ಬೆಳಗಾ: ಬೆಳಗಾವಿ ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ 1 ಮತ್ತು 2ನೇ ಡೋಸ್ ಕೋವಿಡ್-19 ರ ಲಸಿಕಾಕರಣದಲ್ಲಿ 100 ಪ್ರಗತಿ ಸಾಧಿಸಲಾಗಿದೆ. ಸಾಧನೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು, ಸರ್ಕಾರವು 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕಾರ್ಬಿವ್ಯಾಕ್ಷಿನ ಲಸಿಕಾ ಅಭಿಯಾನಕ್ಕೆ ಇವತ್ತು ಚಾಲನೆ ನೀಡಲಾಗುತ್ತಿದ್ದು, ಎಲ್ಲ ಪಾಲಕರು ಈ ಕೋವಿಡ್ -19ರ ಲಸಿಕಾಕರಣಕ್ಕೆ ತಮ್ಮ ಮಕ್ಕಳಿಗೆ ಧೈರ್ಯ ಹೇಳಿ ಲಸಿಕೆಗೆ ಮನವಲಿಸಿ ಲಸಿಕಾಕರಣದ ಅಭಿಯಾನದ ಯಶಸ್ವಿಗೆ ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದರು.
ಬೆಳಗಾವಿ ವೈದ್ಯಕೀಯ ವಿಜ್ಞಾನ ಮಹಾವಿಧ್ಯಾಲಯದ ವಯೋವೃದ್ದರ ಕ್ಷೇಮಾಭಿವೃದ್ಧಿ ವಿಭಾಗದಲ್ಲಿ ಬುಧವಾರ(ಮಾರ್ಚ್16) ರಂದು 12 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಕಾರ್ಬಿವ್ಯಾಕ್ಸ್ ಲಸಿಕಾ ಅಭಿಯಾನ ಹಾಗೂ 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಮುನ್ನಚ್ಚರಿಕಾ ಅಭಿಯಾನದ ಉಧ್ಘಾಟನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈಗಾಗಲೇ ಜಿಲ್ಲೆಯಲ್ಲಿ 15 ವರ್ಷ ಮೆಲ್ಪಟ್ಟ ಎಲ್ಲಾ ವಯೋಮಾನದವರಿಗೆ ಲಸಿಕಾಕರಣವನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದು, ಕಾರ್ಯಕ್ರಮ ಯಶಸ್ವಿಯಾಗಿದೆ. ಅದರಂತೆ 12 ರಿಂದ 14 ವರ್ಷ ವಯಸ್ಸಿನ ಮಕ್ಕಳಿಗೆ ಕಾರ್ಬಿವ್ಯಾಕ್ಷಿನ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಬೆಳಗಾವಿ ನಗರದ ಆಯ್ದ ಶಾಲೆಗಳ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತಿದ್ದು, ನಂತರದ ದಿನಗಳಲ್ಲಿ ಜಿಲ್ಲೆಯ ಎಲ್ಲ ಈ ವಯೋಮಾನದ ಮಕ್ಕಳಿಗೆ ಲಸಿಕಾಕರಣ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ತಿಳಿಸಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ತಾಲುಕಾ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ಮಹಾದೇವಿ ಶಿವಮೂರ್ತಿಮಠ ಹಾಗೂ ತಂಡದವರು ಮಕ್ಕಳಿಗೆ ಲಸಿಕೆಯನ್ನು ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಳಗಾವಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಾ ಡಾ.ಎಸ್.ವ್ಹಿ ಮುನ್ಯಾಳ ವಯಸಿದ್ದರು. ಜಿಲ್ಲಾ ಸಂತಾನೋತ್ಪತ್ತಿ ಹಾಗೂ ತಾಯಿ ಮಕ್ಕಳ ಅಧಿಕಾರಿಗಳಾದ ಡಾ.ಐ.ಪಿ ಗಡಾದ ಮತ್ತು ಲಸಿಕಾ ಅಧಿಕಾರಿಗಳು ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಭೆಯಲ್ಲಿ ಪಾಟೀಲ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಜಿಲ್ಲಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು, ಡಾ.ಸುಧಾಕರ್ ಜಿಲ್ಲಾ ಶಸ್ತçಚಿಕಿತ್ಸಕರಾದ ಡಾ.ಅಣ್ಣಾಸಾಹೇಬ, ಮಕ್ಕಳ ತಜ್ಞರಾದ ಡಾ.ಸಂತೋಷ ತಮಗೊಂಡ, ಬೆಳಗಾವಿ ಮಹಾನಗರ ಪಾಲಿಕೆ ವೈದ್ಯಾಧಿಕಾರಿಗಳಾದ ಡಾ.ಸಂಜಯ ಡುಮ್ಮಗೋಳ , ಬೆಳಗಾವಿ ಸಮುದಾಯ ಆರೋಗ್ಯ ಶಾಸ್ತç ವಿಭಾಗ ಮುಖ್ಯಸ್ಥರಾದ ಡಾ. ಶೋಭಾ ಕರಿಕಟ್ಟಿ. ಬೆಳಗಾವಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಬಸವರಾಜ ನಲತ್ತವಾಡ ಹಾಗೂ ಆರೋಗ್ಯ ಇಲಾಖೆಯ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶಿವಾಜಿ ಮಾಳಗೆನ್ನವರ ಮತ್ತು ಶಿಕ್ಷಣ ಇಲಾಖೆಯ ಶಿಕ್ಷಕರು, ಮೇಲ್ವಿಚಾರಕರು,ಅಧಿಕಾರಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಸಭೆಯನ್ನು ಡಾ. ಶಿವಾನಂದ ಮಾಸ್ತಿಹೋಳಿ ತಾಲೂಕಾ ಆರೋಗ್ಯಾಧಿಕಾರಿಗಳು ಬೆಳಗಾವಿರವರು ಸ್ವಾಗತಿಸಿದರು. ಬಸವರಾಜ ಪಿ ಯಲಿಗಾರ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ನಿರೂಪಿಸಿದರು. ಕಾರ್ಯಕ್ರಮವನ್ನು ವಸಂತ ಪಾತಳಿ, ಶಂಕರಗೌಡ ದೇಸಾಯಿ ಸಂಘಟಿಸಿದರು.