spot_img
spot_img
spot_img
18 C
Belagavi
Thursday, September 29, 2022
spot_img

ಸ್ವಾತಂತ್ರಯೋಧ ಗಾಂಧಿವಾದಿ ಗಂಗಪ್ಪ ಮಾಳಗಿಯವರ 100 ವರ್ಷದ ಶತಮಾನೋತ್ಸವ

spot_img

ಬೆಳಗಾವಿ: ತಾಲ್ಲೂಕಿನ ಗಾಂಧಿ ಮತ್ತು ಖಾದಿ ಗ್ರಾಮ ಹುದಲಿಯಲ್ಲಿ ರವಿವಾರ(ಫೆ.13) ರಂದು ಸ್ವಗೃಹದಲ್ಲಿ ಶತಮಾನೋತ್ಸವ ಸಮಾರಂಭವನ್ನು ದೀಪ ಬೆಳಗಿಸಿ ಗ್ರಾಮಸ್ಥರಿಂದ ಹಾಗೂ ಗ್ರಾಮ ಪಂಚಾಯತಿ ಸಂಘ ಸಂಸ್ಥೆಗಳಿಂದ, ಅಭಿಮಾನಿಗಳಿಂದ ಹಾಗೂ ಕುಟುಂಬ ಸದಸ್ಯರಿಂದ ಸನ್ಮಾನಿಸಲಾಯಿತು.

ಈ ವೇಳೆ ಸಹಕಾರಿ ಧುರಿಣ ಬಾಳಗೌಡ ಪಾಟೀಲ ಮಾತನಾಡುತ್ತಾ ಗಂಗಪ್ಪ ಮಾಳಗಿಯವರು ತಮ್ಮ ಹತ್ತನೆ ವರ್ಷದಿಂದಲೆ ಖಾದಿ ಧರಿಸಿ ರಾಷ್ಟ್ರ ಭಕ್ತರಾದರು. ಗಾಂಧೀಜಿಯವರು 1937 ನೇ ಇಸ್ವಿಯಲ್ಲಿ ಹುದಲಿಗೆ ಆಗಮಿಸಿ 7 ದಿವಸ ವಾಸ್ತವ್ಯ ಮಾಡಿದ್ದರು. ಆ ವೇಳೆಯಲ್ಲಿ ಇವರು ಗಾಂಧಿಜಿಯವರ ಕುಠಿರದ ಸ್ವಯಂ ಸೇವಕರಾಗಿ ನೂಲಲ್ಲಿಕೆ ಗಾಂಧಿಜೀಯವರಿಗೆ ಹಂಜಿಯನ್ನು ತಯಾರು ಮಾಡಿ ವಾರವಿಡಿ ದುಡಿದು ಅವರ ಪ್ರೀತಿಗೆ ಪಾತ್ರರಾದರು. ಅವರಿಗೆ ಗಾಂಧೀಜಿಯವರು ಬೆಳ್ಳಿ ಪದಕ ನೀಡಿ ಸನ್ಮಾನಿಸಿದ್ದರು. ಇಂತಹ ವ್ಯಕ್ತಿಗಳು ಇಂದಿನ ಯುವ ಪೀಳಿಗೆಗೆ ದಾರಿದೀಪವಾಗಿದ್ದಾರೆಂದು ತಿಳಿಸಿದರು.

ಮಾಜಿ ಶಾಸಕರಾದ ಎಸ್.ಸಿ. ಮಾಳಗಿಯವರು ಮಾತನಾಡುತ್ತಾ 1942 ರ ಚಲೇಜಾವ ಚಳವಳಿಯಲ್ಲಿ ಭಾಗಹಿಸಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸಿದರು, 1954ನೇ ಸಾಲಿನಲ್ಲಿ ಖಾದಿ ಗ್ರಾಮೋದ್ಯೋಗ ಸಹಕಾರಿ ಸಂಘವನ್ನು ಸ್ಥಾಪಿಸಿ ಸಂಘದ ಬೆಳವಣಿಗೆಗೆ ಪಾತ್ರದಾರಿಯಾಗಿ 30 ವರ್ಷ ಚೇರಮನ್‌ರಾಗಿ ಸೇವೆ ಸಲ್ಲಿಸಿದ್ದಾರೆ.

ನಿಸ್ವಾರ್ಥದಿಂದ ಸೇವೆ ಸಲ್ಲಿಸಿ ಸಂಘವು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪಡೆಯಲು ಶ್ರಮಿಸಿದ್ದಾರೆ. ಸದರಿಯವರಿಗೆ ರಾಜ್ಯ ಸರ್ಕಾರವು ಸಹಕಾರ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.

ಸದರಿ ಕಾರ್ಯಕ್ರಮದಲ್ಲಿ ಅಡಿವೆಪ್ಪ ಮಾಳಗಿ, ಚನಬಸು ಮಾಳಗಿ, ಚಂದ್ರು ಕುಂದರಗಿ, ಚನಬಸು ಪವಾಡಿ, ಅಜ್ಜಪ್ಪ ಮಳಗಲಿ, ಶಂಕರ ಜಮನಾಳ, ಅಶೋಕ ನೇಸರಗಿ, ಅಶೋಕ ಬಡಿಗೇರ, ರಾಜು ಮಾಳಗಿ, ಮೋಹನ ಖನಗಣಿ ಭಾಗವಹಿಸಿದ್ದರು.

ಡಾ. ಶಿವನಗೌಡ ಪಾಟೀಲ ಸ್ವಾಗತಿಸಿದರು. ಶಿವಾನಂದ ನಿರ್ವಾಣಿಯವರು ವಂದಿಸಿದರು. ವಿ.ಎ. ಬಲಕುಂದಿಯವರು ಕಾರ್ಯಕ್ರಮ ನಿರೂಪಿಸಿದರು.

spot_img

Related News

ಡಿ.ಕೆ.ಶಿವಕುಮಾರ್ ಮನೆ, ಕಚೇರಿ ಮೇಲೆ ಸಿಬಿಐ ದಾಳಿ

ಬೆಂಗಳೂರು: ಇಡಿ ಅಧಿಕಾರಿಗಳ ದಾಳಿಯ ಬಳಿಕ ವಿಚಾರಣೆ ಎದುರಿಸುತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿವಾಸದ ಮೇಲೆ ಸಿಬಿಐ ಅಧಿಕಾರಿಗಳು ಇಂದು ದಾಳಿ ನಡೆಸಿದ್ದಾರೆ. ಕೇಂದ್ರ ತನಿಖಾ ದಳದ ಅಧಿಕಾರಿಗಳು ಡಿ ಕೆ ಶಿವಕುಮಾರ್...

ಮೂರು ಪಡೆಗಳ ಮುಖ್ಯಸ್ಥರಾಗಿ ಅನಿಲ್ ಚವ್ಹಾಣ್ ನೇಮಕ

ನವದೆಹಲಿ: ನಿವೃತ್ತ ಲೆಫ್ಟಿನೆಂಟ್ ಜನರಲ್ ಅನಿಲ್ ಚವ್ಹಾಣ್ ಅವರನ್ನು ನೂತನ ಸಿಡಿಎಸ್ ಆಗಿ ನೇಮಕ ಮಾಡಲಾಗಿದೆ. ಎರಡನೇ ಸಿಡಿಎಸ್ ಅನಿಲ್ ಚವ್ಹಾಣ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹೆಲಿಕಾಪ್ಟರ್ ದುರಂತದಲ್ಲಿ ಬಿಪಿನ್ ರಾವತ್...

LEAVE A REPLY

Please enter your comment!
Please enter your name here

Latest News

- Advertisement -
- Advertisement -
- Advertisement -
- Advertisement -