ಬೆಂಗಳೂರು : ಬಿಜೆಪಿಯವರು ಹೆಣದ ಮೇಲೆ ಹಣ ಮಾಡೋದನ್ನ ಆದ್ಯತೆ ಮಾಡಿಕೊಂಡಿದ್ದರು. 4.26 ಲಕ್ಷ ಜನ ಸತ್ತಿದ್ದಾರೆ ಇದಕ್ಕೆ ಯಾರ ಜವಾಬ್ದಾರಿ? ನನ್ನ ಪ್ರಕಾರ ಇದು ಹತ್ಯಾಕಾಂಡ, ಬಿಜೆಪಿಯವರ ದುಡ್ಡಿನ ದುರಾಸೆಯಿಂದ ಹತ್ಯಾಕಾಂಡ ನಡೆದಿದೆ. ಇದನ್ನು ನಾನು ಹೇಳುತ್ತಿದ್ದೇನೆ. ಕೇಂದ್ರ ಸರ್ಕಾರದ ಅಂಕಿ ಅಂಶ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಾಂಬ್ ಸಿಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವರದಿಯನ್ನ ನಾನು ಅಧ್ಯಯನ ಮಾಡಿದ್ದೇನೆ. ಕುನ್ಹಾ ವರದಿ ಪ್ರಕಾರ, ಯಡಿಯೂರಪ್ಪ, ಶ್ರೀರಾಮುಲು ಯಾವ ರೀತಿ ಹೆಣದ ಮೇಲೆ ಹಣ ಮಾಡಿದ್ದಾರೆ ಅನ್ನೋದನ್ನ ಹೇಳ್ತಾರೆ. 2020ರಲ್ಲಿ 416.48 ಕೋಟಿ ರೂ. ಮೌಲ್ಯದ ಔಷಧ, ವೈದ್ಯಕೀಯ ಸಲಕರಣೆಗಳ ಖರೀದಿ, 12 ಲಕ್ಷ ಪಿಪಿಐ ಕಿಟ್‌ಗಳನ್ನು ಒಂದು ರೇಟ್ ಫಿಕ್ಸ್ ಮಾಡಲಾಗುವುದು. ಚೀನಾದ ಎರಡು ಕಂಪನಿಗಳಿವೆ. ಅವರಿಂದ ವೈದ್ಯಕೀಯ ಸಲಕರಣೆಗಳನ್ನು ಖರೀದಿಸಲಾಗಿದೆ. ಚೀನಾದಿಂದ ಏನನ್ನೂ ಖರೀದಿಸಬಾರದು ಎಂದು ಮೋದಿ ಹೇಳಿದ್ದಾರೆ. ಮೇಕ್ ಇನ್ ಇಂಡಿಯಾ ಎಂದಿದ್ದರು. ಪ್ರಧಾನಿ ಅವರ ಆದೇಶ ಉಲ್ಲಂಘನೆ ಮಾಡಿ ಚೀನಾದಿಂದ ಸಲಕರಣೆಗಳನ್ನು ಖರೀದಿಸಲಾಗಿದೆ. ಇದು ಒಂದು ರೀತಿ ದೇಶದ್ರೋಹ ಚಟುವಟಿಕೆ ಅಲ್ಲವಾ ಎಂದು ಪ್ರಶ್ನಿಸಿದರು.
ಚೀನಾದಿಂದ ಖರೀದಿ ಮಾಡುವ ಅಗತ್ಯ ಏನಿತ್ತು? ಬಿಜೆಪಿ ಅವರ ನಿರ್ಲಕ್ಷ್ಯದಿಂದ ಜನ ಸತ್ತಿರೋದು ಕೊರೊನಾದಿಂದ ಜನ ಸತ್ತಿಲ್ಲ ಅನಿಸುತ್ತಿದೆ. ಇದು ಬಿಜೆಪಿಯವರ ಹತ್ಯಾಕಾಂಡ. ಇವರು ಕೊರೊನಾದಿಂದ 37 ಸಾವಿರ ಜನ ಸತ್ತಿದ್ದಾರೆ ಎನ್ನುತ್ತಾರೆ. ಆದರೆ ಕೇಂದ್ರ ಸರ್ಕಾರದ ವರದಿಯಲ್ಲಿ ರಾಜ್ಯದಲ್ಲಿ ಕೊರೊನಾದಿಂದ 4.25 ಲಕ್ಷ ಜನ ಸತ್ತಿದ್ದಾರೆ ಎಂದು ಉಲ್ಲೇಖಿಸಲಾಗಿದೆ.
ಅಂದಿನ ಬಿಜೆಪಿ ಸರ್ಕಾರ ಕೊರೊನಾ ನಿರ್ವಹಣೆ ಮಾಡೋದನ್ನ ಬಿಟ್ಟು, ಜನರ ಜೀವನ ಉಳಿಸೋದನ್ನ ಬಿಟ್ಟು ಹಣ ಮಾಡಿದೆ. ತಂತ್ರಜ್ಞಾನ ಯುಗದಲ್ಲಿ ಯಾಕೆ ಪ್ರಧಾನಿ ಮೋದಿಯವರು ಒಂದು ಭಾವನೆಯನ್ನ ಹಬ್ಬಿಸುತ್ತಿದ್ದರು ಎಂದು ಈಗ ಗೊತ್ತಾಗಿದೆ. ತಾಲಿ ಬಜಾವ್ ದೀಪ್ ಚಲಾವ್ ಇವೆಲ್ಲಾ ಭ್ರಷ್ಟಾಚಾರ, ಹತ್ಯಾಕಾಂಡ ಮುಚ್ಚಿಹಾಕೋದಕ್ಕೆ ಮಾಡು. ಎಂದು ಕಾಣದಂತಹ ಪರಿಸ್ಥಿತಿ ಇತ್ತು. ಸರ್ಕಾರವನ್ನು ಜನ ನಂಬಿದ್ದರು. ಔಷಧ, ವ್ಯಾಕ್ಸಿನ್, ಬೆಡ್ ಹಂಚಿಕೆ, ಮಾಸ್ಕ್ ವಿತರಣೆ, ಪಿಪಿಐ ಕಿಟ್ ವಿತರಣೆ ಸರ್ಕಾರ ಮಾಡಿದೆ. ಬಿಜೆಪಿಯವರು ಹೆಣದ ಮೇಲೆ ಹಣ ಹೊಂದಿದ್ದರು ಎಂದು ರಿಪೋರ್ಟ್‌ನಲ್ಲಿ ಗೊತ್ತಾಗಿದೆ ಎಂದು ಹರಿಹಾಯ್ದರು.
ಪ್ರಧಾನಿ 700 ಕೋಟಿ ಹಗರಣ ಆಗಿದೆ ಎಂದು ಆರೋಪಿಸಲಾಗಿದೆ. ನಮ್ಮ ತೆರಿಗೆ ಬೇಕು, ಸಂಪನ್ಮೂಲ ಬೇಕು ಮತ್ತೆ ಅವಮಾನ ಮಾಡುತ್ತೀರಿ. ಅವರ ಸರ್ಕಾರ ಇದ್ದಾಗ ಏನಾಯ್ತು, ಅದಕ್ಕೆ ಅವರಿಗೆ ಉತ್ತರ ಕೊಡಬೇಕು. ಮೋದಿಯವರು ಕೆಂಪು ಕೋಟೆಯ ಮೇಲೆ ಭಾಷಣ ಮಾಡುತ್ತಾರೆ. ಆದರೆ ಇಲ್ಲಿ ಬಿಜೆಪಿಯವರೇ ಹಾಳು ಮಾಡುತ್ತಾರೆ. ದೇಶದ ಲೋಕಲ್ ಮಾರ್ಕೆಟ್‌ನಲ್ಲಿ ಪಿಪಿಐ ಕಿಟ್ ಇದ್ರೂ ಕೂಡ ಚೀನಾದಿಂದ ಯಾಕೆ ಖರೀದಿ ಮಾಡಿದ್ದೀರಾ? 333 ರೂಪಾಯಿ ಖರೀದಿಸಬೇಕಾಗಿದ್ದ ಕಿಟ್‌ಗಳನ್ನ 2 ಸಾವಿರ ಕೊಟ್ಟು ಖರೀದಿಸಿದ್ದಾರೆ ಎಂದು ಆರೋಪಿಸಿದರು.