Ad imageAd image

ಕಲಾ ಮಹಾವಿದ್ಯಾಲಯದಲ್ಲಿ ಭಜನೆಯ ಮೂಲಕ ಗಾಂಧಿ ಜಯಂತಿ ಆಚರಣೆ

ratnakar
ಕಲಾ ಮಹಾವಿದ್ಯಾಲಯದಲ್ಲಿ ಭಜನೆಯ ಮೂಲಕ ಗಾಂಧಿ ಜಯಂತಿ ಆಚರಣೆ
WhatsApp Group Join Now
Telegram Group Join Now

ಬಾಗಲಕೋಟೆ: ಬಸವೇಶ್ವರ ಕಲಾ ಮಹಾವಿದ್ಯಾಲಯದಲ್ಲಿ ಗಾಂಧಿ ಭಜನೆ ಮಾಡುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು. ‌

ಮಹಾವಿದ್ಯಾಲಯದಲ್ಲಿ ಮಹಾತ್ಮಾ ಗಾಂಧೀಜಿ ಮತ್ತು ಲಾಲ ಬಹಾದ್ದೂರ ಶಾಸ್ತ್ರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಮಹಾವಿದ್ಯಾಲಯದ ಸಂಗೀತ ವಿಭಾಗ ಹಾಗೂ ವಿದ್ಯಾರ್ಥಿಗಳು ಭಜನೆ ಮಾಡುವುದರ ಮೂಲಕ ರಘುಪತಿ ರಾಘವ, ವೈಷ್ಣವ ಜನತು ಸೇರಿದಂತೆ ವಿವಿಧ ಗಾಂಧೀಜಿ ಕುರಿತಾದ ಹಾಡುಗಳನ್ನು ಹಾಡಿದರು.

ಇದೇ ವೇಳೆ ಪ್ರಾಚಾರ್ಯರಾದ ಎಸ್. ಆರ್ ಮಗನೂರಮಠ ಅವರು ಮಾತನಾಡಿ ಗಾಂಧೀಜಿ ಮತ್ತು ಶಾಸ್ತ್ರೀಜಿ ಅವರು ಮರೆಯಲಾಗದ ಮೇರು ವ್ಯಕ್ತಿತ್ವಗಳು. ಅವರ ಮಾರ್ಗದರ್ಶನದಲ್ಲಿ ನಾವು ನಡೆಯುವ ಅವಶ್ಯಕತೆ ಇದೆ. ಮಹಾ ಯುದ್ಧಗಳಂತಹ ಹಿಂಸಾತ್ಮಕ ದಿನಗಳಲ್ಲಿಯೂ ಅಹಿಂಸೆ ಮತ್ತು ಸತ್ಯಾಗ್ರಹಗಳಿಂದ ಭಾರತಕ್ಕೆ ಸ್ವಾತಂತ್ರ್ಯ ದೊರತಿತ್ತು ಎಂದು ಹೇಳಿದರೆ ಯುವ ಪೀಳಿಗೆ ಆಶ್ಚರ್ಯಪಡುವ ದಿನಗಳು ಹತ್ತಿರದಲ್ಲಿವೆ ಎಂದರು.

ಸ್ವಾವಲಂಭನೆ ಮತ್ತು ಸರಳ ಜೀವನಕ್ಕೆ ಮಹತ್ವ ನೀಡಿದ ಅವರು ಗುಡಿಕೈಗಾರಿಕೆಗಳಿಗೆ ಪ್ರಾಮುಖ್ಯತೆ ಕೊಡಬೇಕು ಇದರಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಎಂಬ ಪರಿಕಲ್ಪನೆ ಹೊಂದಿದ್ದರು. ಹರ್ಡೆಕರ ಮಂಜಪ್ಪ, ರಾನಡೆಯಂತಹ ಅನೇಕರು ಗಾಂಧೀಜಿಯವರ ಮಾರ್ಗದರ್ಶನದಲ್ಲಿ ನಡೆದು ಸ್ವಾವಲಂಬನೆಯ ಪರಿಕಲ್ಪನೆಯನ್ನು ಯುವ ಪೀಳಿಗೆಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಲಾಲ ಬಹಾದ್ದೂರ ಶಾಸ್ತ್ರಿ ಅವರು ಪ್ರಾಮಾಣಿಕತೆಗೆ ಹೆಸರುವಾಸಿ. ಅವರು ಹೇಳಿದ ಜೈಜವಾನ್ ಜೈಕಿಸಾನ್ ಮಂತ್ರ ಅಜರಾಮರವಾಗಿ ಉಳಿದಿದೆ. ದೇಶದಲ್ಲಿ ಆಹಾರ ಸ್ವಾವಲಂಭನೆಗಾಗಿ ಪ್ರತಿ ಸೋಮವಾರ ಒಂದು ಹೊತ್ತಿನ ಊಟ ಎಂಬ ಆಚರಣೆ ಜಾರಿಗೆ ತಂದಿದ್ದರು ಅದು ಈಗಲೂ ರೂಡಿಯಲ್ಲಿದೆ. ಪ್ರಾರ್ಥನೆಯಿಂದ ಮನಶಾಂತಿ ಮೂಡುತ್ತದೆ. ಗಾಂಧೀಜಿಯವರು ಅದನ್ನು ಅನುಸರಿಸಿಕೊಂಡು ಬಂದಿದ್ದರು ಅದನ್ನೇ ಮಹಾವಿದ್ಯಾಲಯದಲ್ಲಿ ಭಜನ ರೂಪದಲ್ಲಿ ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ಅರ್ಥಮಾಡಿಸುವ ಕೆಲಸ ಮಾಡಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಸಂಗೀತ ವಿಭಾಗದ ಪ್ರಾದ್ಯಾಪಕರುಗಳಾದ ಡಾ. ಕೆ.ವಿ ಮಠ, ಆರ್.ಎಮ್ ಬೆಣ್ಣೂರ, ಶ್ರೇಯಾ ಜೋರಾಪುರ ಮತ್ತು ವಿದ್ಯಾರ್ಥಿಗಳು ಭಜನ ಮಾಡಿದರು. ವಿವಿಧ ವಿಭಾಗಗಳ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article