spot_img
spot_img
spot_img
24.8 C
Belagavi
Thursday, June 1, 2023
spot_img

ನೇಕಾರರ ಸಮಸ್ಯೆ ತೆರೆದಿಟ್ಟ ಚನ್ನರಾಜ ಹಟ್ಟಿಹೊಳಿ

ಬೆಳಗಾವಿ: ಈ ಭಾಗದ ಪ್ರಮುಖ ಉದ್ಯಮವಾದ ನೇಕಾರಿಕೆಯಲ್ಲಿ ತೊಡಗಿಕೊಂಡವರ ಹಲವು ಸಂಕಷ್ಟಗಳ ಬಗ್ಗೆ ವಿಧಾನ ಪರಿಷತ್ ನಲ್ಲಿ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಗಮನ ಸೆಳೆದರು.

ರಾಜ್ಯದಲ್ಲಿ ಸುಮಾರು 54,250 ಕೈಮಗ್ಗ ನೇಕಾರರು ಹಾಗೂ 97,133 ವಿದ್ಯುತ್ ಮಗ್ಗ ನೇಕಾರರಿದ್ದಾರೆ. ಈ ಪೈಕಿ ಬೆಳಗಾವಿ ಜಿಲ್ಲೆಯಲ್ಲಿ 22,524 ವಿದ್ಯುತ್ ಮಗ್ಗ ನೇಕಾರರು ಹಾಗೂ 5353 ಕೈಮಗ್ಗ ನೇಕಾರರಿದ್ದಾರೆ. ಸರಕಾರ 1.25 ರೂ. ದರದಲ್ಲಿ ವಿದ್ಯುತ್ ಸಬ್ಸಿಡಿ ಯೋಜನೆ ನೀಡಿರುವುದಾಗಿ ಸರಕಾರ ಹೇಳಿಕೊಂಡಿದೆ.

ಆದರೆ ಜಿಎಸ್ ಟಿ, ಎಫ್ ಐ ಇತ್ಯಾದಿ ಸೇರಿ ಪ್ರತಿ ಯುನಿಟ್ ಗೆ 3.25 ಪೈಸೆ ಆಗುತ್ತಿದೆ. ಹೀಗಾಗಿ ಎಲ್ಲವನ್ನೂ ಸೇರಿಸಿ 1.25 ರೂ. ದರದಲ್ಲಿ ವಿದ್ಯುತ್ ಒದಗಿಸಲು ಸರಕಾರ ಕ್ರಮ ವಹಿಸಬೇಕು ಎಂದು ಚನ್ನರಾಜ ಹಟ್ಟಿಹೊಳಿ ಆಗ್ರಹಿಸಿದರು.

ಕೋವಿಡ್ ಸಂದರ್ಭದಲ್ಲಿ ನೇಕಾರರು ಸಾಕಷ್ಟು ಸಂಕಷ್ಟಪಟ್ಟಿದ್ದಾರೆ. ಈ ವೇಳೆ ಸರಕಾರ ಅವರಿಗೆ ಶೇ.3 ಬಡ್ಡಿದರದ ಸಾಲ ನೀಡಿರುವುದಾಗಿ ಸರಕಾರ ತಿಳಿಸಿದೆ. ಆದರೆ ಕೆಲ ನೇಕಾರರು ತಮ್ಮಲ್ಲಿ ಹೇಳಿಕೊಂಡ ಪ್ರಕಾರ ಕಳೆದ ನಾಲ್ಕು ವರ್ಷಗಳಿಂದ ಶೇ.3 ಬಡ್ಡಿದರದ ಸಾಲ ಯೋಜನೆ ನೇಕಾರರಿಗೆ ತಲುಪಿಲ್ಲ. ಅವರು ಈ ಹಿಂದೆ ಪಡೆದ ಶೇ.13 ಹಾಗೂ 14 ದರದಲ್ಲೇ ಸಾಲದ ಕಂತು ಕಟ್ಟುತ್ತಿದ್ದಾರೆ. ಸರಕಾರ ಈ ಕುರಿತು ಕ್ಷಿಪ್ರ ಕ್ರಮ ವಹಿಸಬೇಕು ಎಂದು ಅವರು ಹೇಳಿದರು.

ಇದಕ್ಕೆ ಉತ್ತರಿಸಿದ ಜವಳಿ ಹಾಗೂ ಕೈಮಗ್ಗ ಸಚಿವರು, ತಮಿಳುನಾಡು ಮಾದರಿಯಲ್ಲಿ ತಮಗೆ ಪ್ಯಾಕೇಜ್ ನೀಡಬೇಕೆಂಬುದು ನೇಕಾರರ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ಡಿ.17ರಂದು ಮುಖ್ಯಮಂತ್ರಿಯವರ ನೇತೃತ್ವದಲ್ಲಿ ಸಭೆ ಸೇರಿ ನೇಕಾರರ ಶೇ. 99 ರಷ್ಟು ಬೇಡಿಕೆಗಳನ್ನು ಈಡೇರಿಸಿ ಸರಕಾರಿ ಆದೇಶ ಹೊರಡಿಸಲಾಗಿದ್ದು ಇನ್ನಷ್ಟು ಬೇಡಿಕೆಗಳನ್ನು ಶೀಘ್ರವೇ ಈಡೇರಿಸಲಾಗುತ್ತಿದೆ ಎಂದರು.

Related News

ಶೆಟ್ಟರ್​, ಲಕ್ಷ್ಮಣ್ ಸವದಿ ನಮ್ಮ ನಾಯಕರು ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ

ಬೆಳಗಾವಿ: ಯಾವ ಸಮಯದಲ್ಲಿ ಏನು ಮಾಡಬೇಕೆಂದು ನಮಗೆ ಗೊತ್ತಿದೆ. ನಾವು ಅವರ ಜೊತೆಗೆ ಇದ್ದೇವೆ, ಇಡೀ ಪಕ್ಷ ಅವರ ಜೊತೆ ಇದೆ. ಜಗದೀಶ್​ ಶೆಟ್ಟರ್, ಲಕ್ಷ್ಮಣ ಸವದಿ ನಮ್ಮ ಪಕ್ಷದ ನಾಯಕರು ಎಂದು...

ರಾಜ್ಯದ ವಿವಿದೆಡೆ ಲೋಕಾಯುಕ್ತ ದಾಳಿ

ಬೆಂಗಳೂರು:  ಅತ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು(ಮೇ 31) ಬೆಳ್ಳಂಬೆಳಗ್ಗೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದರೆ, ಮತ್ತೊಂದೆಡೆ ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ತುಮಕೂರಿನ ಕೆಐಎಡಿಬಿ ಅಧಿಕಾರಿ ಮನೆ ಮೇಲೆ ದಾಳಿ ತುಮಕೂರಿನ ಕೆಐಎಡಿಬಿ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -