ಬೆಳಗಾವಿ: ಮಹಾರಾಷ್ಟ್ರದ ನಾಯಕರಿಂದ ಗಡಿಯ ವಿಷಯವಾಗಿ ದಿನೇ ದಿನೇ ಕಿರಿಕ್ ತೆಗೆಯಲಾಗುತ್ತಿದೆ. ಹೀಗಾಗಿ ಮಹಾ ನಾಯಕರ ವಿರುದ್ಧ ಇಂದು ವಿಧಾನಸಭೆಯಲ್ಲಿ ಖಂಡನಾ ನಿರ್ಣಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದರು. ಇನ್ನು ಈ ನಿರ್ಣಯಕ್ಕೆ ಸರ್ವಾನುಮತದಿಂದ ಅಂಗೀಕಾರವನ್ನು ದೊರೆತಿದೆ.
ಮಹಾರಾಷ್ಟ್ರದ ನಾಯಕರು ಗಡಿ ಖ್ಯಾತೆ ತೆಗೆದಿದ್ದರು. ಈ ಹಿನ್ನಲೆಯಲ್ಲಿ ಮಹಾರಾಷ್ಟ್ರ ನಾಯಕರ ನಡೆಯನ್ನು ಖಂಡಿಸಿ, ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಖಂಡನಾ ನಿರ್ಣಯವನ್ನು ಮಂಡಿಸಿದರು.
ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರ ದೊರೆಯಿತು. ಈ ಮೂಲಕ ಗಡಿ ಕ್ಯಾತೆ ತೆಗೆದಂತ ಮಹಾರಾಷ್ಟ್ರ ನಾಯಕರಿಗೆ ಖಡಕ್ ಉತ್ತರವನ್ನು ನೀಡಲಾಗಿದೆ.