ವರದಿ : ರತ್ನಾಕರ್ ಗೌಂಡಿ
ಬೆಳಗಾವಿ : ಹಿರೇಬಾಗೇವಾಡಿ ಗ್ರಾಮದ ಹತ್ತಿರವಿರುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಶನಿವಾರ ಚಾಲನೆ ನೀಡಿದರು.ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಯೋಜನೆಯಡಿಯಲ್ಲಿ ಸುಮಾರು 1.20 ಕೋಟಿ ರೂ,ಗಳ ವೆಚ್ಚದಲ್ಲಿ ಗ್ರಾಮಕ್ಕೆ ಹತ್ತಿರವಿರುವ ಹಳ್ಳಕ್ಕೆ ಬ್ರಿಡ್ಜ್ ಕಂ ಬ್ಯಾರೇಜ್ ಮಂಜೂರಾಗಿದೆ. ಚನ್ನರಾಜ ಹಟ್ಟಿಹೊಳಿ ಶನಿವಾರ ಬೆಳಗ್ಗೆ ಭೂಮಿ ಪೂಜೆಯನ್ನು ನೆರವೇರಿಸುವ ಮೂಲಕ ಕಾಮಗಾರಿಗೆ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಸ್ಥಳೀಯ ಜನಪ್ರತಿನಿಧಿಗಳು, ಸಿ ಸಿ ಪಾಟೀಲ, ಅಶ್ರಫ್ ಪೀರ್ ಖಾದ್ರಿ, ಸುರೇಶ ಇಟಗಿ, ಅಡಿವೇಶ ಇಟಗಿ, ಉಳವಪ್ಪ ರೊಟ್ಟಿ, ಶಿಪು ಹಳೆಮನಿ, ಬಿ ಎನ್ ಪಾಟೀಲ, ಗೌಸಮೊದ್ದಿನ ಜಾಲಿಕೊಪ್ಪ, ಇಮ್ತಿಯಾಜ್ ಕರಿದಾವಲ್, ಮಂಜುನಾಥ ಇಟಗಿ, ಶಿವಕುಮಾರ್ ಸಾಲಿಮನಿ, ಯಲ್ಲಪ್ಪ ವಾಲಿಇಟಗಿ, ಈರಣಗೌಡ ನಾಯ್ಕರ್, ವಿಲಾಸ ಬೊಗಾರ್, ಗುಡುಚಂದ್, ಜಾವೇದ್, ಸಮೀರ ದೇವಲಾಪೂರ, ನಿಂಗಪ್ಪ ಪಾಟೀಲ, ಅನಿಲ ಪಾಟೀಲ, ಗೌಡಪ್ಪ ಜಿರಲಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.