈ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡಬಾರದು? ನೀವು ನಮ್ಮನ್ನು ರಾಜಕಾರಣ ಮಾಡುತ್ತಿದ್ದೀರಿ ಎನ್ನುವುದು ತಪ್ಪುತ್ತದೆ.
ನಿಮ್ಮ ಅವರ ನಡುವಿನ ಸಂಬಂಧ ಹೇಗಿದೆ ಅಂತಾ ನನಗೆ ಗೊತ್ತು. ಸಿಎಂ ಸ್ಟಾಲಿನ್ ಜೊತೆ ಸಿದ್ದರಾಮಯ್ಯ, ಡಿಕೆ ಮಾತಾಡಿ ಪುಣ್ಯ ಕಟ್ಟಿಕೊಳ್ಳಿ. ನೀವು ಮಾತಾಡಿದರೆ ತಮಿಳುನಾಡಿನವರು ಯಾವುದೇ ಬೇಡಿಕೆ ಇಡಲ್ಲ ಎಂದರು.
ಸುವರ್ಣ ಸೌಧ ಬೆಳಗಾವಿ: ಮಹಿಳೆಯರು ಮತ್ತು ಮಕ್ಕಳಲ್ಲಿರುವ ರಕ್ತಹೀನತೆ(ಅನೀಮಿಯಾ)ವನ್ನು 2030 ರೊಳಗೆ ಸಂಪೂರ್ಣವಾಗಿ ನಿವಾರಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ವಿಧಾನಪರಿಷತ್ತಿನ ಶೂನ್ಯ ವೇಳೆಯಲ್ಲಿ ಸದಸ್ಯ ನಾಗರಾಜ್...
ಸುವರ್ಣ ಸೌಧ ಬೆಳಗಾವಿ: ರಾಜ್ಯದಲ್ಲಿ ಈಗಾಗಲೇ ಏಳು ಆನೆ ಕಾರ್ಯಪಡೆ ತಂಡಗಳನ್ನು ರಚಿಸಲಾಗಿದ್ದು, ಆನೆ ಹಿಡಿಯಲು ನಿಯೋಜಿಸಿರುವ ಸಿಬ್ಬಂದಿಗಳಿಗೆ ಹೆಚ್ಚಿನ ತರಬೇತಿ ನೀಡಲಾಗುವುದ ಎಂದು ಅರಣ್ಯ ,ಜೈವಿಕ ಮತ್ತು ಪರಿಸರ ಸಚಿವ ಈಶ್ವರ...