ಬೆಳಗಾವಿ : ಬೆಳಗಾವಿ ಗ್ರಾಮೀಣ ಪ್ರದೇಶದ ಬಿಜಗರಣಿ ಗ್ರಾಮದ ಶ್ರೀ ಮಹಾಲಕ್ಷ್ಮಿ ಮಂದಿರದ ಚೌಕಟ್ಟು ಅಳವಡಿಸುವ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗಿಯಾಗಿ ಚೌಕಟ್ಟಿನ ಪೂಜೆಯನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮನು ಬೆಳಗಾಂವ್ಕರ, ಕಾಂಗ್ರೆಸ್ ಯುವ ಮುಖಂಡ ಚನ್ನರಾಜ ಹಟ್ಟಿಹೊಳಿ, ಯಲ್ಲಪ್ಪ ಬೆಳಗಾಂವ್ಕರ, ಸಾತೇರಿ ಬೆಳವತ್ಕರ್, ಮಹೇಶ ಡುಕರೆ, ನಾಮದೇವ ಮೋರೆ, ಮಹೇಶ ಪಾಟೀಲ, ಶಿವಾಜಿ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.