ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಾಧ್ಯಮ ಸಂಯೋಜಕ ಗುರಲಿಂಗಸ್ವಾಮಿ ಹಠಾತ್ ನಿಧನರಾಗಿದ್ದಾರೆ.
ಬೆಳಗ್ಗೆ ಜಿಮ್‌ಗೆ ಹೊಗಿ ವರ್ಕೌಟ್ ಮಾಡುವಾಗ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮದ್ಯೆ ನಿಧನರಾಗಿದ್ದಾರೆ.
ಬೊಮ್ಮಾಯಿ ಗೃಹ ಸಚಿವರಾದಾಗಿಂದ ಮಾಧ್ಯಮ ವರ್ಗ ನೋಡಿಕೊಳ್ಳುತ್ತಿದ್ದ ಗುರುಲಿಂಗ ಸ್ವಾಮಿ ಬೆಳಗಾವಿ ಜಿಲ್ಲೆಯ ರಾಮದುರ್ಗದವರು. ಇಂದು ಬೆಳಗ್ಗೆ 7.55ಕ್ಕೆ ಅವರ ಮೊಬೈಲ್ ನಿಂದ ಕೊನೆಯದಾಗಿ ಮುಖ್ಯಮಂತ್ರಿಗಳ ಕಾರ್ಯಕ್ರಮದ ಸುದ್ದಿ ಬಂದಿದೆ.