ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಸ್ತವಾಡ ಗ್ರಾಮಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನಿಟ್ಟಿನಲ್ಲಿ ಇವತ್ತು ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಗಳಿಗೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಚಾಲನೆಯನ್ನು ನೀಡಿದರು.
ತಂದನಂತರ ಗ್ರಾಮ ಪಂಚಾಯತಿಯ ವತಿಯಿಂದ ಕಸದ
ವಿಲೇವಾರಿ ವಾಹನಕ್ಕೆ ಸಹ ಚಾಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಹಾದೇವಿ ಬಾ ಪಾಟೀಲ, ಉಪಾಧ್ಯಕ್ಷ ವಿಠ್ಠಲ ಗ ಸಾಂಬ್ರೇಕರ್, ಸದಸ್ಯರಾದ ಮನೋಹರ್ ಸ ಮುಚ್ಚಂಡಿ, ತವನಪ್ಪ ಬಡಿಗೇರ್, ಭರಮಪ್ಪ ಬಾ ಗೌಡಕೆಂಚಕ್ಕಗೋಳ, ಲಕ್ಷ್ಮೀ ರ ಸಾಂಬ್ರೇಕರ್, ಶೋಭಾ ಪಾಟೀಲ, ಅರ್ಜುನ ಪಾಟೀಲ, ರಮೇಶ ಶಿವಾಜಿ ಹುಣಶೀಮರದ, ಶ್ರೀದೇವಿ ಲ ಹಂಚಿನಮನಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.