spot_img
spot_img
spot_img
21.3 C
Belagavi
Sunday, October 1, 2023
spot_img

ಚಂದ್ರಯಾನ 3 ಯಶಸ್ವಿ ಇಂದಿನಿಂದ ನಿದ್ರೆಗೆ ಜಾರಲಿದೆ ರೋವರ

ಬೆಂಗಳೂರು: ಚಂದ್ರಯಾನ-3 ಯೋಜನೆಯೂ ಸಕ್ಸಸ್​​ ಆಗಿದ್ದು, ಭಾರತದ ಕೀರ್ತಿ ವಿಶ್ವಮಟ್ಟದಲ್ಲಿ ರಾರಾಜಿಸುತ್ತಿದೆ. ಅತ್ತ ಚಂದ್ರನ ದಕ್ಷಿಣ ಧ್ರುವದಲ್ಲಿ ಓಡಾಟ ನಡೆಸಿರುವ ಪ್ರಜ್ಞಾನ್​​​​ ರೋವರ್ ದಿನಕ್ಕೊಂದು ಕೌತುಕ ಮಾಹಿತಿಯನ್ನು ಭೂಮಿಗೆ ಕಳುಹಿಸುತ್ತಿದೆ. ಅದೇ ರೀತಿಯಾಗಿ ಇದೀಗ ಚಂದ್ರಯಾನ-3 ಬಗ್ಗೆ ಇಸ್ರೋದಿಂದ ಮತ್ತೊಂದು ಅಪ್‌ಡೇಟ್​ ಬಂದಿದೆ. ರೋವರ್ ತನ್ನ ಕಾರ್ಯ ಯೋಜನೆಗಳನ್ನು ಪೂರ್ಣಗೊಳಿಸಿದೆ. ರೋವರ್‌ನ್ನು ಈಗ ಸುರಕ್ಷಿತವಾಗಿ ನಿಲುಗಡೆ ಮಾಡಲಾಗಿದೆ ಎಂದು ಇಸ್ರೋ ಟ್ವೀಟ್​ ಮೂಲಕ ಮಾಹಿತಿ ನೀಡಿದೆ.

ಪ್ರಜ್ಞಾನ್‌ ರೋವರ್‌ನ್ನು ಸ್ಲೀಪ್ ಮೋಡ್‌ನಲ್ಲಿ ಇಡಲಾಗಿದೆ. APXS ಮತ್ತು LIBS ಪೇಲೋಡ್‌ಗಳನ್ನು ಆಫ್ ಮಾಡಲಾಗಿದೆ. ಪೇಲೋಡ್‌ಗಳಿಂದ ದತ್ತಾಂಶ ಲ್ಯಾಂಡರ್ ಮೂಲಕ ರವಾನೆ ಆಗುತ್ತೆ. ಪ್ರಸ್ತುತ ಬ್ಯಾಟರಿ ಸಂಪೂರ್ಣವಾಗಿ ಚಾರ್ಜ್ ಆಗಿದೆ.

ಸೆ.22ರಂದು ಮುಂದಿನ ಸೂರ್ಯೋದಯದಲ್ಲಿ ಬೆಳಕು ನಿರೀಕ್ಷಿಸಲಾಗಿದೆ. ಬೆಳಕು ಸ್ವೀಕರಿಸಲು ಸೌರಫಲಕದ ರಿಸೀವರ್‌ನ್ನು ಆನ್‌ನಲ್ಲಿ ಇರಿಸಲಾಗಿದೆ. ಮುಂದಿನ ಸೂರ್ಯೋದಯದಂದು ಕಾರ್ಯ ಮುಂದುವರಿಸುವ ವಿಶ್ವಾಸವಿದ್ದು, ಮತ್ತೊಂದು ಸುತ್ತಿನ ಅಸೈನ್‌ಮೆಂಟ್‌ಗೆ ರೋವರ್‌ ಸಿದ್ಧವಾಗುವ ಭರವಸೆ ಇದೆ. ಇದು ಸಾಧ್ಯವಾಗದಿದ್ದರೆ ಭಾರತದ ಚಂದ್ರನ ರಾಯಭಾರಿಯಾಗಿ ಶಾಶ್ವತವಾಗಿ ಉಳಿಯುತ್ತದೆ ಎಂದು ಇಸ್ರೋ ಟ್ವೀಟ್​ ಮಾಡಿದೆ.

ಸದ್ಯ ಪ್ರಜ್ಞಾನ್​​ ರೋವರ್ ಈವರೆಗೆ ಸುಮಾರು 15ಕ್ಕೂ ಹೆಚ್ಚು ಮೀಟರ್ ದೂರವನ್ನು ಕ್ರಮಿಸಿದೆ. ಸೌರಶಕ್ತಿ ಚಾಲಿತ ಪ್ರಜ್ಞಾನ್​​​​ ರೋವರ್ ವೈಜ್ಞಾನಿಕ ಪ್ರಯೋಗಗಳನ್ನು ಮುಂದುವರೆಸುತ್ತಿದೆ. ಚಂದ್ರಯಾನದ ಮಿಷನ್ ಇನ್ನೂ ಕೆಲ ದಿನಗಳಿದ್ದು, ಮತ್ಯಾವ ವಿಸ್ಮಯವನ್ನ ಪ್ರಜ್ಞಾನ್​​ ರೋವರ್​​​ ಪತ್ತೆ ಮಾಡುತ್ತೆ ಎನ್ನುವುದು ಸದ್ಯದ ಕೌತುಕವಾಗಿದೆ.

Related News

ಸರಕಾರದ ಜೊತೆ ಎಲ್ಲ ಸಮಾಜದವರೂ ಇದ್ದಾರೆ – ಲಕ್ಷ್ಮೀ ಹೆಬ್ಬಾಳಕರ್

ಬೆಂಗಳೂರು: ಕಾಂಗ್ರೆಸ್ ಪಕ್ಷಕ್ಕೆ ಎಲ್ಲಾ ಸಮುದಾಯದ ಬೆಂಬಲ ಸಿಕ್ಕಿದೆ. ಕೇವಲ ಒಂದು ಸಮುದಾಯದ ಬೆಂಬಲದಿಂದ ಅಧಿಕಾರಕ್ಕೇರಿಲ್ಲ. ಎಲ್ಲಾ ಸಮಾಜದವರೂ ಸರಕಾರದೊಂದಿಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್...

ನಿಮ್ಮ ಆಸ್ತಿಗಳ ಮೌಲ್ಯಗಳನ್ನು ಅಪಮೌಲ್ಯ ಮಾಡಬೇಡಿ ನೈಜ್ಯ ಬೆಲೆಗೆ ವ್ಯವಹಾರ ಮಾಡಿ

ಬೆಳಗಾವಿ: ಕರ್ನಾಟಕ ರಾಜ್ಯ ಸರ್ಕಾರ ಸ್ಥಿರ ಆಸ್ತಿಗಳು ಮಾರ್ಗಸೂಚಿ ಬೆಲೆ ಪರಿಷ್ಕರಣೆ ಅಕ್ಟೋಬರ್ ಒಂದರಿಂದ ಶೆ. 10%ರಿಂದ 30%ವರೆಗೆ ಹೆಚ್ಚಳ ಮಾಡುವುದಾಗಿ ಆದೇಶ ಹೊರಡಿಸಿದೆ. ಅದರ ಅಂಗವಾಗಿ ಬೆಳಗಾವಿ ನೋಂದಣಿ ಮತ್ತು ಮುದ್ರಾಂಕ ಇಲಾಖೆ...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -