ಬೆಂಗಳೂರು : ಸಿದ್ದರಾಮಯ್ಯರ ಉಗ್ರ ಭಾಗ್ಯ ಯೋಜನೆಯಿಂದ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಬೆಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ವಾಗ್ದಾಳಿ ಮಾಡಿದ್ದಾರೆ.
ಪಿಎಫ್‌ಐ ಬ್ಯಾನ್ ವಿಚಾರದ ಕುರಿತು ಮಾತನಾಡಿದ ಸಿ.ಟಿ ರವಿ ಆರ್ ಎಸ್ ಎಸ್ ಬ್ಯಾನ್ ಮಾಡಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಎಲ್ಇಟಿ ಜೊತೆ ಹಾವು ಏಣಿಯಾಟ ಆಡಿದ ಪರಿಣಾಮ ರಾಜೀವ್ ಗಾಂಧಿ ಬಲಿಯಾಗಬೇಕಾಯತು. ಭಾರತ ವಾಸಕ್ಕೆ ಯೋಗ್ಯ ಅಲ್ಲ ಎಂದು ಅನ್ನಿಸಿದವರಿಗೆ ಅಫ್ಘಾನಿಸ್ತಾನ, ಪಾಕಿಸ್ತಾನ ಇದೆ, ಅಲ್ಲಿಗೆ ಫ್ರೀ ವೀಸಾ ಕೊಟ್ಟು ಕಳುಹಿಸುತ್ತೇವೆ ಎಂದು ಕಿಡಿಕಾರಿದರು.
ಯಾವ ಭಯೋತ್ಪಾದನೆ ವಿಚಾರದಲ್ಲಿ ಆರ್ಎಸ್ಎಸ್ ಮುಂದಾಗಿದೆ ಎಂದು ತೋರಿಸಲಿ. ಇಂತಹ ಮತಾಂದರಿಂದಲೇ ದೇಶ ವಿಭಜನೆಯಾಗಿದ್ದು. ರಾಷ್ಟ್ರವನ್ನು ಪ್ರೀತಿಸಿ ಅನ್ನೋದು ಭಯೋತ್ಪಾದನೆಯಾ ಸಿದ್ದರಾಮಯ್ಯನವರೇ.. ವಿಪಕ್ಷನಾಯಕ ಸಿದ್ದರಾಮಯ್ಯರ ಉಗ್ರ ಭಾಗ್ಯ ಯೋಜನೆಯಿಂದ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಬೆಂಗಳೂರಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ ರವಿ ವಾಗ್ದಾಳಿ ಮಾಡಿದ್ದಾರೆ.